ತಮಿಳಿನ ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಕನ್ನಡದ ಗೊಂಬೆ ನೇಹಾ ಗೌಡ

By ಪ್ರಿಯಾ ದೊರೆ

ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯತೆ ಪಡೆದಿರುವ ನೇಹಾ ಗೌಡ, ತೆಲುಗು ಹಾಗೂ ತಮಿಳಿನ ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದಾರೆ. ಧಾರಾವಾಹಿ ಅಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ನೇಹಾ ಗೌಡ ಅವರು ಹಲವು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.

ತಮಿಳಿನ ಕಿರುತೆರೆ ಲೋಕದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಖ್ಯಾತಿಯ ಗೊಂಬೆ ಅಲಿಯಾಸ್ ನೇಹಾ ಗೌಡ ಅವರ ವಯಕ್ತಿಕ ಜೀವನ ಹಾಗೂ ಕಿರುತೆರೆ ಪಯಣದ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ..

ನೇಹಾ ಗೌಡ ಅವರ ಮೊದಲ ಸೀರಿಯಲ್ ತೆಲುಗಿನ 'ಸ್ವಾತಿ ಚುನುಕುಲು'. ಈ ಧಾರಾವಾಹಿ ನೇಹಾ ಗೌಡ ಅವರಿಗೆ ಅಷ್ಟೇನು ಹೆಸರು ಕೊಡದಿದ್ದರೂ, ಇವರ ನಟನೆಗೆ ಮನ ಸೋಲದವರಿಲ್ಲ. ಇದಾದ ಬಳಿಕ ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಮೇಲೆ ಕಿರುತೆರೆಯಲ್ಲಿ ಮುಂದುವರೆಯುವ ಆಸೆ ಏನೂ ಇರಲಿಲ್ಲ. ಓದು, ಕೆರಿಯರ್ ಎಂದು ನೇಹಾ ತಮ್ಮ ಲೈಫ್ ನಲ್ಲಿ ಬ್ಯುಸಿಯಾಗಿದ್ದರು.

ಪಾತ್ರ ನೋಡಿ ಲಕ್ಷ್ಮೀ ಬಾರಮ್ಮ ಒಪ್ಪಿಕೊಂಡ ಗೊಂಬೆ

ಪಾತ್ರ ನೋಡಿ ಲಕ್ಷ್ಮೀ ಬಾರಮ್ಮ ಒಪ್ಪಿಕೊಂಡ ಗೊಂಬೆ

ಬಿಕಾಂ ಓದುತ್ತಿರುವಾಗ ನೇಹಾ ಗೌಡ ಅವರು ಫ್ಯಾಷನ್ ಡಿಸೈನರ್ ಆಗಬೇಕು ಎಂದು ಆಸೆ ಪಟ್ಟಿದ್ದರಂತೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಪಾತ್ರ ಚೆನ್ನಾಗಿದೆ ಎಂದು ನಟಿಸಲು ಮುಂದಾದರಂತೆ. ಆದರೆ ಈ ಧಾರಾವಾಹಿ ಮಾಡುವಾಗ ಕಿರುತೆರೆಯಲ್ಲೇ ಮುಂದುವರೆಯಬೇಕು ಎಂಬ ಆಲೋಚನೆ ನೇಹಾ ಗೌಡ ಅವರಿಗೆ ಇರಲಿಲ್ಲ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಸರಿ ಸುಮಾರು 6 ವರ್ಷಗಳ ಕಾಲ ಪ್ರಸಾರವಾಗಿತ್ತು. ಇದರಲ್ಲಿನ ನೇಹಾ ಅವರ ಗೊಂಬೆಯ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ನೇಹಾ ಅವರ ಅಭಿನಯವನ್ನು ಇಷ್ಟಪಟ್ಟವರು ಸೋಶಿಯಲ್ ಮೀಡಿಯಾದಲ್ಲಿ ನೇಹಾ ಹೆಸರಲ್ಲಿ ಫ್ಯಾನ್ಸ್ ಪೇಜ್ ಗಳನ್ನು ಕೂಡ ತೆರೆದಿದ್ದಾರೆ.

ಕಿರುಚಿತ್ರ, ರಿಯಾಲಿಟಿ ಶೋಗಳಲ್ಲೂ ಭಾಗಿ

ಕಿರುಚಿತ್ರ, ರಿಯಾಲಿಟಿ ಶೋಗಳಲ್ಲೂ ಭಾಗಿ

ನೇಹಾ ಗೌಡ ಅವರು ಕೇವಲ ಸೀರಿಯಲ್ ಅಷ್ಟೇ ಅಲ್ಲದೇ, ಕಿರುಚಿತ್ರ ಹಾಗೂ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದಾರೆ. ಟೇಕ್ ಆಫ್ ಎಂಬ ಶಾರ್ಟ್ ಮೂವಿಯಲ್ಲಿ ನೇಹಾ ನಟಿಸಿದ್ದು, ಇದರಲ್ಲಿ ಅವರ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಕೂಡ ನೇಹಾ ಗೌಡ ಕೆಲಸ ಮಾಡಿದ್ದಾರೆ. ಇನ್ನು ಕನ್ನಡದ ರಿಯಾಲಿಟಿ ಶೋನಲ್ಲೂ ನೇಹಾ ಗೌಡ ಭಾಗವಹಿಸಿದ್ದರು. ಕಳೆದ ವರ್ಷ ಪ್ರಸಾರವಾಗಿದ್ದ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಭಾಗವಹಿಸಿದ್ದರು.

ಗೆಳೆಯನನ್ನು ವರಿಸಿದ ನೇಹಾ

ಗೆಳೆಯನನ್ನು ವರಿಸಿದ ನೇಹಾ

ಫೆಬ್ರವರಿ 18, 2018ರಂದು ನೇಹಾ ಗೌಡ ಮದುವೆಯಾದರು. ಬೆಂಗಳೂರಿನಲ್ಲಿ ಚಂದನ್ ಜೊತೆ ಸಪ್ತಪದಿ ತುಳಿದ ನೇಹಾ ಗೌಡ ಅವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಚಂದನ್ ಹಾಗೂ ನೇಹಾ ಬಾಲ್ಯದ ಸ್ನೇಹಿತರು. ಇಬ್ಬರು ಪ್ರೀತಿಸಿ, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಪ್ರಿಕೆಜಿಯಲ್ಲಿದ್ದಾಗ ಚಂದನ್ ನನ್ನ ಶತ್ರು ಆಗಿದ್ದ ಎಂದು ಅವರೇ ಹೇಳಿಕೊಂಡಿದ್ದರು, ಆಮೇಲೆ ಗೆಳೆಯನಾಗಿ ಕ್ರಶ್ ಆಗಿ, ಲವ್ವರ್ ಆಗಿ ಈಗ ಗಂಡನಾಗಿದ್ದಾನೆ ಎಂದು ಹೇಳಿದ್ದಾರೆ. ಇನ್ನು ಚಂದನ್ ಸದ್ಯ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಸ್ಫರ್ಧಿಯಾಗಿದ್ದು, ಮೇಕಪ್ ಹಾಗೂ ಡ್ರೆಸ್ಸಿಂಗ್ ವಿಚಾರದಲ್ಲಿ ತುಂಬಾನೇ ಪರ್ಫೆಕ್ಟ್ ಅಂತೆ.

ಪಾವಂ ಗಣೇಶನ್ ನಲ್ಲಿ ನಟನೆ

ಪಾವಂ ಗಣೇಶನ್ ನಲ್ಲಿ ನಟನೆ

ಸದ್ಯ ನೇಹಾ ಗೌಡ ಪಾವಂ ಗಣೇಶನ್ ಧಾರಾವಾಹಿಯ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಮದುವೆಯಾದ ಮೇಲೆ ಫಾರಿನ್ ನಲ್ಲಿ ನೆಲೆಸಿದ್ದ ನೇಹಾ ಗೌಡ ಬೇಗ ಮತ್ತೆ ವಾಪಸ್ ಬಂದಿದ್ದು, ರಾಜಾ ರಾಣಿ ಶೋ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದರು. ಸದ್ಯ ಅವರು ದೊಡ್ಡ ಗ್ಯಾಪ್ ಬಳಿಕ ಪಾವಂ ಗಣೇಶನ್ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನೇಹಾರದ್ದು ಸರಳವಾಗಿ ಇರುವ ಹುಡುಗಿ ಪಾತ್ರ. ಇನ್ನು ನೇಹಾ ಗೌಡ ಮತ್ತೆ ಕನ್ನಡದ ಧಾರಾವಾಹಿಗಳಲ್ಲಿ ಯಾವಾಗ ನಟಿಸುತ್ತಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

More from Filmibeat

English summary
Neha Gowda presently acting in pavam ganeshan serial. here isher small screen journey story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X