Neha Gowda: ಕೊಡಗಿನ ಪ್ರಕೃತಿಯ ಮಡಿಲಿನಲ್ಲಿ ಗರ್ಭಿಣಿ ನೇಹಾ ಗೌಡ; ಏನಂದ್ರು ನೆಟ್ಟಿಗರು?
ಎಲ್ಲರಿಗೂ ಗೊತ್ತಿರುವ ಹಾಗೆ ನೇಹಾ ಗೌಡ ತಾಯಿಯಾಗುತ್ತಿರುವ ಖುಷಿಯಲ್ಲಿ ಇದ್ದಾರೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ನೇಹಾ ಗೌಡ ಪ್ರೆಗ್ನೆನ್ಸಿಯ ದಿನಗಳನ್ನು ಅನುಭವಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಕೊಡಗಿನಂತಹ ಪ್ರಕೃತಿಯ ಮಡಿಲಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ನಟಿ ನೇಹಾ ಗೌಡ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮುಖಾಂತರ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೇಹಾ ಗೌಡಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟ ಧಾರಾವಾಹಿಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗದು. ಈ ಧಾರಾವಾಹಿ 2100ಕ್ಕೂ ಅಧಿಕ ಸಂಚಿಕೆಗಳನ್ನು 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಯಶಸ್ವಿಯಾಗಿ ಪೂರೈಸಿತು. ಆರೂವರೆ ವರ್ಷಗಳ ಕಾಲ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸುದೀರ್ಘವಾಗಿ ಪ್ರಸಾರ ಕಂಡಿದೆ.

ಇದಾದ ಬಳಿಕ ಹೆಚ್ಚಾಗಿ ನೇಹಾ ಗೌಡ ಕೆಲವು ಧಾರಾವಾಹಿಗಳಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಅದು ಹೊರತು ಬೇರೆ ಧಾರಾವಾಹಿಗಳಲ್ಲಿ ಅಷ್ಟಾಗಿ ನಟನೆ ಮಾಡಿಲ್ಲ. ಇನ್ನೂ ನೇಹಾ ಹಾಗೂ ಚಂದನ್ ದಂಪತಿ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನೇಹಾ ಹಾಗೂ ಚಂದು ದಂಪತಿ ಮದುವೆಯಾದ 6 ವರುಷಗಳ ಬಳಿಕ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ನೇಹಾ ಗೌಡ ಇತ್ತೀಚೆಗೆ ಹೆಚ್ಚಾಗಿ ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಬಿಡುವಿನ ಸಮಯವನ್ನು ಗೆಳತಿಯರ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತ ಚಂದನ್ ಕೂಡ 'ಅಂತರಪಟ' ಎನ್ನುವ ಧಾರಾವಾಹಿಯ ಮೂಲಕ ನಾಯಕ ನಟನಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನೂ ನೇಹಾ ಗೌಡ ಗರ್ಭಿಣಿ ಆಗಿರುವ ಕಾರಣ ಬಹಳಷ್ಟು ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ನೇಹಾ ಹಾಗೂ ಆಕೆಯ ಗೆಳತಿಯರು ಮಡಿಕೇರಿಗೆ ಟ್ರಿಪ್ ಹೋಗಿದ್ದಾರೆ. ಅಲ್ಲಿನ ಪ್ರಕೃತಿಯ ಮಡಿಲಿನಲ್ಲಿ ನೇಹಾ ಗೌಡ ಎಂಜಾಯ್ ಮಾಡುತ್ತಿದ್ದಾರೆ. ಪ್ರೆಗ್ನೆನ್ಸಿ ಬ್ಲಿಸ್ ಎಂದು ಅಮ್ಮನಾಗುತ್ತಿರುವ ಖುಷಿಯನ್ನು ಹಂಚಿಕೊಂಡಿರುವ ನೇಹಾ, ತಮ್ಮ ಫ್ರೆಂಡ್ಸ್ ಜೊತೆಗೆ ಮಂಜಿನ ನಗರಿ ಮಡಿಕೇರಿಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಇನ್ನೂ ಕೊಡಗಿನಲ್ಲಿರುವ ಫೋಟೋವನ್ನು ನಟಿ ನೇಹಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬೇಬಿ ಬಂಪ್ ಪೋಸ್ ಕೊಟ್ಟ ನಟಿ
ಹಾಗೆಯೇ ಆ ಫೋಟೋಗೆ ಸಾಕಷ್ಟು ಲೈಕ್ ಕಾಮೆಂಟ್‌ಗಳು ಬರುತ್ತಿದೆ. ಬೇಬಿ ಬಂಪ್ ಫೋಟೋ ತೆಗೆಸಿಕೊಂಡಿರುವ ಫೋಟೋ ನೋಡಿ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಇನ್ನೂ ಫೋಟೋ ಪೋಸ್ಟ್ ಮಾಡಿದ ಬಳಿಕ ಅದರ ಜೊತೆ ಒಂದು ಬರಹವನ್ನು ಕೂಡ ಇವರು ಬರೆದುಕೊಂಡಿದ್ದಾರೆ. "ಕೂರ್ಗ್‌ನಲ್ಲಿ ವಿಶ್ರಾಂತಿಯ ವಿಹಾರವನ್ನು ಆನಂದಿಸುತ್ತಿದ್ದೇನೆ. ಪ್ರಕೃತಿಯು ಪ್ರಶಾಂತತೆಯಿಂದ ಸುತ್ತುವರಿದಿದೆ. ಈ ಸುಂದರ ಅನುಭವವನ್ನು, ಇಂತಹ ವಿಶೇಷ ಸಮಯದಲ್ಲಿ ಪ್ರತಿ ಕ್ಷಣವೂ ಸವಿಯುತ್ತಿದ್ದೇನೆ" ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಗೆಳತಿಯರೊಂದಿಗೆ ಖುಷಿಯಲ್ಲಿರುವ ನಟಿ
ಇನ್ನೂ ಟ್ರಿಪ್‌ನಲ್ಲಿ ಸೋನು ಗೌಡ ಜೀವದ ಗೆಳತಿ ಅನುಪಮ ಗೌಡ ಹಾಗೂ ಆಕೆಯ ಅಕ್ಕ ಸೋನು ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನೂ ಹಲವು ಗೆಳತಿಯರೊಂದಿಗೆ ನೇಹಾ ಗೌಡ ಮಜಾ ಮಾಡುತ್ತಿದ್ದಾರೆ. ಹಾಗೆಯೇ ಅನೇಕ ಜನ ಜಾಗೃತೆಯಾಗಿರಿ ಎಂದು ಮೆಸೇಜ್ ಕಳುಹಿಸಿದ್ದಾರೆ.


Click it and Unblock the Notifications











