ದುನಿಯಾ ವಿಜಯ್ ಜೊತೆಗಿನ 'ಗಾಸಿಪ್' ಬಗ್ಗೆ ಶುಭಾ ಕೊಟ್ಟ ಉತ್ತರವಿದು.!
ಒಂದ್ಕಾಲದಲ್ಲಿ ನಟ ದುನಿಯಾ ವಿಜಯ್ ಹಾಗೂ ನಟಿ ಶುಭಾ ಪೂಂಜಾ 'ಗಾಸಿಪ್' ಕಾಲಂಗಳಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದರು. ''ದುನಿಯಾ ವಿಜಯ್ ಹಾಗೂ ಶುಭಾ ಪೂಂಜಾ ಮದುವೆ ಆಗಿದ್ದಾರಂತೆ'' ಎಂಬ ಅಂತೆ-ಕಂತೆಗಳು ಗಾಂಧಿನಗರದ ತುಂಬೆಲ್ಲ ಗಿರಕಿ ಹೊಡೆದಿದ್ದವು.
ಆದರೆ, 'ಇವೆಲ್ಲ ಗಾಸಿಪ್ ಅಷ್ಟೇ' ಎಂದು ಹೇಳುತ್ತಾ ಬರುತ್ತಿದ್ದ ನಟಿ ಶುಭಾ ಪೂಂಜಾ ಇದೀಗ ಅದನ್ನೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಿಪೀಟ್ ಮಾಡಿದ್ದಾರೆ.
ನಿರೂಪಕ ಅಕುಲ್ ಬಾಲಾಜಿ ಎಷ್ಟೇ ಸುತ್ತಿ ಬಳಸಿ ಕೇಳಿದರೂ, ಶುಭಾ ಬಾಯಿಂದ ಬಂದ ಉತ್ತರ ಇಷ್ಟೆ.! ಮುಂದೆ ಓದಿರಿ...

ಲವ್ ಸ್ಟೋರಿ ಬಗ್ಗೆ ಹೇಳಿ...
''ಇಂಡಸ್ಟ್ರಿಯಲ್ಲಿ ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ...'' ಎಂದು ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ 'ನಗುನಗುತ್ತಾ'..... ಉತ್ತರ ನೀಡಲು ಶುಭಾ ಪೂಂಜಾ ನಿರಾಕರಿಸಿದರು.

'ಗಾಸಿಪ್' ಬಗ್ಗೆ ಮಾತು...
''ಒಂದು ಗಾಸಿಪ್ ಇತ್ತಲ್ಲ... ಅದರ ಬಗ್ಗೆ....'' ಎಂದು ಅಕುಲ್ ಬಾಲಾಜಿ ಕೇಳಿದಕ್ಕೆ, ''ಗಾಸಿಪ್ ಅಂದ್ರೆ, ಅದು ಗಾಸಿಪ್ಪೇ ಆಗ್ಹೋಯ್ತಲ್ಲ.!'' ಎಂದು ಜಾಣ್ಮೆಯ ಉತ್ತರ ನೀಡಿದರು ಶುಭಾ ಪೂಂಜಾ.

ಡೈರೆಕ್ಟ್ ಆಗಿ ಮ್ಯಾಟರ್ ಗೆ ಬಂದ ಅಕುಲ್
''ದುನಿಯಾ ವಿಜಯ್ ಜೊತೆ ನಿಮ್ಮ ಹೆಸರು ತುಂಬಾ ಕೇಳಿಬರುತ್ತಿತ್ತು ಅಲ್ವಾ.?'' ಎಂದು ಅಕುಲ್ ಬಾಲಾಜಿ ಡೈರೆಕ್ಟ್ ಆಗಿ ಕೇಳಿದ್ದಕ್ಕೆ, ''ಹೌದು'' ಎಂದು ಶುಭಾ ಪೂಂಜಾ ಒಪ್ಪಿಕೊಂಡರು.

ಮತ್ತೆ 'ಗಾಸಿಪ್' ಮಾತು...
''ಫ್ರೆಂಡ್ಲಿನಾ ಅಥವಾ ಸಿನಿಮಾವರೆಗಾ...'' ಅಂತ ತಮ್ಮ ಪ್ರಶ್ನೆಯನ್ನ ಅಕುಲ್ ಮುಂದುವರೆಸಿದ್ಮೇಲೆ, ''ಅದೆಲ್ಲ ಗಾಸಿಪ್ ಅಷ್ಟೇ'' ಎಂದಷ್ಟೇ ಶುಭಾ ಪೂಂಜಾ ಹೇಳಿದರು.


Click it and Unblock the Notifications











