ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಂಡ ನೇಹಾ ಗೌಡ; "ಮಸ್ತ್ ಹುಡುಗಿ.. ಬೊಂಬಾಟ್ ಹುಡುಗ" ಎಂದ ನೆಟ್ಟಿಗರು

By ಪೂರ್ವ

ಕನ್ನಡ ಕಿರುತೆರೆಯ ನಟಿ ನೇಹಾ ಗೌಡ ಇದೀಗ ತುಂಬ ಗರ್ಭಿಣಿ. ಈ ಸಂದರ್ಭದಲ್ಲಿ ನಾನಾ ಬಯಕೆಗಳು ಆಗುವುದು ಸಹಜ. ಈ ಬೆನ್ನಲೇ ನೇಹಾ ಗೌಡರಿಗೆ ನಾನಾ ಬಗೆಯ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ತನ್ನ ಪ್ರಗ್ನೆನ್ಸಿ ಸಮಯದಲ್ಲಿ ಹೆಚ್ಚೆಚ್ಚು ಫೋಟೋ ತೆಗೆಸಿಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಾರೆ. ಇದೀಗ ನೇಹಾ ಗೌಡ ರೆಟ್ರೋ ಸ್ಟೈಲಿನಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಿರುತೆರೆ ನಟಿ ನೇಹಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪತಿ ಚಂದನ್ ಗೌಡ ಜೊತೆ ನೇಹಾ ಗೌಡ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದಾರೆ. ಈ ಫೋಟೊಗಳಿಗೆ ಅವರ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. "ಮಸ್ತ್ ಹುಡುಗಿ.. ಬೊಂಬಾಟ್ ಹುಡುಗ", "ಬ್ಯೂಟಿಫುಲ್.. ಸಖತ್ತಾಗಿ ಕಾಣಿಸುತ್ತಿದ್ದೀರ" ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Kannada Actress Neha Gowda new retro style pregnancy photo shoot

ಚಂದನ್ ಗೌಡ ಅವರಿಗೆ ತನ್ನ ಹೆಂಡತಿ ಎಂದರೆ ಬಹಳ ಅಚ್ಚುಮೆಚ್ಚು. ಪ್ರೀತಿಸಿ ಮದುವೆ ಆದ ಈ ಜೋಡಿಯನ್ನು ನೋಡುವುದೇ ಒಂದು ಖುಷಿ. ನೇಹಾ ಗೌಡ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಫೇವರಿಟ್ ಆದರು. ಅದೇ ರೀತಿಯ ಪತಿ ಚಂದನ್ ಗೌಡ ಕೂಡ 'ಅಂತರಪಟ' ಧಾರಾವಾಹಿಯ ಮೂಲಕ ಮಿಂಚಿ ಎಲ್ಲರಿಗೂ ಕೂಡ ಅಚ್ಚುಮೆಚ್ಚಿನ ನಾಯಕ ನಟ ಎನಿಸಿಕೊಂಡಿದ್ದಾರೆ.

ನೇಹಾ ಗೌಡ ಬೇಬಿ ಬಂಪ್ ಫೋಟೋ ವೈರಲ್

ನೇಹಾ ಗೌಡ ಅವರು ಕೈಗೆ ಗ್ಲೌಸ್ ಹಾಕಿ ಕ್ರೀಮ್ ಕಲರ್ ಮುತ್ತಿನ ಮಣಿ ಯ ಬಳೆಯನ್ನು ಕೈಯಲ್ಲಿ ಹಾಕಿಕೊಂಡಿದ್ದಾರೆ. ಹಾಗೆಯೇ ಕಪ್ಪು ಬಣ್ಣದ ಸಾರಿ, ಅದರ ಮೇಲೆ ಕಂಡು ಬಣ್ಣದ ಹೂವಿನ ಚಿತ್ರವಿದೆ. ಹಾಗೆಯೇ ಸ್ಲೀವ್ ಲೆಸ್ ಬಾಸ್ ತೊಟ್ಟು , ಕಿವಿಗೆ ಸಿಂಪಲ್ ಆಗಿರುವ ಕಿವಿಯೊಲೆಯನ್ನು ಹಾಕಿ ಕೊರಳಿಗೆ ಮುತ್ತಿನ ಹಾರವನ್ನು ಹಾಕಿಕೊಂಡು ಕಣ್ಣಿಗೆ ಕಪ್ಪು ಬಣ್ಣದ ಕನ್ನಡಕ ಹಾಕಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ.

ಹೆಂಡತಿಗೆ ಸಾಥ್ ನೀಡಿದ ಚಂದನ್

ಇನ್ನು ಚಂದನ್ ಕೂಡ ಹೆಂಡತಿಗೆ ಸಾಥ್ ನೀಡಿದ್ದಾರೆ . ಈ ಇಬ್ಬರು ಜೋಡಿಗಳು ಬಹಳ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಕೆಲವರು ನೇಹಾ ಗೌಡ ಅವರು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳಿದರೆ, ಇನ್ನು ಕೆಲವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಸೀರಿಯಲ್ ಪ್ರೇಮಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Kannada Actress Neha Gowda new retro style pregnancy photo shoot
Read more about: actress poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X