ಕಿರುತೆರೆಯಲ್ಲಿ ಮಿಂಚಿದ್ದ ನಟಿ ಸಮೀಕ್ಷಾ ಮತ್ತೊಂದು ಸಿನಿಮಾದಲ್ಲಿ ಬ್ಯುಸಿ; ಯಾವುದದು?
ಕಿರುತೆರೆ ನಟ ಕಿರಣ್ ರಾಜ್ ಅಭಿನಯದ 'ರಾನಿ' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವುದು ಸಿನಿಪ್ರಿಯರಿಗೆ ತಿಳಿದೇ ಇದೆ. 'ರಾನಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಸಮೀಕ್ಷಾ ಇದೀಗ ಮಗದೊಂದು ಸಿಹಿಸುದ್ದಿಯನ್ನು ನೀಡಿದ್ದಾರೆ. ಅದೇನಂತಿರಾ? 'ರಾನಿ' ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಮೀಕ್ಷಾ ಅವರು ಮಗದೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಸಮೀಕ್ಷಾ. ಆದಿತ್ಯ ಮತ್ತು ಸಮೀಕ್ಷಾ ಜೋಡಿಯಾಗಿ ನಟಿಸಲಿರುವ ಈ ಸಿನಿಮಾಕ್ಕೆ 'ರಾಶಿ' ಎಂದು ಹೆಸರಿಡಲಾಗಿದೆ. ವಿಜಯ್ ಪಾಳೇಗಾರ್ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿ ಶುರುವಾಗಲಿದೆ. ಅಂದ ಹಾಗೇ 'ರಾಶಿ' ಸಿನಿಮಾದಲ್ಲಿ ಸಮೀಕ್ಷಾ ಅವರು ಹೊಸ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದು, ಇಲ್ಲಿಯ ತನಕ ಕಾಣಿಸಿಕೊಂಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಈ ಮಲೆನಾಡ ಬೆಡಗಿ ಇದೀಗ ಸ್ಯಾಂಡಲ್ ವುಡ್ ನಲತಲಿ ಸಕತ್ ಬ್ಯುಸಿಯಾಗಿದ್ದಾರೆ. ಅದಕ್ಕೆ ಈ ವರ್ಷ ಬಿಡುಗಡೆಯಾಗಿರುವ ಎರಡು ಸಿನಿಮಾಗಳೇ ಕಾರಣ. ಹೌದು, ಸಮೀಕ್ಷಾ ನಟನೆಯ 'ಲವ್ ಲಿ' ಸಿನಿಮಾ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದರೆ, 'ರಾನಿ' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಆಕೆ 'ರಾಶಿ' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಅಂದ ಹಾಗೇ ಸಮೀಕ್ಷಾ ಅವರು ಚಂದನವನಕ್ಕೆ ಕಾಲಿಟ್ಟಿದ್ದು ರಾಗಿಣಿ ದ್ವಿವೇದಿ ತಂಗಿಯಾಗಿ. ಹೌದು, 'ದಿ ಟೆರರಿಸ್ಟ್' ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಅವರ ತಂಗಿಯಾಗಿ ನಟಿಸಿರುವ ಸಮೀಕ್ಷಾ ಮುಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '96' ಸಿನಿಮಾದಲ್ಲಿ ಜ್ಯೂನಿಯರ್ ಜಾನು ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಇದರ ಜೊತೆಗೆ ದರ್ಶಿತ್ ಭಟ್ ನಿರ್ದೇಶನದ 'ಫ್ಯಾನ್' ಸಿನಿಮಾದಲ್ಲಿಯೂ ಈಕೆ ಬಣ್ಣ ಹಚ್ಚಿದ್ದಾರೆ.
ಇನ್ನು 'ಮೀನಾಕ್ಷಿ ಮದುವೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಸಮೀಕ್ಷಾ, ಮುಂದೆ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ಶನಾಯ ಆಗಿ ಮೋಡಿ ಮಾಡಿದರು. ನಂತರ 'ಮೂರುಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಈಕೆ ಶ್ರಾವಣಿ, ಪಾವನಿ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಹಿರಿತೆರೆಯತ್ತ ಮುಖ ಮಾಡಿದ ಈಕೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ.
ಇನ್ನು "ಮೀನಾಕ್ಷಿ ಮದುವೆ" ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಸಮೀಕ್ಷಾ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಬೆಡಗಿ. ಮುಂದೆ "ಸುಬ್ಬಲಕ್ಷ್ಮಿ ಸಂಸಾರ" ಧಾರಾವಾಹಿಯಲ್ಲಿ ಶನಾಯ ಆಗಿ ನಟಿಸಿದ ಈಕೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದರು.
ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ನಟಿಸುವ ಅವಕಾಶ ಸಿಕ್ಕಾಗ ಸಮೀಕ್ಷಾ ಅವರಿಗೆ ಸಂತೋಷ ಆಗಿದ್ದಕ್ಕಿಂತಲೂ ಭಯವಾಗಿದ್ದೇ ಹೆಚ್ಚು. ಹೌದು, ನೆಗೆಟಿವ್ ಪಾತ್ರದಲ್ಲಿ ನಟಿಸಲು ಸಾಧ್ಯವೇ ಎಂಬ ಭಯ ಆಕೆಯನ್ನು ಕಾಡಿತ್ತು. ಆದರೆ ಧಾರಾವಾಹಿಯ ನಿರ್ದೇಶಕಿ ಸ್ವಪ್ನ ಕೃಷ್ಣ ಅವರು ಧೈರ್ಯ ತುಂಬಿದ ಮೇಲೆ ಆಕೆ ಶನಾಯ ಆಗಿ ನಟಿಸಲು ಒಪ್ಪಿಕೊಂಡಿದ್ದರು. ಮುಂದೆ ಜನರು ತೋರಿದ ಪ್ರೀತಿ, ಪಾತ್ರವನ್ನು ಇಷ್ಟಪಟ್ಟ ರೀತಿ ಕಂಡು ಶನಾಯ ಆಗಿ ನಟಿಸಿದ್ದು ಸಾರ್ಥಕವಾಯಿತು ಎಂದು ಸಮೀಕ್ಷಾಗೆ ಅನ್ನಿಸಿತು.
ಕಿರುತೆರೆ ನಂತರ ಹಿರಿತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಈಕೆಗೆ ಮೊದಲಿನಿಂದಲೂ ನಟಿಯಾಗುವ ಕನಸಿತ್ತು. ಮೊದಲ ಆಡಿಶನ್ ನಲ್ಲಿಯೇ ಪಾಸ್ ಆದ ಈಕೆ ತಮ್ಮ ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಈಕೆ ಮತ್ತೆ ಕಿರುತೆರೆಗೆ ಮರಳುತ್ತಾರಾ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











