»   » 'ಹುಚ್ಚ'ನ ಮೇಲಿತ್ತು 'ಸ್ಪರ್ಶ' ರೇಖಾ ಕಣ್ಣು.!

'ಹುಚ್ಚ'ನ ಮೇಲಿತ್ತು 'ಸ್ಪರ್ಶ' ರೇಖಾ ಕಣ್ಣು.!

Posted By:
Subscribe to Filmibeat Kannada

2000 ರಲ್ಲಿ ತೆರೆಕಂಡ 'ಸ್ಪರ್ಶ' ಸಿನಿಮಾ ಕಿಚ್ಚ ಸುದೀಪ್ ಹಾಗೂ ನಟಿ ರೇಖಾ ರವರಿಗೆ ದೊಡ್ಡ ಬ್ರೇಕ್ ನೀಡಿತು. 'ಸ್ಪರ್ಶ' ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಬಹುಬೇಡಿಕೆಯ ನಟರಾದರು. ಹಾಗೇ ನಟಿ ರೇಖಾ ಕೂಡ ಗಾಂಧಿನಗರದಲ್ಲಿ ಬೇಡಿಕೆ ಕಂಡುಕೊಂಡರು.

'ಸ್ಪರ್ಶ' ಸಿನಿಮಾದ ಮೂಲಕ ಸುದೀಪ್ 'ಹುಚ್ಚ' ಚಿತ್ರಕ್ಕೆ ಚಾಲನೆ ನೀಡಿದರೆ, ರೇಖಾ 'ಮೆಜೆಸ್ಟಿಕ್' ಚಿತ್ರದಲ್ಲಿ ಬಿಜಿಯಾದರು.

Kannada Actress Rekha wanted to work in 'Huccha' film

'ಮೆಜೆಸ್ಟಿಕ್' ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಖಾ ಅಮೇರಿಕಾಗೆ ಹಾರಿ ಹೋದರು. ಕೆಲಸ, ಗಂಡ, ಮನೆ, ಮಕ್ಕಳು ಅನ್ನೋದ್ರಲ್ಲೇ ಬಿಜಿಯಾಗಿದ್ದ ರೇಖಾ ಈಗ ಕೊಂಚ ಬಿಡುವು ಮಾಡಿಕೊಂಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇಂತಿಪ್ಪ ರೇಖಾ ರವರಿಗೆ ತಾವು ಆಕ್ಟ್ ಮಾಡಲೇಬೇಕಿತ್ತು ಎಂದು ಈಗಲೂ ಅನಿಸುವ ಸಿನಿಮಾ ಯಾವುದು ಗೊತ್ತಾ.? ಸುದೀಪ್ ರವರ ಸೂಪರ್ ಹಿಟ್ ಸಿನಿಮಾ 'ಹುಚ್ಚ'.! ಹಾಗಂತ ಸ್ವತಃ ನಟಿ ರೇಖಾ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

Kannada Actress Rekha wanted to work in 'Huccha' film

''ನೀವು ಆಕ್ಟ್ ಮಾಡಲೇಬೇಕಿತ್ತು ಅಂತ ಅನಿಸಿರುವ ಸಿನಿಮಾ ಯಾವುದು'' ಎಂದು ನಿರೂಪಕ ಅಕುಲ್ ಬಾಲಾಜಿ ಕೇಳಿದ್ದಕ್ಕೆ, ''ಹುಚ್ಚ'' ಎಂದು ಉತ್ತರ ಕೊಟ್ಟರು ನಟಿ ರೇಖಾ.

English summary
Kannada Actress Rekha wanted to work in Kannada Movie 'Huccha'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada