ರಶ್ಮಿಕಾ ಆಯ್ತು, ಈಗ ಪೂಜಾ ಗಾಂಧಿ 'ಶೋ ಆಫ್' ಎಂದು ಕರೆದಿದ್ದು ಯಾರಿಗೆ.?

By Harshitha

ಖಾಸಗಿ ವಾಹಿನಿಯ 'ಟಾಕ್ ಶೋ' ಒಂದರ 'Rapid Fire' ರೌಂಡ್ ನಲ್ಲಿ ಒಲ್ಲದ ಮನಸ್ಸಿನಿಂದ ನಟಿ ರಶ್ಮಿಕಾ ಮಂದಣ್ಣ ''ಯಶ್ ರವರಿಗೆ ಮಿಸ್ಟರ್ ಶೋ ಆಫ್'' ಎಂದು ಕರೆದು ವಿವಾದದ ಕೇಂದ್ರ ಬಿಂದು ಆಗಿದ್ದರು.

ಎಂಟು ತಿಂಗಳ ಹಿಂದೆ ರಶ್ಮಿಕಾ ಆಡಿದ ಈ ಮಾತುಗಳು ಮೊನ್ನೆಮೊನ್ನೆಯಷ್ಟೇ ದೊಡ್ಡ ಅಲ್ಲೋಲ ಕಲ್ಲೋಲಕ್ಕೆ ಸಾಕ್ಷಿ ಆಗಿತ್ತು. ಇದೀಗ ಈ ಘಟನೆಯನ್ನ ನಾವು ರಿವೈಂಡ್ ಮಾಡಲು ಕಾರಣ 'ಮಳೆ ಹುಡುಗಿ' ಪೂಜಾ ಗಾಂಧಿ.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ಒಬ್ಬರಿಗೆ 'ಶೋ ಆಫ್' ಎಂದು ಹೇಳಿದ್ದಾರೆ. ಯಾರದು.? ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ, ಪೂರ್ತಿ ಮ್ಯಾಟರ್ ಓದಿರಿ...

ಇಲ್ಲೂ 'Rapid Fire' ರೌಂಡ್

ಇಲ್ಲೂ 'Rapid Fire' ರೌಂಡ್

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ಹಾಗೂ ನಟಿ ಶುಭಾ ಪೂಂಜಾ ಭಾಗವಹಿಸಿದ್ರು. ಹರಟೆ, ಆಟಗಳ ನಂತರ ನಿರೂಪಕ ಅಕುಲ್ ಬಾಲಾಜಿ 'Rapid Fire' ರೌಂಡ್ ಶುರು ಮಾಡಿದರು.

ಪೂಜಾ ಗಾಂಧಿಗೆ ಬೆಂಕಿ ಚೆಂಡು

ಪೂಜಾ ಗಾಂಧಿಗೆ ಬೆಂಕಿ ಚೆಂಡು

''ಈ ಪದಗಳನ್ನು ಕೇಳಿದ ಕೂಡಲೆ ನಿಮ್ಮ ಮನಸ್ಸಿಗೆ ಬರುವ ವ್ಯಕ್ತಿಗಳು ಯಾರು.?'' ಎಂದು ನಿರೂಪಕ ಅಕುಲ್ ಬಾಲಾಜಿ, ಪೂಜಾ ಗಾಂಧಿಗೆ ಕೇಳಿದರು.

ಡೌನ್ ಟು ಅರ್ಥ್ ಯಾರು.?

ಡೌನ್ ಟು ಅರ್ಥ್ ಯಾರು.?

'ಡೌನ್ ಟು ಅರ್ಥ್' ಎಂದು ಅಕುಲ್ ಹೇಳುತ್ತಿದ್ದಂತೆಯೇ, ಹಿಂದು ಮುಂದು ಯೋಚನೆ ಮಾಡದೆ 'ಶಿವರಾಜ್ ಕುಮಾರ್' ಎಂದು ಹೇಳಿಬಿಟ್ಟರು ನಟಿ ಪೂಜಾ ಗಾಂಧಿ.

ಆಟಿಟ್ಯೂಡ್ ಯಾರಿಗಿದೆ.?

ಆಟಿಟ್ಯೂಡ್ ಯಾರಿಗಿದೆ.?

'ಹೈ ಇನ್ ಆಟಿಟ್ಯೂಡ್' ಎಂದು ಅಕುಲ್ ಕೇಳಿದಕ್ಕೆ, ಪ್ರಶ್ನೆಯನ್ನ ಪಾಸಿಟೀವ್ ಆಗಿ ಪರಿವರ್ತಿಸಿಕೊಂಡ ನಟಿ ಪೂಜಾ ಗಾಂಧಿ, ''ಗುಡ್ ಆಟಿಡ್ಯೂಡ್ - ಸುದೀಪ್, ಐ ಲವ್ ಹಿಸ್ ಆಟಿಟ್ಯೂಡ್'' ಎಂದರು. ಆ ಮೂಲಕ ವಿವಾದಗಳಿಗೆ ಸಿಲುಕದೆ ಜಾಣ್ಮೆ ಪ್ರದರ್ಶಿಸಿದರು.

ಸುದೀಪ್ ರೋಮ್ಯಾಂಟಿಕ್.!

ಸುದೀಪ್ ರೋಮ್ಯಾಂಟಿಕ್.!

ಜೊತೆಗೆ 'ರೋಮ್ಯಾಂಟಿಕ್' ಯಾರು ಎಂದು ಕೇಳಿದ್ದಕ್ಕೆ, 'ಸುದೀಪ್' ಎಂದು ಉತ್ತರ ಕೊಟ್ಟರು ನಟಿ ಪೂಜಾ ಗಾಂಧಿ.

'ಶೋ ಆಫ್' ಯಾರು.?

'ಶೋ ಆಫ್' ಯಾರು.?

'ಶೋ ಆಫ್' ಎಂದು ಅಕುಲ್ ಬಾಲಾಜಿ ಹೇಳಿದ ಕೂಡಲೆ, ಪೂಜಾ ಗಾಂಧಿ ರವರಿಗೆ ಸಂಜನಾ ನೆನಪಾಯ್ತು.

ಪೂಜಾ-ಸಂಜನಾ ವಿವಾದ

ಪೂಜಾ-ಸಂಜನಾ ವಿವಾದ

'ದಂಡುಪಾಳ್ಯ' ಚಿತ್ರದ ಪ್ರಮೋಷನ್ ವಿಚಾರದಲ್ಲಿ ಪೂಜಾ ಗಾಂಧಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಸಂಜನಾ ಬೇಸರಗೊಂಡಿದ್ದರು. ಇದು ಗಾಂಧಿನಗರದಲ್ಲಿ ಹೊಸ ವಿವಾದ ಸೃಷ್ಟಿಸಿತ್ತು.

More from Filmibeat

English summary
Kannada Actress Pooja Gandhi spoke about Actress Sanjana in Colors Super channel's popular show 'Super Talk time'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X