ವೈರಲ್ ಆಯಿತು ಶ್ವೇತಾ ಚೆಂಗಪ್ಪ ಅವರ ಹೊಸ ಲುಕ್, ಸಂತೂರ್ ಮಮ್ಮಿ ಎಂದ ಫ್ಯಾನ್ಸ್...!

By ಪೂರ್ವ

ಪಟ ಪಟನೆ ಮಾತನಾಡಿ ಎಲ್ಲರ ಮನಸ್ಸು ಗೆದ್ದವರು ಶ್ವೇತಾ ಚಂಗಪ್ಪ. ಮೊದಲೆಲ್ಲ ಆಕ್ಟಿಂಗ್ ಗೆ ಹೆಚ್ಚು ಮಹತ್ವ ಕೊಡುತ್ತಿದ್ದ ಶ್ವೇತಾ ಅವರಿಗೆ ನಿರೂಪಣೆಯ ಮೇಲೂ ಒಲವು. ಇವರು ನಡೆಸುತ್ತಿದ್ದ ಕಾರ್ಯಕ್ರಮಗಳು ಎಲ್ಲರ ಮನ ಗೆಲ್ಲುತ್ತಿದ್ದವೂ. ಆಂಕರಿಂಗ್ ಗೆ ಸೈ, ನಟನೆಗೂ ಜೈ ಹಾಗೆಯೇ ಡ್ಯಾನ್ಸ್ ಮಾಡುವುದರಲ್ಲೂ ಇವರು ಯಾರಿಗಿಂತಲು ಕಡಿಮೆ ಇಲ್ಲ.

ಇಂಥಾ ಶ್ವೇತಾ ಚಂಗಪ್ಪ ಅವರು ಸದ್ಯ ಬಿಳಿ ಬಣ್ಣದ ಫ್ಲವರ್ ಪ್ರಿಂಟೆಡ್ ಸೀರೆಯುಟ್ಟ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ಧಾರೆ. ಹಾಗೆಯೇ ಇವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ಒಂದು ತಂಡದ ಮಾಲೀಕರು ಕೂಡಾ ಆಗಿದ್ದಾರೆ. ಇದೀಗ ಶ್ವೇತಾ ಸೀರೆಯಲ್ಲಿ ಬಹಳ ಮುದ್ದು ಮುದ್ದಾಗಿ ಕಾಣಿಸಿದ್ದಾರೆ. ಇವರನ್ನು ನಿಜಕ್ಕೂ ಸಂತೂರ್ ಮಮ್ಮಿ ಎಂದು ಹೇಳಿದರು ತಪ್ಪಿಲ್ಲ. ಮಡಿಕೇರಿಯ ಕುವರಿ ಆಗಿರುವ ಶ್ವೇತಾ ನಟನೆಯಿಂದ ಎಲ್ಲರ ಮನಸನ್ನು ಗೆದ್ದಿದ್ದರು

kannada-actress-shweta-changappa-photo-viral

ಅದಾದ ಬಳಿಕ ಸೃಜನ್ ಲೋಕೇಶ್ ನಡೆಸುತ್ತಿದ್ದ ಮಜಾ ಟಾಕೀಸ್ ನಲ್ಲಿ ನಟನೆ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದಿರುವ ಚೆಲುವೆ ಎಂದು ಹೇಳಿದರೆ ತಪ್ಪಾಗದು. ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸಕ್ರಿಯ ಆಗಿರುವ ನಟಿ ಎಂದು ಹೇಳಿದರೆ ತಪ್ಪಾಗದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಫೋಟೋ ವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿಪಟ್ಟಿದ್ದಾರೆ.

ಮುತ್ತಿನ ಹಾರದಲ್ಲಿ ಕಂಗೊಳಿಸಿದ ನಟಿ

ಶ್ವೇತಾ ಚೆಂಗಪ್ಪ ಅವರ ಈ ಫೋಟೋಗಳಿಗೆ ಸಾಕಷ್ಟು ಲೈಕ್ ಗಳು ಬಂದಿವೆ. ಹಾಗೆಯೇ ಕೆಲವರು ಸೋ ಕ್ಯೂಟ್, ಸಂತೂರ್ ಮಮ್ಮಿ, ಬ್ಯೂಟಿಫುಲ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಸಾರಿಯೊಂದಿಗೆ ಅವರು ಧರಿಸಿದ ಮುತ್ತಿನ ಹಾರ ಮಾತ್ರ ಬಹಳ ಅದ್ಭುತವಾಗಿ ಅವರಿಗೆ ಕಾಣಿಸುತ್ತಿದೆ. ಇನ್ನೂ ಶ್ವೇತಾ ಚಂಗಪ್ಪ ಅವರ ಫೋಟೋಗಳನ್ನು ಮೃಣಾಲ್ ಎಸ್ ಕಶ್ಯಪ್ ಸೆರೆ ಹಿಡಿದಿದ್ದು, ಕೀರ್ತಿರಾಮ್ ಅವರು ಮೇಕಪ್ ಮಾಡಿದ್ದಾರೆ.

kannada actress Shweta changappa photo viral

ಸಿನಿಮಾದಲ್ಲಿ ಹೆಸರು ಮಾಡಿದ ಶ್ವೇತಾ

ಶ್ವೇತಾ ಚಂಗಪ್ಪ ಸಿನಿಮಾ ಇಂಡಸ್ಟ್ರಿ ಗೆ ಬಂದು ಸುಮಾರು 20 ವರುಷಗಳೇ ಕಳೆದು ಹೋಗಿದೆ. ಕಾದಂಬರಿ ಧಾರಾವಾಹಿಯ ಮೂಲಕ ಎಲ್ಲರ ಮನಸ್ಸನ್ನೂ ಕದ್ದ ಶ್ವೇತಾ ಚಂಗಪ್ಪ ಆ ನಂತರ ಹಿಂದಿರುಗಿ ನೋಡಿದ್ದೆ ಇಲ್ಲ. ಅದೆಷ್ಟು ಬಾರಿ ಸೋಲು ಗೆಲುವು ಗಳು ಎದುರಾದರು ಜೀವನದಲ್ಲಿ ನಾನು ಎನನ್ನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಅವರಿಗೆ ಇತ್ತು. ನಟನೆಯ ಜೊತೆ ಜೊತೆಗೆ ಆಂಕರಿಂಗ್ ನತ್ತ ಶ್ವೇತಾ ಮನಸ್ಸು ವಾಲಿತ್ತು

ಗಂಡ- ಮಗನೊಂದಿಗೆ ಖುಷಿಯಾಗಿರುವ ನಟಿ

ಇನ್ನೂ ಶ್ವೇತಾ ಶಿವಣ್ಣ ಅವರ 125ನೇ ಸಿನಿಮಾ ವೇದಾದಲ್ಲಿ ಪಾರಿ ಆಗಿ ಅಭಿನಯಿಸಿದ್ದಾರೆ. ಶ್ವೇತಾ ತಮ್ಮ ಗಂಡ ಹಾಗೂ ಮಗನೊಂದಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಶ್ವೇತಾ ಚಂಗಪ್ಪ ಸೆಪ್ಟೆಂಬರ್‌ ನಲ್ಲಿ ಮಗುವಿಗೆ ಜನ್ಮ ನೀಡಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X