ವೈವಾಹಿಕ ಜೀವನದ ಬಗ್ಗೆಯ ನೇರ ಪ್ರಶ್ನೆಗೆ ಪ್ರೇಮಾ ಉತ್ತರವೇನು?
Recommended Video
'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮದ ಮೂರನೇ ಸಂಚಿಕೆಗೆ ನಟಿ ಪ್ರೇಮಾ ಆಗಮಿಸಿದ್ದರು. ಈ ಕಾರ್ಯಕ್ರಮದ ಸಂಚಿಕೆ ನಿನ್ನೆ (ಮೇ 4)ರಂದು ಪ್ರಸಾರ ಆಗಿದೆ. ಪ್ರೇಮಾ ಜೀವನದ ಅನೇಕ ವಿಷಯಗಳು ಈ ಕಾರ್ಯಕ್ರಮದ ಮೂಲಕ ತಿಳಿದಿದೆ.
ಪ್ರೇಮಾ ಜೀವನದ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿತ್ತು. ಅವರ ವೈವಾಹಿಕ ಜೀವನ ಹಾಗೂ ಆರೋಗ್ಯದ ಬಗ್ಗೆ ಅನೇಕ ಗಾಸಿಪ್ ಗಳು ಇದ್ದವು. ಈ ಬಗ್ಗೆ ಪ್ರಶ್ನೆಗಳನ್ನು ಕಾರ್ಯಕ್ರಮದಲ್ಲಿ ರಮೇಶ್ ಕೇಳಿದರು.
ಪ್ರೇಮಾ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದಾಗಲೇ ಅವರ ವೈವಾಹಿಕ ಜೀವನದ ಬಗ್ಗೆ ಏನು ಮಾತನಾಡಬಹುದು ಎನ್ನುವ ಕುತೂಹಲ ಸಾಕಷ್ಟು ಮಂದಿಗೆ ಇತ್ತು. ಆದರೆ, ಮದುವೆ, ವೈವಾಹಿಕ ಜೀವನದ ನೇರ ಪ್ರಶ್ನೆಗಳಿಗೆ ಪ್ರೇಮಾ ಪ್ರೇಮಾರ 'ಮೌನ'ವಷ್ಟೇ ಉತ್ತರವಾಗಿತ್ತು. ಮುಂದೆ ಓದಿ...

ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟ ರಮೇಶ್
ಕಾರ್ಯಕ್ರಮದ ನಡುವೆ ಕೆಲವು ಗಂಭೀರ ಪ್ರಶ್ನೆಗಳನ್ನು ನಟಿ ಪ್ರೇಮಾ ಅವರ ಮುಂದೆ ರಮೇಶ್ ಇಟ್ಟರು. ''ಕೆಲವು ಊಹಾಪೋಹಗಳು ಇವೆ. ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ಅರ್ಧ ಸತ್ಯ ಅಂತ ನಿಮ್ಮ ಬಾಯಿಯಲ್ಲಿಯೇ ಕೇಳೋಣ ಅಂತ. ನಿಮಗೆ ಆ ಪ್ರಶ್ನೆ ಇಷ್ಟ ಆಗದೆ ಇದ್ದರೆ ನೀವು 'ನೋ' ಎಂದು ಹೇಳಬಹುದು'' ಎಂದು ಪ್ರಶ್ನೆ ಕೇಳಿದರು.

ವೈವಾಹಿಕ ಜೀವನ ಹೇಗಿತ್ತು?, ಏನ್ ಆಯ್ತು?
''ನಿಮ್ಮ ವಿವಾಹ ಆಗುತ್ತದೆ. ನಿಮ್ಮ ವೈವಾಹಿಕ ಜೀವನ ಹೇಗಿತ್ತು? ಆಮೇಲೆ ಏನ್ ಆಯ್ತು? ಈಗ ಏನ್ ನಡೆಯುತ್ತಿದೆ.?'' ಎಂದು ತಮ್ಮ ಪ್ರಶ್ನೆಯನ್ನು ಪ್ರೇಮಾ ಮುಂದೆ ರಮೇಶ್ ಇಟ್ಟರು. ಈ ಪ್ರಶ್ನೆಗಳಿಗೆ ಪ್ರೇಮಾ ಒಂದು ಕ್ಷಣ ಮೌನವಾದರು. ಆ ಸಮಯದಲ್ಲಿ ಅವರಿಗೆ ಏನನ್ನೂ ಮಾತನಾಡಲು ಆಗಲಿಲ್ಲ.

'ಮೌನ'ವೇ ಉತ್ತರ
ಜೀವನದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ ಎನ್ನುವ ಮಾತಿದೆ. ಅದೇ ರೀತಿ ಪ್ರೇಮಾ ಜೀವನದಲ್ಲಿ ಕೂಡ ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲ. ವೈವಾಹಿಕ ಜೀವನದ ಪ್ರಶ್ನೆಗೆ ಪ್ರೇಮಾ ನಗುತ್ತಲೇ ''ನೋ ಕಾಮೆಂಟ್ಸ್'' ಎಂದರು. ತಮ್ಮ ನೋವುಗಳನ್ನು ಅವರು ಬಾಯಿ ಬಿಟ್ಟು ಹೇಳಿಕೊಳ್ಳದೆ ಇದ್ದರೂ, ಅವರ ಮುಖದಲ್ಲಿಯೇ ಅದು ತಿಳಿಯುತ್ತಿತ್ತು.

ವಿಚ್ಛೇದನ ಕೋರಿ ಪ್ರೇಮಾ ಅರ್ಜಿ
ನಟಿ ಪ್ರೇಮಾ 2006ರಲ್ಲಿ ಉದ್ಯಮಿ ಜೀವನ್ ರನ್ನು ವಿವಾಹ ಆಗಿದ್ದರು. ಮದುವೆ ಆಗುವ ಕಾರಣದಿಂದ ಸಿನಿಮಾ ರಂಗದಿಂದ ಬ್ರೇಕ್ ಪಡೆದುಕೊಂಡಿದ್ದರು. ಆದರೆ, ಹಿಂದು ವಿವಾಹ ಕಾಯ್ದೆ ಸೆಕ್ಷನ್ 13 ಅಡಿಯಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ನಟಿ ಪ್ರೇಮ 2016ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರೇಮ ಹಾಗೂ ಪತಿ ಜೀವನ್ ಅಪ್ಪಚ್ಚು ನಡುವಿನ ವೈಮನಸ್ಯ ವಿಚ್ಛೇದನಕ್ಕೆ ಕಾರಣ ಎನ್ನಲಾಗಿತ್ತು.

ವಿಚ್ಛೇದನಕ್ಕೆ ಕಾರಣ ಏನು?
ಈ ಹಿಂದೆ ಟಿವಿ9 ಕನ್ನಡ ವಾಹಿನಿ ನಟಿ ಪ್ರೇಮಾ ವಿಚ್ಛೇದನದ ಕಾರಣವನ್ನು ವರದಿ ಮಾಡಿತ್ತು. ಆ ಪ್ರಕಾರ ಮದುವೆಗೂ ಮುನ್ನ ಸಾಫ್ಟ್ ವೇರ್ ಎಂಜಿನಿಯರ್ ಅಂತ ಹೇಳಿಕೊಂಡಿದ್ದ ಜೀವನ್ ಓರ್ವ ಉದ್ಯಮಿ ಅನ್ನೋದು ನಟಿ ಪ್ರೇಮಗೆ ಮದುವೆ ನಂತರ ತಿಳಿದುಬಂತಂತೆ. ವಿವಾಹ ಬಳಿಕ ಸಿನಿಮಾದಲ್ಲಿ ನಟಿಸಲು ಪ್ರೇಮಾಗೆ ಇಷ್ಟ ಇರಲಿಲ್ಲ. ಆದರೆ, ಪ್ರೇಮಾ ದುಡಿಯಬೇಕು, ಆ ಹಣದಿಂದ ಐಶಾರಾಮಿ ಜೀವನ ನಡೆಸಬೇಕು ಎನ್ನುವುದು ಜೀವನ್ ಆಸೆ ಆಗಿತಂತೆ.


Click it and Unblock the Notifications











