Priyanka Kumar: 'ಕೃಷ್ಣ ತುಳಸಿ' ನಟಿ ಪ್ರಿಯಾಂಕಾ 'ಬ್ಯಾಡ್ ಮ್ಯಾನರ್ಸ್'.. ಕಿರುತೆರೆಯಿಂದ ಸಿನಿಮಾಗೆ ಎಂಟ್ರಿ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ನಟಿಸಿದ್ದರು. ಪ್ರಿಯಾಂಕಾ ಕುಮಾರ್ ಮುಂದೆ ಕಾಲಿಟ್ಟಿದ್ದು ಹಿರಿತೆರೆಗೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಅಭಿಷೇಕ್ ಅಂಬರೀಶ್ ಅಭಿನಯದ ಸಿನಿಮಾ 'ಬ್ಯಾಡ್ ಮಾನರ್ಸ್'ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಪ್ರಿಯಾಂಕಾ ಕುಮಾರ್. 'ಬ್ಯಾಡ್ ಮಾನರ್ಸ್' ಸಿನಿಮಾದಲ್ಲಿ ಶ್ರೀಮಂತ ಉದ್ಯಮಿಯ ಮಗಳ ಪಾತ್ರದಲ್ಲಿ ಪ್ರಿಯಾಂಕಾ ಕುಮಾರ್ ಕಾಣಿಸಿಕೊಂಡಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯ ಪ್ರಿಯಾಂಕಾ ಕುಮಾರ್‌ಗೆ ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಆಸಕ್ತಿ. ಬಾಲ್ಯದಿಂದಲೂ ನಾಟಕ, ಯಕ್ಷಗಾನವನ್ನು ನೋಡುತ್ತಲೇ ಬೆಳೆದ ಆಕೆಗೆ ನಟಿಯಾಗಬೇಕು ಎಂಬ ಆಸೆ ಜಾಸ್ತಿಯಾಯಿತು. ತೀರ್ಥಹಳ್ಳಿಯಲ್ಲಿ 6ನೇ ತರಗತಿವರೆಗೆ ಓದಿದ ಪ್ರಿಯಾಂಕಾ ಮುಂದೆ ಮೈಸೂರಿಗೆ ಶಿಫ್ಟ್ ಆದರು.

ನಟಿಯಾಗಬೇಕು ಎಂಬ ಬಯಕೆ ಅದ್ಯಾವಾಗ ತೀವ್ರವಾಗಿತ್ತೋ ಆವಾಗ ಆಕೆ ಇದ್ದಂತಹ ಆಡಿಶನ್‌ಗಳಲ್ಲಿ ಭಾಗವಹಿಸಲಾರಂಭಿಸಿದರು. ಸುಮಾರು ಮೂರು ವರ್ಷಗಳ ಕಾಲ ಆಡಿಶನ್‌ಗಳಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಕುಮಾರ್ 'ಕೃಷ್ಣ ತುಳಸಿ' ಮೂಲಕ ನಟನೆಗೆ ಜಿಗಿದರು. ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮಾನರ್ಸ್' ಸಿನಿಮಾಕ್ಕೆ ಆಡಿಶನ್ ಮೂಲಕ ಆಯ್ಕೆಯಾದ ಪ್ರಿಯಾಂಕಾ ಕುಮಾರ್‌ಗೆ ಸಿನಿಮಾದ ಕಥೆ ಹಾಗೂ ಪಾತ್ರದ ಬಗ್ಗೆ ಕೊಂಚವೂ ಅರಿವಿರಲಿಲ್ಲವಂತೆ.
ನಿರ್ದೇಶಕ ದುನಿಯಾ ಸೂರಿ ಶೂಟಿಂಗ್‌ಗೆ ಮೊದಲು ಪ್ರಿಯಾಂಕಾಗೆ ಸಿನಿಮಾದ ಕಥೆಯ ಜೊತೆಗೆ ಪಾತ್ರದ ಬಗ್ಗೆ ಸವಿವರವಾಗಿ ವಿವರಿಸಿದರಂತೆ. ಹಾಗಾಗಿ ಪ್ರಿಯಾಂಕಾಗೆ ನಟಿಸಲು ಕಷ್ಟವಾಗಲಿಲ್ಲವಂತೆ. ಜೊತೆಗೆ ದುನಿಯಾ ಸೂರಿ ನಿರ್ದೇಶನದಡಿ ಸಿನಿಮಾದಲ್ಲಿ ನಟಿಸುತ್ತಿರುವುದು ಕೂಡಾ ಆಕೆಗೆ ಸಂತಸ ತಂದಿದೆಯಂತೆ.

ಇದರ ಜೊತೆಗೆ 'ಅದ್ಧೂರಿ ಲವರ್', 'ದಿಲ್ದರ್' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಪ್ರಿಯಾಂಕಾ ಕುಮಾರ್‌ಗೆ ಮೊದಲಿನಿಂದಲೂ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಬಯಕೆಯಿತ್ತು. ದೊಡ್ಡ ನಟರ ಜೊತೆಗೆ, ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಇರಾದೆ ಇರುವ ಪ್ರಿಯಾಂಕಾಗೆ ಪರಭಾಷೆಯ ಸಿನಿಮಾಗಳಿಗಿಂತಲೂ ಕನ್ನಡ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ಆಸೆಯಂತೆ.


Click it and Unblock the Notifications











