ಸೀರೆಯಲ್ಲಿ ಮಿಂಚಿದ ನೀರೆ, ಅಭಿಮಾನಿಗಳಿಗೆ ಕಿಕ್ಕೇರಿಸಿದ ನಮ್ರತಾ ಗೌಡ ಸಿಂಪಲ್ ಲುಕ್..!
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ, ಆಗಾಗ ತನ್ನ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಅಭಿಮಾನಿಗಳ ಮನದಲ್ಲಿ ಚಿಟ್ಟೆಯನ್ನು ಬಿಟ್ಟ ಬೆಡಗಿ ಬೇರೆ ಯಾರು ಅಲ್ಲ ಅವರೇ ನಮೃತಾ ಗೌಡ. ನಾಗಿಣಿ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ಈ ಚೆಂದುಳ್ಳಿ ಚೆಲುವೆ ಇದೀಗ ಮತ್ತೊಮ್ಮೆ ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಎಲ್ಲರ ಕಣ್ಣರಳಿಸಿದ್ಧಾರೆ. ಪಡ್ಡೆ ಹುಡುಗರಂತೂ ಈ ಫೋಟೋ ನೋಡಿ ಕಳೆದು ಹೋಗಿದ್ದಾರೆ. ಇದರ ನಡುವೆ ಯುವತಿಯರ ಕಣ್ಣು ನಮೃತಾ ಗೌಡ ತೊಟ್ಟ ಬ್ಲೌಸ್ ಮೇಲೆ ಬಿದ್ದಿದೆ.
ಪಾಚಿ ಪಚ್ಚೆ ಬಣ್ಣದ ತೆಳುವಾದ ಸೀರೆ ಉಟ್ಟುಕೊಂಡು ನಮೃತಾ ಗೌಡ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು ಸಿಂಪಲ್ ಲುಕ್ ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಸಾರಿಯಲ್ಲಿ ಬಹಳ ಅದ್ಭುತವಾಗಿಯೇ ನಮ್ರತಾ ಗೌಡ ಕಾಣಿಸಿಕೊಂಡಿದ್ದಾರೆ. ಇನ್ನು ನಮೃತಾ ಗೌಡ ನೋಡಿದ ಅಭಿಮಾನಿಗಳು ಮಾತ್ರ ಬೆರಗಾಗಿದ್ದಾರೆ. ನಮೃತಾ ಗೌಡ ಬಾರ್ಡರ್ ಇರುವ ಸಾರಿ ಹಾಗೆಯೇ ಮ್ಯಾಚಿಂಗ್ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕೂದಲನ್ನು ಫ್ರೀಯಾಗಿ ಬಿಟ್ಟಿರುವ ಇವರು ಸಿಂಪಲ್ ಆಗಿ ಮೇಕಪ್ ಅನ್ನು ಮಾಡಿಕೊಂಡಿದ್ದಾರೆ.

ಸುಂದರವಾದ ಒಂದು ಝುಮುಕಿ ಕೂಡಾ ಧರಿಸಿ ಬಹಳ ಅದ್ಭುತವಾಗಿ ನಮ್ರತಾ ಕಾಣಿಸಿಕೊಂಡಿದ್ಧಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ಆಗಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವ ನಟಿಯ ಫೋಟೋಗೆ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ ಬಂದಿದೆ. ಹಾಗೆಯೇ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ, ನಿಮ್ಮ ಕಣ್ಣೊಟಕ್ಕೆ ನಾವು ಫಿದಾ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇನ್ನು ನಮ್ರತಾ ಗೌಡ ಸೌಂದರ್ಯಕ್ಕೆ ಹುಡುಗರು ಮಾತ್ರ ಅಲ್ಲದೆ ಹುಡುಗಿಯರು ಕೂಡ ಮನಸೋತು ಹೋಗಿದ್ದಾರೆ.
ಕಿವಿಯೋಲೆಯಿಂದ ನಮೃತಾ ಸೌಂದರ್ಯ ದುಪ್ಪಟ್ಟು
ಇನ್ನು ನಮೃತಾ ಗೌಡ ಡೀಪ್ ನೆಕ್ಸ್ಟೈಲ್ ಮಾಡರ್ನ್ ಲುಕ್ ಕೊಟ್ಟಿದೆ. ಹಾಗೆಯೇ ಕಿವಿಗೆ ಹಾಕಿದ್ದ ಜುಮಿಕಿ ನಮ್ರತಾ ಸೌಂದರ್ಯವನ್ನು ದುಪ್ಪಟ್ಟು ಮಾಡಿದೆ ಎಂದು ಹೇಳಿದರೆ ತಪ್ಪಾಗದು. ಇನ್ನು ನಾಗಿಣಿ ಧಾರಾವಾಹಿಯಲ್ಲಿ ನಟನೆ ಮಾಡಿ ಎಲ್ಲರ ಮನಸನ್ನು ಗೆದ್ದಿದ್ದಾರೆ ಈ ನಟಿ. ನಟಿಯ ನೋಟಕ್ಕೆ ಫಿದಾ ಆಗದವರೆ ಇಲ್ಲ. ಬಿಗ್ ಬಾಸ್ ಸೀಸನ್ 10 ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ನಮ್ರತಾ ಕೊನೆವರೆಗೆ ಮನರಂಜನೆಯ ರಸದೌತಣವನ್ನೂ ಬಡಿಸಿದ್ದರು. ಬಿಗ್ ಬಾಸ್ ನಲ್ಲಿ ತೀವೃ ಪೈಪೋಟಿಯನ್ನು ನೀಡಿದರು.

ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿ
ಇನ್ನು ಹಲವು ಜಾಹೀರಾತಿನಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ನಮೃತಾ ಗೌಡ ಅಭಿಮಾನಿಗಳು ನಟಿಯನ್ನು ಬಿಗ್ ಸ್ಕ್ರೀನ್ ನಲ್ಲಿ ಯಾವತ್ತೂ ನೋಡುತ್ತೇವೆಯೋ ಎಂದು ಕಾದು ಕುಳಿತಿದ್ದಾರೆ. ಹಾಗೆಯೇ ನಮೃತ ಗೌಡ ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಫೇಮಸ್ ಆದ ನಟಿ ಎಂದರೆ ತಪ್ಪಾಗದು. ಇದೀಗ ಜಾಲಿ ಮೂಡ್ ನಲ್ಲಿ ಇರುವ ನಟಿಗೆ ಆಫರ್ ಗಳು ಹೆಚ್ಚಾಗುತ್ತಿವೆ.


Click it and Unblock the Notifications











