ಮೇಘಾ ಶೆಟ್ಟಿ ಮಾಡರ್ನ್ ಲುಕ್‌ಗೆ ಅಭಿಮಾನಿಗಳು ಫಿದಾ; ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್

By ಪೂರ್ವ

'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಯಾಗಿ ಪಡ್ಡೆ ಹೈಕಳ ಮನಗೆದ್ದ ನಟಿ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ ನಟಿ ಇದೀಗ ಸಿನಿಮಾಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಈ ಮುದ್ದು ಮುದ್ದಾದ ಚೆಲುವೆಯ ನಗು ನೋಡಲು ಅವರ ಅಭಿಮಾನಿಗಳಿಗೆ ಬಲು ಇಷ್ಟ. ಇನ್ನೂ ಸಿನಿಮಾ ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾಗಳಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

ಮೇಘಾ ಶೆಟ್ಟಿ ಆಗಾಗ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಟ್ರೆಡಿಷನಲ್ ಇರಲಿ, ಇಲ್ಲವೇ ಮಾಡರ್ನ್ ಲುಕ್ ಇರಲಿ ನಟಿ ಮಾತ್ರ ಅದ್ಭುತವಾಗಿಯೆ ಕಾಣಿಸುತ್ತಾರೆ. ಇದೀಗ ಪಿಂಕ್ ಕಲರ್ ಡ್ರೆಸ್ ತೊಟ್ಟು ಮಿರ ಮಿರನೆ ಮಿಂಚುತ್ತಿದ್ದಾರೆ. ಈ ಸ್ಯಾಂಡಲ್‌ವುಡ್ ನಟಿ ಸ್ಟೈಲಿಶ್ ಡ್ರೆಸ್‌ನಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುವಂತೆ ಇದೆ. ಹಾಗೆಯೇ ನಟಿ ಮೇಘಾ ಶೆಟ್ಟಿಯ ಫೋಟೋಗಳಿಗೆ ಸಾಕಷ್ಟು ಲೈಕ್ ಬರುತ್ತಿದೆ.

Kannada actress Megha Shetty photoshoot

ಮೇಘಾ ಶೆಟ್ಟಿ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಹಲವು ಮಂದಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಬಳಿಕ ಸಿನಿಮಾಗಳಲ್ಲೇ ಹೆಚ್ಚಾಗಿ ಆಫರ್ ಬರುತ್ತಿದೆ. ಹೀಗಾಗಿ ಮತ್ತೆ ಕಿರುತೆರೆಗೆ ಬರುವ ಸಾಹಸ ಮಾಡಿಲ್ಲ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್' , ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ 'ಕೈವ' ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದು, ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ 'ಗ್ರಾಮಾಯಣ' ಇವರ ಕೈಯಲ್ಲಿದೆ.

ಪ್ರೇಕ್ಷಕರ ಮನಗೆದ್ದ ಸುಂದರಿ

ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಹಿಂದೆ ಟ್ರೆಡಿಷನಲ್ ಲುಕ್‌ನಲ್ಲಿ ಸೀರೆಯುಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದರು. ಆಗಲೂ ಅವರ ಫ್ಯಾನ್ಸ್ ಫಿದಾ ಆಗಿದ್ದರು. ಇತ್ತೀಚೆಗಿನ ದಿನಗಳಲ್ಲಿ ಮೇಘಾ ಶೆಟ್ಟಿ ಸ್ಟೈಲಿಶ್ ಡ್ರೆಸ್ ತೊಟ್ಟು ಮಾಡರ್ನ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ. ಮೇಘಾ ಶೆಟ್ಟಿ ಫೋಟೋ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದು, ಸೋ ಕ್ಯೂಟ್, ನೈಸ್ ಎಂದೆಲ್ಲ ಕಾಮೆಂಟ್ ಮಾಡುತ್ತ ಖುಷಿ ಪಡುತ್ತಾ ಇದ್ದಾರೆ.

Kannada actress Megha Shetty photoshoot

ಫೋಟೋಗಳಿಗೆ ಅಭಿಮಾನಿಗಳು ಫಿದಾ

ಇತ್ತೀಚೆಗಿನ ದಿನಗಳಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ ಅಭಿಮಾನಿಗಳ ಖುಷಿಗಾಗಿ ಮೇಘಾ ಶೆಟ್ಟಿ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ . ಸಾಮಾಜಿಕ ಜಾಲತಾಣದಲ್ಲಿ ಮೇಘಾ ಶೆಟ್ಟಿ ಫೋಟೋಸ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಫೋಟೋ ನೋಡಿ ಬಹಳ ಖುಷಿ ಪಡುತ್ತಿದ್ದಾರೆ. ಮೇಘಾ ಶೆಟ್ಟಿ ಫೋಟೋ ನೋಡಿ ಅನೇಕ ಜನ ನಾನಾ ರೀತಿಯ ಕಾಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ನಿದ್ದೆ ಕದ್ದ ರಾಣಿ, ಕನಸಿನ ರಾಣಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಖುಷಿ ಪಡುತ್ತಿದ್ದಾರೆ.

ಮೇಘಾ ಶೆಟ್ಟಿ ಮಾತಿಗೆ ಅಭಿಮಾನಿಗಳು ಫಿದಾ

ಸೀರಿಯಲ್‌ನಲ್ಲಿ ತಮ್ಮ ನಟನೆ ಮೂಲಕ ಫೇಮಸ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಕಿರುತೆರೆ ಬಳಿಕ ಮೇಘಾ ಶೆಟ್ಟಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುತ್ತಾ ಇದ್ದಾರೆ. ಹಾಗೆಯೇ ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಸದ್ದು ಮಾಡುತ್ತಿದ್ದಾರೆ. ಮೇಘಾ ಶೆಟ್ಟಿ ತೊಟ್ಟ ಬಟ್ಟೆ ಹಾಗೂ ಕೊಟ್ಟ ಫೋಸ್ ಯಾವ ಬಾಲಿವುಡ್ ಹೀರೋಯಿನ್‌ಗೆ ಕೂಡ ಕಡಿಮೆ ಇಲ್ಲ.

More from Filmibeat

English summary
Kannada actress Megha Shetty photo shoot in modern look went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X