"ದೇವರೇ ಇನ್ನೊಂದು ಜನ್ಮ ಅಂತಿದ್ರೆ, ಇಂತಹ ಅಣ್ಣನನ್ನು ಕೊಡು": ವರ್ತೂರು ಸಂತೋಷ್ ಬಗ್ಗೆ ಕಿರುತೆರೆ ನಟಿ ಪೋಸ್ಟ್ ವೈರಲ್!
ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯಲ್ಲೂ ವರ್ತೂರು ಸಂತೋಷ್ ಬಗ್ಗೆ ಚರ್ಚೆ. ಮನೆಯ ಹೊರಗೂ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದೆ. ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ವರ್ತೂರು ಸಂತೋಷ್ ಹಠ ಹಿಡಿದಿದ್ದರು.
ವರ್ತೂರು ಸಂತೋಷ್ ಕಣ್ಣೀರು ಹಾಕಿ ಪರಿ ಪರಿಯಾಗಿ ಬೇಡಿಕೊಂಡಿದ್ದರು. ಆಗ ವೀಕ್ಷಕರು ವರ್ತೂರು ಸಂತೋಷ್ ಮನೆಯೊಳಗೆ ಇರಬೇಕು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮದುವೆ ವಿಷಯ ಚರ್ಚೆಯಾಗಿತ್ತು. ಅದೀಗ ವಿವಾದಕ್ಕೆ ತಿರುಗಿದೆ.

ವರ್ತೂರು ಸಂತೋಷ್ ಮದುವೆ ವಿಚಾರ ವಿವಾದಕ್ಕೆ ತಿರುಗಿದೆ. ಈಗಾಗಲೇ ಮದುವೆ ಆಗಿರೋ ಸಂತೋಷ್ ಎರಡು ವರ್ಷಗಳಿಂದ ಪತ್ನಿಯಿಂದ ದೂರವಿದ್ದಾರೆ. ಈ ವಿಷಯವನ್ನು ಸ್ವತ: ಸಂತೋಷ್ ಮಾವ ಸೋಮನಾಥ್ ಆರೋಪ ಮಾಡಿದ್ದರು. ಈ ಮಧ್ಯೆ ಕನ್ನಡದ ಉದಯೋನ್ಮುಖ ನಟಿ ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿ ವೈರಲ್
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿರೋ ಕನ್ನಡ ಉದಯೋನ್ಮುಖ ನಟಿ ಸಮೀಕ್ಷಾ. ಇವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮುಂದಿನ ಜನ್ಮದಲ್ಲಿ ವರ್ತೂರು ಸಂತೋಷ್ ಅಣ್ಣನಾಗಿ ಪಡೆಯಬೇಕು ಅಂತ ಬರೆದುಕೊಂಡಿರೋ ಪೋಸ್ಟ್ ವೈರಲ್ ಆಗಿದೆ. ಸಮೀಕ್ಷಾ ಅಫಿಶಿಯಲ್ ಅನ್ನೋ ಖಾತೆಯಿಂದ ಈ ಸ್ಟೋರಿ ಹರಿದಾಡಿತ್ತು. ವರ್ತೂರು ವಿವಾದ ಆಗುತ್ತಿದ್ದಂತೆ ಸಮೀಕ್ಷಾ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.

ಇನ್‌ಸ್ಟಾ ಸ್ಟೋರಿಯಲ್ಲಿ ಏನಿದೆ?
ಸಮೀಕ್ಷಾ ಅಫಿಶಿಯಲ್ ಖಾತೆಯಲ್ಲಿ ಪೋಸ್ಟ್‌ನಲ್ಲಿ ಬರೆದ ಸಾಲುಗಳು ಹೀಗಿವೆ. "ನಾನು ಬಿಗ್ ಬಾಸ್‌ನ ಫ್ಯಾನ್ ಅಲ್ಲ ಅಥವಾ ನನಗೆ ಈ ಶೋ ಅನ್ನು ಅರ್ಥ ಮಾಡಿಕೊಳ್ಳಲು ಸಮರ್ಥಳಲ್ಲ. ಆದರೆ.. ಈ ವ್ಯಕ್ತಿ ಸಂತೋಷ್ ಗೆಲ್ಲಬೇಕು. ದೇವರೇ ನನಗೆ ಇನ್ನೊಂದು ಮಾನವ ಜನ್ಮ ಅಂತ ಇದ್ದರೆ, ಇಂತಹ ಒಬ್ಬ ಅಣ್ಣನನ್ನು ಕರುಣಿಸು." ಎಂದು ಬರೆದುಕೊಂಡಿದ್ದಾರೆ. ಇದು ನಟಿ ಸಮೀಕ್ಷಾ ಅವರದ್ದೇ ಇನ್‌ಸ್ಟಾ ಸ್ಟೋರಿ ಎನ್ನಲಾಗಿದೆ. ಆದರೆ, ಅಧಿಕೃತವೋ ಅಲ್ಲವೋ ಅನ್ನೋದು ತಿಳಿದು ಬಂದಿಲ್ಲ.
ಈ ಶೋ ಗೆದ್ದು ಸ್ಟಾರ್ ಆಗಿ ಹೊರಬನ್ನಿ
ಇದರೊಂದಿಗೆ ಕಿರಿತೆರೆ ನಟಿ ಸಮೀಕ್ಷಾ ಶೋ ಗೆದ್ದು ಬನ್ನಿ ಅಂತಾನೂ ಹೇಳಿದ್ದಾರೆ. "ಈ ಶೋ ಅನ್ನು ಗೆದ್ದು ಸ್ಟಾರ್ ಆಗಿ ಹೊರಗೆ ಬರುವಿರಿ ಎಂದು ಭಾವಿಸಿದ್ದೇನೆ. ಕಲರ್ಸ್ ಕನ್ನಡ ಅವರಿಗೆ ನನ್ನ ವಿಶ್ ಅನ್ನು ತಿಳಿಸಿ." ಎಂದು ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವಿವಾದಕ್ಕೂ ಮುನ್ನ ಹಾಕಿದ್ದಾ? ಇಲ್ಲ ವಿವಾದದ ಬಳಿಕ ಹಾಕಿದ್ದಾ? ಅಂತ ಚರ್ಚೆ ಮಾಡಲಾಗುತ್ತಿದೆ.
ಕಿರುತೆರೆ ನಟಿ ಸಮೀಕ್ಷಾ ಹಿನ್ನೆಲೆ ಏನು?
ಕನ್ನಡದ ಉದಯೋನ್ಮುಖ ನಟಿ ಈಗಾಗಲೇ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸುಬ್ಬಲಕ್ಷ್ಮೀ ಸಂಸಾರ' , 'ಮೂರು ಗಂಟು' ,'ಮುದ್ದು ಮಣಿಗಳು', 'ಮೀನಾಕ್ಷಿ ಮದುವೆ'ಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೇ 'ದಿ ಟೆರರಿಸ್ಟ್', '99', 'ನೀರೆ' ಅನ್ನೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ನಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಮೂಲದ ನಟಿಯ ಇನ್‌ಸ್ಟಾಗ್ರಾಂ ಸ್ಟೋರಿ ವೈರಲ್ ಆಗುತ್ತಿದೆ. ಅದಕ್ಕೆ ತರಹೇವಾರಿ ಕಮೆಂಟ್‌ಗಳು ಬರುತ್ತಿದೆ. ಆದರೆ, ಇದು ಅವರದ್ದೇ ಪೋಸ್ಟ್ ಹೌದಾ? ಅಲ್ಲವಾ? ಅನ್ನೋದು ಮಾತ್ರ ಅವರೇ ಧೃಡೀಕರಿಸಬೇಕಿದೆ.


Click it and Unblock the Notifications











