ಸದ್ದಿಲ್ಲದೇ ಸುದ್ದಿಯಾದ ರಮ್ಯಾ: ಮೋಹಕ ಫೋಟೊಗಳು ಫುಲ್ ವೈರಲ್
ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತನೇ ಇರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲವು ದಿನ ಸೈಲೆಂಟ್ ಆಗಿದ್ದ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸುಂದರ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಚಿತ್ತಾರ ಮ್ಯಾಗಜೀನ್ ನೀಡುವ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋಹಕತಾರೆ ಕಪ್ಪು ಸೀರೆಯುಟ್ಟು ಮಿಂಚಿದ್ದಾರೆ.
ಮೋಹಕ ತಾರೆ ರಮ್ಯಾ ಕಪ್ಪು ಸೀರೆಯುಟ್ಟ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರ ತಲೆಗೆ ಹುಳಬಿಟ್ಟಿದ್ದಾರೆ. ರಮ್ಯಾ ಜೊತೆ ಸ್ಯಾಂಡಲ್‌ವುಡ್‌ನ ಶ್ರೀಲೀಲಾ, ಆಶಿಕಾ ರಂಗನಾಥ್, ಅಮೃತಾ ಅಯ್ಯಾಂಗಾರ್ ಕೂಡ ಜೊತೆಯಾಗಿದ್ದರು. ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಫುಲ್ ಟೈಮ್ ಆಕ್ಟಿವ್ ಆಗುವ ಸುಳಿವು ನೀಡಿದ್ದಾರೆ. ಈಗ ರಮ್ಯಾ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡ ಫೋಟೊಗಳು ವೈರಲ್ ಆಗಿವೆ. ಹಲವು ವರ್ಷಗಳ ಕಾಲ ರಮ್ಯಾ ಸೋಶಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ಜೀವನದಿಂದ ದೂರವಿದ್ದು, ಅಕ್ಷರಶಃ ಅಜ್ಞಾತವಾಸದಲ್ಲಿದ್ದರು.

ರಮ್ಯಾ ಫೋಟೋಗೆ ಮೆಚ್ಚುಗೆ
ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಫೋಟೋಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕನ್ನಡ ಇಂಡಸ್ಟ್ರಿಗೆ ರಮ್ಯಾ ಒಬ್ಬರೇ. ಈಗಲೂ ರಮ್ಯಾ ಫುಲ್ ಟೈಮ್‌ನಲ್ಲಿ ವಾಪಸ್ ಆದರೆ, ನಂಬರ್ ಒನ್ ಆಗೋದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಮೋಹಕ ತಾರೆ ರಮ್ಯಾ ಕಪ್ಪು ಬಣ್ಣದ ಸೀರೆಯುಟ್ಟು ಮಿಂಚಿದ ಈ ಫೋಟೊಗಳೇ ಸಾಕ್ಷಿ. ರಮ್ಯಾ ನೋಡಿ ಅವರ ಅಭಿಮಾನಿಗಳಂತೂ ಫುಲ್ ಫಿಧಾ ಆಗಿರುವುದಂತೂ ಗ್ಯಾರಂಟಿ. ಸ್ಯಾಂಡಲ್‌ವುಡ್ ಕ್ವೀನ್ ಯಾವಾಗ ಸಿನಿಲೋಕಕ್ಕೆ ಪುಲ್ ಟೈಮ್‌ನಲ್ಲಿ ಕಾಲಿಡುತ್ತಾರೋ? ಮತ್ತೆ ಯಾವಾಗ ಸಿನಿಮಾ ನೋಡುತ್ತೇವೋ ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸ್ಯಾಂಡಲ್‌ವುಡ್ ಚೆಲುವೆ ರಮ್ಯಾ
ಸ್ಯಾಂಡಲ್‌ವುಡ್‌ನ ಲಕ್ಕಿ ಗರ್ಲ್ ಹಿಂದೆ ಇದ್ದಂತೆ ಇಲ್ಲ. ಕೊಂಚ ದಪ್ಪಗಾಗಿರೋದು ನಿಜ. ಆದರೂ ರಮ್ಯಾ ಮುಖದ ಕಾಂತಿಯೇನು ಕಮ್ಮಿಯಾಗಿಲ್ಲ. ನೋಡುಗರು ತಮ್ಮ ನೋಟವನ್ನು ಬೇರೆಡೆಗೆ ತಿರುಗಿಸಲಾಗದಷ್ಟು ತನ್ನ ಮುಖದ ಕಾಂತಿಯನ್ನು ಉಳಿಸಿಕೊಂಡಿದ್ದಾರೆ ವಿನಃ ಕಡಿಮೆಯಂತು ಆಗಿಲ್ಲ. ಕಪ್ಪು ಬಣ್ಣದ ಸೀರೆಯುಟ್ಟು ಉಟ್ಟು, ಕಣ್ಣಿಗೆ ಕಾಜಲ್ ಹಾಕಿ ಬೆಳ್ಳಗಿನ ಕಿವಿಯೋಲೆ ತೊಟ್ಟು, ಮಿರ ಮಿರನೇ ಮಿಂಚುತ್ತಿದ್ದಾರೆ ಚೆಂದುಳ್ಳಿ ಚೆಲುವೆ ರಮ್ಯಾ.

ನಟನೆಯತ್ತ ಮುಖ ಮಾಡುತ್ತಿದ್ದಾರಾ ರಮ್ಯಾ?
ರಾಜಕೀಯವಾಗಿ ರಮ್ಯಾ ಏನೇ ಆಗಿರಬಹುದು. ಅವರೊಬ್ಬ ನಟಿ ಅಂತ ಬಂದರೆ, ಇಂಡಸ್ಟ್ರಿಗೆ ಈಗ ವಾಪಸ್ ಬಂದರೂ ಅದ್ಧೂರಿ ಸ್ವಾಗತ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ, ಸಿನಿ ಜಗತ್ತಿನ ನೆನಪುಗಳನ್ನು ಮಾತ್ರ ರಮ್ಯಾ ಮರೆತಿಲ್ಲ. ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಾಯಕಿಯಾಗಿ ಮೆರೆದಿದ್ದರು. ಈಗ ಸ್ಯಾಂಡಲ್‌ವುಡ್‌ನ ಹಲವು ಕಾರ್ಯಕ್ರಮಗಳಲ್ಲಿ ರಮ್ಯಾ ಪ್ರೆಸೆಂಟ್ ಅನ್ನುತ್ತಿದ್ದಾರೆ. ಇವರ ಸದ್ಯದ ಆಕ್ಟಿವಿಟಿಯನ್ನು ನೋಡಿದರೆ, ಮತ್ತೆ ಸ್ಲಿಮ್ ಆಗಿ, ಫುಲ್ ಟೈಮ್ ನಟನೆಗೆ ಬರೋದು ಗ್ಯಾರಂಟಿ ಎನಿಸುತ್ತಿದೆ.

ಚಿಕ್ಕ ಪಾತ್ರಕ್ಕೆ ಈಗಾಗಲೇ ಬಣ್ಣ ಹಚ್ಚಿರೋ ರಮ್ಯಾ!
ನಟಿ ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಳ್ಳಬೇಕು ಅಂದರೆ, ಅವರು ಸ್ಲಿಮ್ ಆಗಬೇಕು. ಅವರ ಇಮೇಜಿಗೆ ತಕ್ಕಂತಹ ಪಾತ್ರ ಹಾಗೂ ಕಥೆ ಸಿಗಬೇಕು. ಈ ಮಧ್ಯೆ ರಮ್ಯಾ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಕೆಲವು ಕಥೆಗಳನ್ನು ಕೇಳುತ್ತಿದ್ದಾರೆ ಅನ್ನೋ ಸುದ್ದಿ ಮುಟ್ಟಿದೆ. ನನ್ನ ಕಮ್‌ಬ್ಯಾಕ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇದೆ. ವದಂತಿಗಳು ಕೂಡ ಹರಡುತ್ತಿವೆ. ನಾನು ಕೆಲವು ಸ್ಕ್ರಿಫ್ಟ್ ಕೇಳಿದ್ದೇನೆ. ಸರಿಯಾದ ಸಂದರ್ಭದಲ್ಲಿ ಈ ಬಗ್ಗೆ ನನ್ನಿಂದ ಅಪ್‌ಡೇಟ್ ಸಿಗುತ್ತದೆ ಎಂದು ರಮ್ಯಾ ಹೇಳಿದ್ದಾರೆ. ರಮ್ಯಾ ಯಾವಾಗ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











