ಬ್ಯಾಕ್ ಲೆಸ್ ಡ್ರೆಸ್ ನಲ್ಲಿ 'ಮಂಗಳಗೌರಿ' ಕಾವ್ಯಶ್ರೀ ಮಿಂಚಿಂಗ್; ನೆಟ್ಟಿಗರು ಏನಂದ್ರು?
ಕಾವ್ಯಾಶ್ರೀ ಗೌಡ ಹೆಚ್ಚು ಕಾಣಿಸಿಕೊಂಡಿದ್ದೆ ಟ್ರೆಡಿಷನಲ್ ಲುಕ್‌ನಲ್ಲಿ. ಆಗಾಗ ಮಾಡ್ರನ್ ಡ್ರೆಸ್ ಹಾಕುದ್ರು ತೀರಾ ಎಕ್ಸ್ ಪೋಸ್ ಇರೋದಿಲ್ಲ. ಹೀಗಾಗಿ ಫ್ಯಾನ್ಸ್ ಮಂಗಳ ಗೌರಿಯನ್ನ ಹಾಗೇ ಇಷ್ಟ ಪಟ್ಟಿದ್ದರು. ಆದರೆ ದಿಢೀರನೇ ಒಂದು ವಿಡಿಯೋ ಹಾಕಿ ಎಲ್ಲರ ಚಿತ್ತ ಕದ್ದಿದ್ದಾರೆ. ಇದು ಕಾವ್ಯಾನಾ ಅಂತ ಕಮೆಂಟ್ ಹಾಕುವಷ್ಟು. ನೆಗೆಟಿವ್ ಕಮೆಂಟ್ ನಡುವೆ ಕಾವ್ಯಾ ಹಾರ್ಟ್ ಸಂಪಾದಿಸಿರುವುದೇ ಹೆಚ್ಚು.
'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಮಿಂಚಿದ್ದ ಕಾವ್ಯಾ, ಬಳಿಕ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಒಂದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು, ತಮ್ಮ ಮುಗ್ಧತೆ, ದಡ್ಡ ದಡ್ಡ ಪ್ರಶ್ನೆಗಳಿಂದಾನೇ ಎಲ್ಲರ ಫ್ರೆಂಡ್ ಆಗಿದ್ದರು. ಇದೀಗ ಕೇರಳ ಟ್ರಿಪ್ ನಲ್ಲಿರುವ ಕಾವ್ಯಾ ಬ್ಯಾಕ್ ಲೆಸ್ ಡ್ರೆಸ್ ಹಾಕಿ ಗಮನ ಸೆಳೆದಿದ್ದಾರೆ.

ಕಾವ್ಯಾ ಹೊಸ ರೀಲ್ಸ್
ಕಾವ್ಯಾ ಬಿಗ್ ಬಾಸ್ ಆದ್ಮೇಲೆ ಮತ್ತೊಂದು ಧಾರಾವಾಹಿಯ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಆ ಸೀರಿಯಲ್ ಲಾಂಚ್ ಆಗಲಿಲ್ಲ. ನಂತರ ಯಾವುದೇ ಸೀರಿಯಲ್‌ನಲ್ಲೂ ಕಾಣಿಸಿಕೊಳ್ಳಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಇದೀಗ ಬ್ಯಾಕ್ ಲೆಸ್ ಡ್ರೆಸ್‌ನಲ್ಲಿ ಆಕಾಶದಲ್ಲಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋಗೆ ಕಮೆಂಟ್ಸ್‌ಗಳ ಸುರಿಮಳೆ ಸುರಿದಿದೆ. ಅದರಲ್ಲೂ ಒಂದಷ್ಟು ಮಂದಿ ಸೀರೆಯಲ್ಲಿಯೇ ಚೆಂದ, ಈ ರೀತಿಯ ಡ್ರೆಸ್ ಬೇಕಾ ಎಂದು ಪ್ರಶ್ನೆ ಮಾಡಿದ್ದರೆ, ಬಹಳಷ್ಟು ಮಂದಿ ಹಾರ್ಟ್ ಹಾಕಿ ಸಂಭ್ರಮಿಸಿದವರೇ ಹೆಚ್ಚು.
ಕೇರಳ ಪ್ರವಾಸದಲ್ಲಿ ಕಾವ್ಯಾ
ಕಾವ್ಯಾಶ್ರೀ ಸಿಕ್ಕಾಪಟ್ಟೆ ಟ್ರಾವೆಲ್ ಫ್ರೀಕ್. ಸದಾ ಅಲ್ಲಿ ಇಲ್ಲಿ ಓಡಾಡ್ತಾ ಇರುತ್ತಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೇ ಅದು ಅರ್ಥವಾಗುತ್ತದೆ. ಈಗ ಕೇರಳ ಟ್ರಿಪ್ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕೇಬಲ್ ಕಾರ್ ಎಕ್ಸ್‌ಪಿಯರೆನ್ಸ್ ಮಾಡಿದ್ದು, ಇದೇ ವಿಡಿಯೋದಲ್ಲಿ ಬ್ಯಾಕ್ ಎಕ್ಸ್‌ಪೋಸ್ ಇರುವಂತ ಡ್ರೆಸ್ ಹಾಕಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ಸ್ ಪಡೆಯುತ್ತಿದೆ.
ಸಿಕ್ಕಾಪಟ್ಟೆ ಫುಡ್ಡಿ ಕಾವ್ಯಾ
ಕಾವ್ಯಾಶ್ರೀ ಗೌಡ ಟ್ರಾವೆಲ್ ಮಾತ್ರವಲ್ಲ ಫುಡ್ ವಿಚಾರದಲ್ಲೂ ಅಷ್ಟೇ ಎಂಜಾಯ್ ಮಾಡ್ತಾರೆ. ಅಡುಗೆ ಮಾಡೋದಾಗಲಿ, ಹೊಸದಾಗಿ ಟೇಸ್ಟ್ ಮಾಡೋದಾಗಿ ತುಂಬಾ ಖುಚಿ ಪಟ್ಟು ಮಾಡುತ್ತಾರೆ. ಅವರದ್ದೇ ಬ್ಲಾಗ್‌ನಲ್ಲಿ ಒಂದಷ್ಟು ದಿನ ಅಡುಗೆ ಮಾಡುವ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಇದ್ದರು. ತಮ್ಮ ಸೆಟ್‌ನವರಿಗೆ ಯುವದೋಪನ್ನು ಒಮ್ಮೆ ಮಾಡಿಕೊಂಡು ಹೋಗಿ ಕೊಟ್ಟೊದ್ದರು. ಮಧ್ಯರಾತ್ರಿಯೆಲ್ಲಾ ಮಸಾಲೆ ದೋಸೆ ತಿನ್ನೋಕೆ ಹೋಗ್ತಾರೆ. ಫುಡ್ ವಿಚಾರದಲ್ಲಿ ಅಷ್ಟು ಕ್ರೇಜಿ ಅಂತ ಕಾಣಿಸುತ್ತೆ. ಇದು ಕೂಡ ಅವರ ಸೋಷಿಯಲ್ ಮೀಡಿಯಾ ನೋಡಿದವರಿಗೆ ಅರ್ಥವಾಗುತ್ತದೆ.
ಆಂಕರ್ ಆಗಿದ್ದ ಗೌರಿ ?
ಇನ್ನು ಕಾವ್ಯಾಶ್ರೀ ಗೌಡ ನಟನೆಗೆ ಬರುವುದಕ್ಕೂ ಮುನ್ನ ಆಂಕರ್ ಆಗಿದ್ದವರು. ಖಾಸಗಿ ಚಾನೆಲ್, ಲೋಕಲ್ ಚಾನೆಲ್ ನಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಕಲರ್ಸ್ ಕನ್ನಡದಲ್ಲಿ ಮಂಗಳಗೌರಿ ಮದುವೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ಸದ್ಯ ಸೋಷಿಯಲ್ ಮೀಡಿಯಾ, ಯೂಟ್ಯೂಬ್‌ನಲ್ಲಿ ತಮ್ಮದೇ ಬ್ಲಾಗ್ ಮಾಡಿಕೊಂಡು ಇದ್ದಾರೆ.


Click it and Unblock the Notifications











