'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್ ಬಗ್ಗೆ ಶುಭಾ ಪೂಂಜಾ ಏನಂದರು.?

By ಫಿಲ್ಮಿಬೀಟ್ ಡೆಸ್ಕ್

'ಕರಿ ಚಿರತೆ' ದುನಿಯಾ ವಿಜಯ್ ಹಾಗೂ ನಟಿ ಶುಭಾ ಪೂಂಜಾ ಬಗ್ಗೆ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿಯೂ ಕೇಳಿಬಂದ ಗುಸು ಗುಸು ಗುಟ್ಟಾಗಿ ಉಳಿದಿಲ್ಲ. ಈಗ ಅದೆಲ್ಲ 'ಮುಗಿದ' ಅಧ್ಯಾಯ ಬಿಡಿ ಅಂತ ಮೂಗು ಮುರಿದರೂ, ನಟ ದುನಿಯಾ ವಿಜಯ್ ಬಗ್ಗೆ ನಟಿ ಶುಭಾ ಪೂಂಜಾ ಮಾತನಾಡಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಬಗ್ಗೆ ನಟಿ ಶುಭಾ ಪೂಂಜಾ ಬಾಯ್ಬಿಟ್ಟಿದ್ದಾರೆ. ಆಕೆ ಏನು ಮಾತನಾಡಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಆಟದ ಮಧ್ಯೆ ಕಾಮೆಂಟ್

ಆಟದ ಮಧ್ಯೆ ಕಾಮೆಂಟ್

ಬಲೂನ್ ಗಳನ್ನು ಒಡೆದು ಅದರ ಹಿಂದಿರುವ ನಟ/ನಟಿಯರ ಬಗ್ಗೆ ನಟಿ ಪೂಜಾ ಗಾಂಧಿ ಹಾಗೂ ಶುಭಾ ಪೂಂಜಾ ಕಾಮೆಂಟ್ ಮಾಡಬೇಕಿತ್ತು. ಕೊನೆಯಲ್ಲಿ ಉಳಿದಿದ್ದ ನೀಲಿ ಬಣ್ಣದ ಬಲೂನ್ ಒಡೆದ ಶುಭಾ ಪೂಂಜಾ ಗೆ 'ದುನಿಯಾ ವಿಜಯ್' ಫೋಟೋ ಲಭ್ಯವಾಯ್ತು. ಹೀಗಾಗಿ ಬೇರೆ ದಾರಿಯಿಲ್ಲದೆ, ದುನಿಯಾ ವಿಜಯ್ ಬಗ್ಗೆ ಶುಭಾ ಪೂಂಜಾ ಮಾತನಾಡಲೇಬೇಕಾಯ್ತು.

ದುನಿಯಾ ವಿಜಯ್ ಬಗ್ಗೆ ಶುಭಾ ಪೂಂಜಾ ಕಾಮೆಂಟ್

ದುನಿಯಾ ವಿಜಯ್ ಬಗ್ಗೆ ಶುಭಾ ಪೂಂಜಾ ಕಾಮೆಂಟ್

''ನಾನು ಅತಿ ಹೆಚ್ಚು ಚಿತ್ರಗಳನ್ನು ಮಾಡಿದ್ದು ದುನಿಯಾ ವಿಜಯ್ ರವರ ಜೊತೆ. ನಾನು ಬ್ಯಾಕ್ ಟು ಬ್ಯಾಕ್ ನಾಲ್ಕು ಸಿನಿಮಾಗಳನ್ನು ವಿಜಿ ಜೊತೆ ಮಾಡಿದೆ'' - ಶುಭಾ ಪೂಂಜಾ

ಎಲ್ಲವನ್ನೂ ಹೇಳಿಕೊಟ್ಟಿದ್ದು ವಿಜಿ

ಎಲ್ಲವನ್ನೂ ಹೇಳಿಕೊಟ್ಟಿದ್ದು ವಿಜಿ

''ವಿಜಿ ಬಗ್ಗೆ ಹೇಳ್ಬೇಕು ಅಂದ್ರೆ, ನನಗೆ ಆಕ್ಟಿಂಗ್ ಮತ್ತು ಡಬ್ಬಿಂಗ್... ಎರಡನ್ನೂ ಹೇಳಿಕೊಟ್ಟಿದ್ದು ವಿಜಿ.ನನಗೆ ಡಬ್ಬಿಂಗ್ ಸೆನ್ಸ್ ಇರಲಿಲ್ಲ. ಡಬ್ಬಿಂಗ್ ಮಾಡುವುದು ಹೇಗೆ ಅಂತ ವಿಜಿ ನನಗೆ ಹೇಳಿಕೊಟ್ಟರು'' - ಶುಭಾ ಪೂಂಜಾ

ಹೆಲ್ತಿ ಟಿಪ್ಸ್

ಹೆಲ್ತಿ ಟಿಪ್ಸ್

''ವರ್ಕೌಟ್ ಬಗ್ಗೆ ನನಗೆ ತುಂಬಾ ಟಿಪ್ಸ್ ಕೊಟ್ಟಿರುವುದು ವಿಜಿ'' ಎಂದಷ್ಟೇ ದುನಿಯಾ ವಿಜಯ್ ಬಗ್ಗೆ ಶುಭಾ ಪೂಂಜಾ ಹೇಳಿದರು.

More from Filmibeat

English summary
Kannada Actress Shubha Poonja comments on Duniya Vijay in Colors Super channel's popular show 'Super Talk time'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X