ಹೊಸ ಸಿನಿಮಾ ಘೋಷಣೆ ಬೆನ್ನಲ್ಲೇ ಮಾಡ್ರನ್ ಡ್ರೆಸ್‌ನಲ್ಲಿ ಸಾನ್ಯಾ ಅಯ್ಯರ್ ಫುಲ್ ಮಿಂಚಿಂಗ್!
ನಟಿ ಸಾನ್ಯಾ ಅಯ್ಯರ್ ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ನಟನಾವೃತ್ತಿಗೆ ಕಾಲಿರಿಸಿದ ನಟಿ ಅದರಿಂದ ಬಹಳ ಖ್ಯಾತಿ ಪಡೆದಿದ್ದರು. ಇವರ ಅಭಿನಯ ನೋಡಿ ಸಾವಿರಾರು ಮಂದಿ ಇವರ ಅಭಿಮಾನಿಯಾಗಿದ್ದರು. ಇದಾದ ನಂತರ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತೆ ಕಿರುತೆಗೆ ಎಂಟ್ರಿ ನೀಡಿದ ನಟಿ ಅದ್ಭುತವಾಗಿ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದರು.
ನಟನೆ ಮೂಲಕ ಎಲ್ಲರ ಮೆಚ್ಚುಗೆ ಪಡೆದ ಸಾನ್ಯಾ ಅಯ್ಯರ್ ನೋಡಲು ಬಹಳ ಸುಂದರಿ ಕೂಡ. ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸುತ್ತಿರು ಇವರು ಹೊಸ ಹೊಸ ಫೋಟೋಶೂಟ್‌ಗಳನ್ನು ಮಾಡಿಸುತ್ತಾ ಇರುತ್ತಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಫೋಟೋಗೆ ಲೈಕ್ ಕಾಮೆಂಟ್ ಮಾಡುತ್ತಾ ಇರುತ್ತಾರೆ.

ಸಾನ್ಯಾ ಅವರ ಫೋಟೋ ನೋಡಿ ಹಲವು ಅಭಿಮಾನಿಗಳು ಖುಷಿ ಪಟ್ಟರೆ ಇನ್ನೂ ಕೆಲವರು ಬೇಸರ ವ್ಯಕ್ತ ಪಡಿಸುತ್ತಾರೆ. ಯಾಕೆಂದರೆ ಸಾನ್ಯಾ ಅವರು ಟ್ರೆಡಿಷನಲ್ ಆಗಿರಬೇಕು ಎಂದು ಕೆಲವರು ಇಷ್ಟ ಪಡುತ್ತಾರೆ. ಸದ್ಯ ಸಾನ್ಯಾ ಅಯ್ಯರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಸಮರ್ಜಿತ್‌ಗೆ ಜೋಡಿಯಾಗಿ ಸಾನ್ಯಾ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದಲ್ಲಿ ಬ್ಯುಸಿ ಇರುವ ಸಾನ್ಯಾ
ಇತ್ತೀಚಿಗೆ 'ಗೌರಿ' ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಕೂಡ ಸಾನ್ಯಾ ಅಯ್ಯರ್ ಸಖತ್ ಆಗಿ ಕಾಣಿಸಿಕೊಂಡಿದ್ದರು. ಯಾವತ್ತೂ ಸ್ಟೈಲಿಶ್ ಆಗಿ ಮಿಂಚುತ್ತಿರುವ ನಟಿಯನ್ನು ನೋಡಿದ ಅಭಿಮಾನಿಗಳಿಗೆ ಬಹಳ ಖುಷಿ ಆಗುತ್ತದೆ. ಬಿಕಿನಿ ತೊಟ್ಟು ಫೋಟೋ ತೆಗೆಸಿಕೊಂಡಿದ್ದ ಸಾನ್ಯಾ ಬಿಕಿನಿ ಫೋಟೋ ಸಕತ್ ವೈರಲ್ ಆಗಿತ್ತು.
ಸಾನ್ಯಾ ಹೊಸ ಫೋಟೋಗೆ ಫ್ಯಾನ್ಸ್ ಕಾಮೆಂಟ್
ಇದೀಗ ಹೊಸ ರೀತಿಯ ಡ್ರೆಸ್ ತೊಟ್ಟ ಸಾನಿಯಾ ನೋಡುಗರ ಮನ ಸೆಳೆದಿದ್ದಾರೆ. ಸಾನ್ಯಾ ತೊಟ್ಟ ಉಡುಗೆಯಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸಾನ್ಯ ಮಿಂಚಿದ್ದಾರೆ. ಸಾನ್ಯಾ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಫೊಟೋಗಳಿಗೆ ಅಭಿಮಾನಿಗಳು ಸಖತ್ ಲೈಕ್ ನೀಡುತ್ತಾ, ಸಾನ್ಯಾ ತೊಟ್ಟ ಡ್ರೆಸ್‌ಗು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿರಿತೆರೆಯಲ್ಲಿ ಸದ್ದು ಮಾಡಲು ಹೊರಟ ನಟಿ
ತಮ್ಮ ಚೊಚ್ಚಲ ಸಿನಿಮಾ ಸೆಟ್ಟುರುತ್ತ ಇರುವಾಗಲೇ ಸಾನಿಯಾ ಇನ್ನೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿರುವುದನ್ನು ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳ ಕಾಮೆಂಟ್‌ಗೆ ಖುಷಿ ಪಟ್ಟ ನಟಿ ಮುಂದಿನ ಚಿತ್ರದ ಬಗ್ಗೆ ಗಮನ ಹರಿಸಿದ್ದಾರೆ. ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಮೇಲೆ ಬರಲಿದ್ದು, ಸಾನ್ಯಾ ನಟನೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











