ಈ 'ಕೆಜಿಎಫ್' ನಟಿ ಕಿರುತೆರೆಯಲ್ಲೂ ಬ್ಯುಸಿ; 'ನಾತಿಚರಾಮಿ' ಎನ್ನುತ್ತಿರುವ ಇವರ ಬಗ್ಗೆ ನಿಮಗೆಷ್ಟು ಗೊತ್ತು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ನಾತಿಚರಾಮಿ' ಕೂಡಾ ಒಂದು. 'ನಾತಿಚರಾಮಿ' ಧಾರಾವಾಹಿಯ ನಾಯಕ ಅಗಸ್ತ್ಯನಿಗೆ ತಾಯಿಯಿಲ್ಲ. ತಾಯಿಯ ಪ್ರೀತಿಯಿಂದ ವಂಚಿತನಾಗಿರುವ ಅಗಸ್ತ್ಯನಿಗೆ ದೇವರ ಮೇಲೆ ವಿಪರೀತ ಕೋಪ. ತನ್ನಿಂದ ತಾಯಿಯ ಪ್ರೀತಿಯನ್ನು ಕಸಿದುಕೊಂಡಿದ್ದು ಈ ದೇವರೇ ಎಂದು ನಂಬಿರುವ ಅಗಸ್ತ್ಯನ ಬದುಕಿನಲ್ಲಿ ಬನಶಂಕರಮ್ಮನ ಭಕ್ತೆ, ದೈವಭಕ್ತೆಯಾಗಿರುವ ಹುಡುಗಿಯ ಆಗಮನವಾದರೆ ಏನಾಗುತ್ತದೆ ಎಂಬುದೇ ಧಾರಾವಾಹಿಯ ಕಥಾ ಹಂದರ.

ಇತ್ತೀಚೆಗಷ್ಟೇ ಶುರುವಾಗಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಶಾಂಭವಿ ವೆಂಕಟೇಶ್. ಆ ಮೂಲಕ ಮತ್ತೊಮ್ಮೆ ಕಿರುತೆರೆಗೆ ಮರಳಿರುವ ಈಕೆ ನೆಗೆಟಿವ್ ರೋಲ್‌ನಲ್ಲಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

Kannada actress Shambhavi Venkatesh shining in Naticharaami serial

ಅಂದ ಹಾಗೇ ಶಾಂಭವಿ ವೆಂಕಟೇಶ್ ಅವರು ಈ ಹಿಂದೆ 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸಿದ್ದರು. ನಾಯಕ ಗೌತಮ್ ದಿವಾನ್ ಅವರ ಮಾಜಿ ಪ್ರೇಯಸಿ ಮಾನ್ಯಳ ಪಾತ್ರಕ್ಕೆ ಜೀವ ತುಂಬಿದ್ದ ಶಾಂಭವಿ ವೆಂಕಟೇಶ್ ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ್ದರು. ಎರಡು ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ 'ಅಮೃತಧಾರೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದ ಈಕೆ "ಐ ಆ್ಯಮ್ ಬ್ಯಾಕ್.. ಚೀಯರ್ಸ್ ಟು ದಿ ನ್ಯೂ ಬಿಗಿನಿಂಗ್.. ನಿಮ್ಮೆಲ್ಲರ ಹಾರೈಕೆ ಇರಲಿ" ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿ ದಿಶಾ ಎನ್ನುವ ಖಳಮನಾಯಕಿಯಾಗಿ ಕಾಣಿಸಿಕೊಂಡಿದ್ದ ಶಾಂಭವಿ ವೆಂಕಟೇಶ್ ನಂತರ ಗರ್ಭಿಣಿಯಾಗಿದ್ದ ಕಾರಣ ನಟನೆಗೆ, ದಿಶಾ ಪಾತ್ರಕ್ಕೆ ವಿದಾಯ ಹೇಳಿದ್ದರು. ಧಾರಾವಾಹಿಯಿಂದ ಹೊರಬಂದ ಕೆಲವೇ ದಿನಗಳಲ್ಲಿ ತಾವು ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಕೂಡಾ ಆಕೆ ಹಂಚಿಕೊಂಡಿದ್ದರು.

Kannada actress Shambhavi Venkatesh shining in Naticharaami serial

2021 ರ ಜೂನ್‌ನಲ್ಲಿ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ಶಾಂಭವಿ ಮುಂದೆ ಎರಡು ವರ್ಷಗಳ ಕಾಲ ಮಕ್ಕಳ ಪಾಲನೆ ಪೋಷಣೆಗಾಗಿ ನಟನೆಯಿಂದ ಸಹಜವಾಗಿ ದೂರವಿದ್ದರು. ಇದೀಗ ಮತ್ತೆ ನಟನೆಯತ್ತ ಮರಳಿರುವ ಶಾಂಭವಿ ಅವರು ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೇ ಶಾಂಭವಿ ಅವರ ಕಿರುತೆರೆ ಪಯಣ ಶುರುವಾಗಿದ್ದು ಹಾರರ್ ಧಾರಾವಾಹಿಯ ಮೂಲಕ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿಗೂಢ ರಾತ್ರಿ' ಧಾರಾವಾಹಿಯಲ್ಲಿ ಮಂದಾಕಿನಿಯಾಗಿ ಕಾಣಿಸಿಕೊಂಡ ಈಕೆ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಮುಂದೆ 'ಪಾರು', ಅನಂತರ 'ಅಮೃತಧಾರೆ' ಈಗ 'ನಾತಿಚರಾಮಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ಈಕೆ ಹಿರಿತೆರೆಯಲ್ಲಿಯೂ ಮಿಂಚಿದ ಬೆಡಗಿ.

'ಕೆ.ಜಿ.ಎಫ್ ಚಾಪ್ಟರ್ 1' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿಪ್ರಿಯರನ್ನು ರಂಜಿಸಿದ್ದಾರೆ ಶಾಂಭವಿ. ಇದರ ಜೊತೆಗೆಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದಲ್ಲಿಯೂ ನಾಯಕಿಯ ಗೆಳತಿಯಾಗಿಯೂ ಈಕೆ ಕಾಣಿಸಿಕೊಂಡಿದ್ದರು.

More from Filmibeat

English summary
Kannada actress Shambhavi Venkatesh shining in Naticharaami serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X