TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ತೆಲುಗಿನ ರಿಯಾಲಿಟಿ ಶೋನಲ್ಲಿ ತಾಯ್ನಾಡಿನ ಬಗ್ಗೆ ಅಭಿಮಾನ ಮೆರೆದ ರಶ್ಮಿಕಾ.!

ಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಎಷ್ಟು ಫೇಮಸ್ಸೋ, ತೆಲುಗು ಚಿತ್ರರಂಗದಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ.
ಕನ್ನಡದಲ್ಲಿ ಬಹುಬೇಡಿಕೆಯ ನಟಿ ಆಗಿರುವ ರಶ್ಮಿಕಾ ಮಂದಣ್ಣಗೆ ತೆಲುಗಿನಲ್ಲಿಯೂ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಪಕ್ಕದ ರಾಜ್ಯದಲ್ಲಿ ರಶ್ಮಿಕಾ ಖ್ಯಾತಿ ಪಡೆದಿದ್ದರೂ, ತಾಯ್ನಾಡು ಹಾಗೂ ಹುಟ್ಟಿದ ಊರಿನ ಬಗೆಗಿನ ಅಭಿಮಾನ ಆಕೆಗೆ ಕೊಂಚ ಕೂಡ ಕಮ್ಮಿ ಆಗಿಲ್ಲ. ಅದಕ್ಕೆ ಸಾಕ್ಷಿ ಇಲ್ಲಿದೆ...
ಕನ್ನಡ ಚಿತ್ರಗಳ ಪತ್ರಿಕಾಗೋಷ್ಟಿಯಲ್ಲಿ ರಶ್ಮಿಕಾ ಕನ್ನಡದಲ್ಲಿ ಮಾತನಾಡಲ್ಲ, ಆದ್ರೆ ತೆಲುಗು ಸಿನಿಮಾದ ಸಮಾರಂಭಗಳಲ್ಲಿ ತೆಲುಗು ಮಾತನಾಡುತ್ತಾರೆ ಅಂತೆಲ್ಲಾ ರಶ್ಮಿಕಾ ಬಗ್ಗೆ ಟ್ರೋಲ್ ಮಾಡಲಾಗಿತ್ತು.
ಆದ್ರೆ, ಅದೇ ರಶ್ಮಿಕಾ ತೆಲುಗಿನ ರಿಯಾಲಿಟಿ ಶೋವೊಂದರಲ್ಲಿ ''ನಾನು ಕೊಡಗಿನವಳು'' ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...
ತೆಲುಗಿನ ರಿಯಾಲಿಟಿ ಶೋನಲ್ಲಿ ರಶ್ಮಿಕಾ
ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ 'ಆಟ ಜ್ಯೂನಿಯರ್ಸ್'ನಲ್ಲಿ ಸೆಲೆಬ್ರಿಟಿ ಜಡ್ಜ್ ಆಗಿ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ ಅಭಿನಯದ 'ಗೀತ ಗೋವಿಂದಂ' ಸಿನಿಮಾ ಹಿಟ್ ಆಗಿರುವ ಕಾರಣ ರಿಯಾಲಿಟಿ ಶೋನಲ್ಲಿ ಅತಿಥಿ ತೀರ್ಪುಗಾರರಾಗಿ ರಶ್ಮಿಕಾ ಭಾಗವಹಿಸಿದ್ದರು.
'ರಶ್ಮಿಕಾರನ್ನ ಮದುವೆ ಆಗಿ' ಎಂದು ವಿಜಯ್ ದೇವರಕೊಂಡಗೆ ಹೇಳಿದ ಅಭಿಮಾನಿ.!
ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ಪರ್ಧಿ.!
'ಆಟ ಜ್ಯೂನಿಯರ್ಸ್'ನಲ್ಲಿ ಮಹಾಲಕ್ಷ್ಮಿ ಎಂಬ ಪುಟಾಣಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾಳೆ. ಈಕೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹುಡುಗಿ. ಮಹಾಲಕ್ಷ್ಮಿ ಕರ್ನಾಟಕದವಳು ಅಂತ ಗೊತ್ತಾದ ಕೂಡಲೆ ರಶ್ಮಿಕಾ ಮೊಗದಲ್ಲಿ ಮಂದಹಾಸ ಮೂಡಿತು.
ಒದ್ದೆಕಣ್ಣಿನಿಂದ ಮನಃಪೂರ್ವಕವಾಗಿ ಕೊಡಗಿನ ಪರವಾಗಿ ಎಲ್ಲರಿಗೂ ವಂದಿಸಿದ ರಶ್ಮಿಕಾ
ನಿರೂಪಕ ಕೇಳಿದ್ದೇನು.?
ಮಹಾಲಕ್ಷ್ಮಿಯ ನೃತ್ಯ ಪ್ರದರ್ಶನ ಮುಗಿದ ಮೇಲೆ, ''ಈಕೆಯ ಊರು ಯಾವುದು ಅಂತ ಕೇಳಿ'' ಎಂದು ರಶ್ಮಿಕಾಗೆ ಹೇಳಿದರು. ರಶ್ಮಿಕಾ ಕೇಳಿದಾಗ, ''ಕರ್ನಾಟಕ'' ಎಂದು ಮಹಾಲಕ್ಷ್ಮಿ ಉತ್ತರಿಸಿದರು.
ಇಲ್ಲಿ ಹೀಗೆ, ಅಲ್ಲಿ ಹಾಗೆ.. ರಶ್ಮಿಕಾ ಯಾಕ್ಹೀಗೆ.? ಕಡುಕೋಪ ಕನ್ನಡಿಗರಿಗೆ.!
ರಶ್ಮಿಕಾ ಪ್ರತಿಕ್ರಿಯೆ ಹೇಗಿತ್ತು.?
'ಕರ್ನಾಟಕ' ಅಂತ ಕೇಳಿದ ಕೂಡಲೆ, ''ಓ.. ಸೂಪರ್.. ಐ ಲವ್ ಯು'' ಎಂದು ಮಹಾಲಕ್ಷ್ಮಿಗೆ ರಶ್ಮಿಕಾ ಹೇಳಿದರು. ಅಲ್ಲದೇ, ಕೂತ ಜಾಗದಿಂದಲೇ ಮಹಾಲಕ್ಷ್ಮಿಗೆ ಅಪ್ಪುಗೆ ನೀಡಿದರು.
ನಾನು ಕೊಡಗು.!
''ನಾನು ಕೊಡಗು'' ಅಂತ ರಶ್ಮಿಕಾ ಹೇಳುತ್ತಿದ್ದಂತೆಯೇ, 'ಕೊಡಕ (ಮಗ)' ಅಂತ ನಿರೂಪಕ ತಮಾಷೆ ಮಾಡಿದರು. ಆಮೇಲೆ, 'ಕೊಡಗು ಜಿಲ್ಲೆ' ಎಂದು ರಶ್ಮಿಕಾ ಹೇಳಿದರು. ಆಗ ಮಹಾಲಕ್ಷ್ಮಿ, ''ನನ್ನದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು'' ಎಂದು ಹೇಳಿದಳು.
ಕನ್ನಡ ಪ್ರತಿಭೆಯನ್ನ ಹೊಗಳಿದ ತೀರ್ಪುಗಾರರು
ಮಹಾಲಕ್ಷ್ಮಿಯ ನೃತ್ಯ ನೋಡಿ ತೀರ್ಪುಗಾರರು ಹೊಗಳಿದರು. ಅವರ ಪರ್ಫಾಮೆನ್ಸ್ ಗೆ ಭಾರಿ ಮೆಚ್ಚುಗೆ ಲಭಿಸಿತು.