ನಟಿ ರಾಜ್ ಶ್ರೀ ಪೊನ್ನಪ್ಪ ಪ್ರಕಾರ ಓಂಪ್ರಕಾಶ್ ರಾವ್ 'ಓವರ್ ರೇಟೆಡ್ ನಿರ್ದೇಶಕ'!
'ಲಾಕಪ್ ಡೆತ್', 'ಹುಚ್ಚ', 'ಎಕೆ-47', 'ಕಲಾಸಿಪಾಳ್ಯ' ಸೇರಿದಂತೆ ಅನೇಕ ಮಾಸ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ 'ಕನ್ನಡ ಚಿತ್ರರಂಗದ ಓವರ್ ರೇಟೆಡ್ ನಿರ್ದೇಶಕ' ಅಂತೆ.!
ಹಾಗಂತ ಕಾಮೆಂಟ್ ಮಾಡಿದವರು ನಟಿ ರಾಜ್ ಶ್ರೀ ಪೊನ್ನಪ್ಪ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ರಾಜ್ ಶ್ರೀ ಪೊನ್ನಪ್ಪ ಜೊತೆ ಹರಟೆ ಮುಗಿದ ಬಳಿಕ ನಿರೂಪಕ ಅಕುಲ್ ಬಾಲಾಜಿ Rapid Fire ರೌಂಡ್ ಗೆ ಚಾಲನೆ ನೀಡಿದರು.
'Rapid Fire' ರೌಂಡ್ ನಲ್ಲಿ ''ನಿಮ್ಮ ಪ್ರಕಾರ ಕನ್ನಡ ಚಿತ್ರರಂಗದ ಓವರ್ ರೇಟೆಡ್ ನಿರ್ದೇಶಕ ಯಾರು.?'' ಎಂದು ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ ಹಿಂದು ಮುಂದು ಯೋಚನೆ ಮಾಡದೆ ''ಓಂ ಪ್ರಕಾಶ್ ರಾವ್'' ಎಂದು ಉತ್ತರ ಕೊಟ್ಟರು ನಟಿ ರಾಜ್ ಶ್ರೀ ಪೊನ್ನಪ್ಪ.
More from Filmibeat
English summary
''Om Prakash Rao is Over Rated Director in Kannada Film Industry'' says Kannada Actress Rajshri Ponnappa in Colors Super Channel's popular show 'Super Talk Time'
akul balaji colors channel tv reality show om prakash rao ಅಕುಲ್ ಬಾಲಾಜಿ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ ಓಂಪ್ರಕಾಶ್ ರಾವ್


Click it and Unblock the Notifications











