ಬಾತ್ ಟಬ್‌ನಲ್ಲಿ ಸಾನ್ಯಾ ಅಯ್ಯರ್ ಸಕತ್ ಫೋಟೋಶೂಟ್, ಬಿಕಿನಿ ಫೋಟೋ ಬೇಕು ಎಂದ ಫ್ಯಾನ್ಸ್!
ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ನಟಿ ಸಾನ್ಯಾ ಅಯ್ಯರ್. ಬಾಲ ಕಲಾವಿದೆ ಆಗಿ ಕಿರುತೆರೆಗೆ ಕಾಲಿಟ್ಟ ಈಕೆ ತಮ್ಮ ನಟನೆ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದಿದ್ದರು. ಇದೀಗ ಕನ್ನಡ ಕಿರುತೆರೆಯಿಂದ ಹಿರಿತೆರೆಯಲ್ಲೂ ಕೂಡ ಸಾನ್ಯಾ ಅಯ್ಯರ್ ಮಿಂಚುತ್ತಿದ್ದಾರೆ. ಸಾನ್ಯಾ ಅಯ್ಯರ್ ಹೊಸ ಹೊಸ ಫೋಟೋಶೂಟ್‌ಗನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಯಬಿಡುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯಾಗಿರುವ ನಟಿ ಸಾನ್ಯಾ ಅಯ್ಯರ್ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗೆಯೇ ಬಿಗ್ ಬಾಸ್ ನಲ್ಲಿ ಕೂಡ ಉತ್ತಮ ಪ್ರದರ್ಶನ ಕೊಟ್ಟು ಎಲ್ಲರ ಮನೆ ಮಾತಾಗಿ ಇದ್ದರು. ಇತ್ತೀಚಿನ ದಿನಗಳಲ್ಲಿ ಬಹಳ ಗ್ಲಾಮರಸ್ ಆಗಿರುವ ಫೋಟೋಗಳನ್ನು ತೆಗೆಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ.

ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಲೈಕ್ ಕಾಮೆಂಟ್ ಗಳನ್ನು ಮಾಡಿ ಇನ್ನಷ್ಟು ಪ್ರೋತ್ಸಾಹ ನೀಡುತ್ತಾರೆ. ಹಾಗೆ ಕೆಲವರು ಇದೇನಿದು ಡ್ರೆಸ್ ಎಂದು ಬೈದುಕೊಂಡಿದ್ದು ಇದೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಾನ್ಯಾ ಅಯ್ಯರ್ ಇದೀಗ ಮತ್ತೊಮ್ಮೆ ವಿಭಿನ್ನ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಾತ್ ಟಬ್‌ನಲ್ಲಿ ಕುಳಿತು ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
ಪುಟ್ಟ ಗೌರಿ ನೋಟಕ್ಕೆ ಅಭಿಮಾನಿಗಳು ಫಿದಾ
ಸಾನ್ಯಾ ಅಯ್ಯರ್ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಕೂಡ ಅರೆ ವಾವ್ ಎಂದು ಹೇಳಿದ್ದಾರೆ. ಕಪ್ಪು ಬಣ್ಣದ ತುಂಡು ಬಟ್ಟೆ ಧರಿಸಿ ಹಿಂದೆ ಜರಿಯಂತೆ ಕಲರ್‌ಫುಲ್ ಡ್ರೆಸ್ ತೊಟ್ಟು ತಲೆಗೆ ಕಡ್ಡಿಯ ಕಿರೀಟ ಧರಿಸಿ ಬಾತ್ ಟಬ್‌ನಲ್ಲಿ ಮಲಗಿ ಫೋಟೋಶೂಟ್ ಮಾಡಿಸಿಕೊಂಡು ಇದ್ದಾರೆ. ಫೋಟೋಗಳಿಗೆ ಕಾಮೆಂಟ್ ಮಾಡಿರುವ ಹಲವರು ನಟಿಯನ್ನು ಬಿಕಿನಿಯಲ್ಲಿ ನೋಡುವ ಆಸೆ ವ್ಯಕ್ತಡಿಸಿದ್ದಾರೆ. ಮತ್ತೆ ಕೆಲವರು ಅವರನ್ನು ಕರ್ನಾಟಕದ ಮಿಲ್ಕಿ ಬ್ಯೂಟಿ ಎಂದು ಹೊಗಳಿದ್ದಾರೆ.

'ಗೌರಿ' ಸಿನಿಮಾದಲ್ಲಿ ಸಾನ್ಯಾ ಅಯ್ಯರ್
ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸುತ್ತಿರುವ 'ಗೌರಿ' ಸಿನಿಮಾದ ಮೂಲಕ ಸಾನ್ಯಾ ಅಯ್ಯರ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ. ಸಾಕಷ್ಟು ಬಾರಿ ಬಾಲ ನಟಿಯಾಗಿ ನಟನೆ ಮಾಡಿದ ಸಾನಿಯಾ ಅಯ್ಯರ್ ತನ್ನ ಅಭಿನಯದಿಂದ ಎಲ್ಲರ ಮನ ಗೆಲ್ಲುತ್ತಾ ಇದ್ದು, ಇದೀಗ ಹಿರಿತೆರೆಯಲ್ಲಿ ಕೂಡ ತನ್ನದೆ ಛಾಪು ಮೂಡಿಸಲು ರೆಡಿ ಆಗಿದ್ದಾರೆ.
ಸಿನಿಮಾ ಘೋಷಣೆ ಬಳಿಕ ಹಲವಾರು ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ ಈ ನಟಿ. ನಟಿಯ ಮೋಹಕ ನಗುವಿಗೆ ಅಭಿಮಾನಿಗಳು ಮನಸೋತಿದ್ದಾರೆ. ಜೀವನದಲ್ಲಿ ಅದೆಷ್ಟೇ ಕಷ್ಟ ಬಂದರೂ ಅದ್ಯಾವುದಕ್ಕೂ ಜಗ್ಗದ ಸಾನ್ಯಾ ಅಯ್ಯರ್ ಮುನ್ನಡೆಯುತ್ತ ಇರುತ್ತಾರೆ . ಸಾನ್ಯಾ ಅಯ್ಯರ್ಗೆ ಆಕೆಯ ತಾಯಿಯ ಫುಲ್ ಸಪೋರ್ಟ್ ಮಾಡುತ್ತಾರೆ. ಸಾನ್ಯಾ ಅಯ್ಯರ್‌ಗೆ ತಾಯಿ ಎಂದರೆ ಬಹಳ ಇಷ್ಟ. ಅವರ ತಾಯಿ ಕೂಡಾ ಕಿರುತೆರೆಯಲ್ಲಿ ಬಹಳ ಅದ್ಭುತ ನಟಿ.


Click it and Unblock the Notifications











