ಒಂದು ವರ್ಷದಲ್ಲಿ 40 ಸಿನಿಮಾ ಮಾಡಿದ್ದೇನೆ ಅಂತ್ಹೇಳಿ ಕಾಲೆಳೆಸಿಕೊಂಡ ಸಂಜನಾ.!

ಇಷ್ಟು ದಿನ ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಹಿಂದಿ ಕಿರುತೆರೆಗೆ ಕಾಲಿಟಿದ್ದಾರೆ. ಹಿಂದಿಯ ರಿಯಾಲಿಟಿ ಶೋನಲ್ಲಿ ನಟಿ ಸಂಜನಾ ಗಲ್ರಾನಿ ಸ್ಪರ್ಧಿಸುತ್ತಿದ್ದಾರೆ.

ವಧು-ವರ ಅನ್ವೇಷಣೆ ಕಾನ್ಸೆಪ್ಟ್ ನಲ್ಲಿ ಮೂಡಿಬರುತ್ತಿರುವ 'ಮುಜ್ಸೆ ಶಾದಿ ಕರೋಗಿ' ರಿಯಾಲಿಟಿ ಶೋನಲ್ಲಿ ನಟಿ ಸಂಜನಾ ರಿಯಲ್ ವಧು ಆಗಿದ್ದಾರೆ. ಶೋನಲ್ಲಿ ವರ ಪಾರಸ್ ಛಾಬ್ರಾ ಮನೆಗಲ್ಲುವುದೇ ಸಂಜನಾಗೆ ಇರುವ ಬಿಗ್ ಟಾಸ್ಕ್.

''ಪಾರಸ್ ಛಾಬ್ರಾ ಅಂದ್ರೆ ನನಗೆ ತುಂಬಾ ಇಷ್ಟ. ಅವರಿಗಾಗಿ ಸಿನಿಮಾನ ಪಕ್ಕಕ್ಕೆ ಇಟ್ಟು ಇಲ್ಲಿಗೆ ಬಂದಿದ್ದೇನೆ'' ಅಂತ ಹೇಳಿದ್ದಾರೆ ಸಂಜನಾ. ಅದೆಲ್ಲ ಇರಲಿ.. ಕಾರ್ಯಕ್ರಮದ ವೇದಿಕೆ ಮೇಲೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿದ್ದಾಗ, ಸಂಜನಾ ಒಂದು ಎಡವಟ್ಟು ಮಾಡಿದರು. ಆ ಎಡವಟ್ಟಿನಿಂದ ಕಾರ್ಯಕ್ರಮದ ನಿರೂಪಕ ಪದೇ ಪದೇ ಸಂಜನಾ ರನ್ನ ಟ್ರೋಲ್ ಮಾಡುತ್ತಿದ್ದರು. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಸಂಜನಾ ಪರಿಚಯ ಮಾಡಿಕೊಂಡಿದ್ದು ಹೇಗೆ.?

ಸಂಜನಾ ಪರಿಚಯ ಮಾಡಿಕೊಂಡಿದ್ದು ಹೇಗೆ.?

''ರಾಣಿಯೋಂಕೆ ರಾಣಿ... ಸಂಜನಾ ಗಲ್ರಾನಿ... ನಾನು ಬೆಂಗಳೂರು, ದಕ್ಷಿಣ ಭಾರತದಿಂದ ಬಂದಿದ್ದೇನೆ. ನಾನು ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. 12 ವರ್ಷ ಇದ್ದಾಗ ಬಾಲನಟಿಯಾಗಿ ನಟಿಸಿದ್ದೇನೆ. 16-17 ವರ್ಷ ಇದ್ದಾಗ ಹೀರೋಯಿನ್ ಆದೆ'' ಎಂದು ತಮ್ಮನ್ನ ಸಂಜನಾ ಗಲ್ರಾನಿ ಪರಿಚಯಿಸಿಕೊಂಡರು. ಜೊತೆಗೆ ಮತ್ತೊಂದು ವಾಕ್ಯವನ್ನು ಹೇಳಿದರು.

ಸಂಜನಾ ತಗಲಾಕೊಂಡಿದ್ದು ಎಲ್ಲಿ.?

ಸಂಜನಾ ತಗಲಾಕೊಂಡಿದ್ದು ಎಲ್ಲಿ.?

ಸಂಜನಾ ತಮ್ಮನ್ನ ತಾವು ಪರಿಚಯಿಸಿಕೊಳ್ಳುತ್ತಿದ್ದ ವೇಳೆ ''ನಾನು ಒಂದೇ ವರ್ಷದಲ್ಲಿ 40 ಸಿನಿಮಾ ಮಾಡಿದ್ದೇನೆ'' ಎಂದು ಹೇಳಿಬಿಟ್ಟರು. ಆಗ ಪಕ್ಕದಲ್ಲೇ ನಿಂತಿದ್ದ ನಿರೂಪಕ ಶಾಕ್ ಆದರು. ಬಳಿಕ ''ಅಂದ್ರೆ... ಡೆಬ್ಯೂ ಮಾಡಿದಾಗಿನಿಂದ ಈಗಿನ ವರೆಗೂ... ಅಂದ್ರೆ 10 ವರ್ಷಗಳಲ್ಲಿ 40 ಸಿನಿಮಾ ಮಾಡಿದ್ದೇನೆ'' ಎಂದು ಸಮಜಾಯಿಷಿ ನೀಡಲು ಆರಂಭಿಸಿದರು ನಟಿ ಸಂಜನಾ.

ಟ್ರೋಲ್ ಆದ ಸಂಜನಾ

ಟ್ರೋಲ್ ಆದ ಸಂಜನಾ

''ಒಂದು ವರ್ಷದಲ್ಲಿ 40 ಸಿನಿಮಾ ಮಾಡಿದ್ದೇನೆ'' ಎಂದು ಸಂಜನಾ ಹೇಳಿದ್ಮೇಲೆ, ಅದನ್ನೇ ಇಟ್ಟುಕೊಂಡು ನಿರೂಪಕ ಪದೇ ಪದೇ ಕಾಲೆಳೆದರು. ''ದಕ್ಷಿಣದ ಫೀಮೇಲ್ ಅಕ್ಷಯ್'' ಅಂತೆಲ್ಲಾ ನಿರೂಪಕ ಸಂಜನಾರನ್ನ ಕಿಚಾಯಿಸಿದರು.

ಸಿನಿಮಾ ಪಕ್ಕಕ್ಕಿಟ್ಟು ರಿಯಾಲಿಟಿ ಶೋ

ಸಿನಿಮಾ ಪಕ್ಕಕ್ಕಿಟ್ಟು ರಿಯಾಲಿಟಿ ಶೋ

ಸದ್ಯ ತಮ್ಮ ಕೈಯಲ್ಲಿ ಇನ್ನೂ ಆರೇಳು ಸಿನಿಮಾ ಇದೆ ಅಂತ ಹೇಳಿಕೊಳ್ಳುವ ಸಂಜನಾ.. ಇದೀಗ ಸೀದಾ ಹಿಂದಿಯ ರಿಯಾಲಿಟಿ ಶೋ ಸೇರಿದ್ದಾರೆ. ನಿಜಕ್ಕೂ ಬಾಳಸಂಗಾತಿಯನ್ನು ಅರಸಿ, 'ಮುಜ್ಸೆ ಶಾದಿ ಕರೋಗಿ' ಶೋಗೆ ಸಂಜನಾ ಕಾಲಿಟ್ರಾ.? ಈ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.!

More from Filmibeat

English summary
Kannada Actress Sanjana gets trolled in Mujse Shaadi Karoge Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X