ರಾಧ ಮಿಸ್ ಈಗ ನಟಿಯಷ್ಟೇ ಅಲ್ಲ ನಿರ್ಮಾಪಕಿ; ಸಿನಿಮಾ ನಿರ್ಮಿಸಿ ಗೆದ್ದ ನಟಿ ಶ್ವೇತಾ ಪ್ರಸಾದ್
ನಟಿ ಶ್ವೇತಾ ಪ್ರಸಾದ್ ಎನ್ನುವ ಬದಲು ರಾಧಾ ಮಿಸ್ ಎಂದರೆ ಕನ್ನಡ ಜನತೆಗೆ ಬೇಗ ಪರಿಚಯ ಸಿಗಬಹುದು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಹಳ ಪಾಪ್ಯುಲರ್ ಧಾರಾವಾಹಿ 'ರಾಧಾರಮಣ' ದಲ್ಲಿ ರಾಧಾ ಮಿಸ್ ಪಾತ್ರದಲ್ಲಿ ಕಾಣಿಸಿಕೊಂಡವರೇ ನಟಿ ಶ್ವೇತಾ ಪ್ರಸಾದ್.
ಮೊದಲಿಗೆ ಮರಾಠಿ ಧಾರಾವಾಹಿ ಒಂದರ ರಿಮೇಕ್ ಆಗಿ ಪ್ರಸಾರ ಆಗಿದ್ದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಶ್ವೇತಾ ಪ್ರಸಾದ್ ನಟನೆಗೆ ಕಾಲಿಟ್ಟರು. ತಮ್ಮ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದರು. ಮುಂದೆ 'ರಾಧಾರಮಣ' ಧಾರಾವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು.

ಮುಗ್ಧ ಮನಸ್ಸಿನ, ಸಿಂಪಲ್ ಹುಡುಗಿ ಆರಾಧನಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು ನಟಿ ಶ್ವೇತಾ. ಇವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಶ್ರೀರಸ್ತು ಶುಭಮಸ್ತು' ಹಾಗೂ 'ರಾಧಾ ರಮಣ' ಎರಡು ಧಾರಾವಾಹಿಗಳು ಟಿಆರ್‌ಪಿಯಲ್ಲಿ ಯಾವಾಗಲೂ ಮುಂದಿತ್ತು.
ಈ ರೀತಿ ಕಿರುತೆರೆ ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ನಟಿ ಶ್ವೇತಾ 'ರಾಧಾ ರಮಣ' ಧಾರಾವಾಹಿ ನಂತರ ನಟನೆಯಿಂದ ದೂರವೇ ಉಳಿದರು. ತಮ್ಮದೇ ಆದ ಎನ್‌ಜಿಓ ಸೃಷ್ಟಿಸಿಕೊಂಡು ಅದರಲ್ಲೇ ಕಾರ್ಯನಿರತರಾಗಿದ್ದ ನಟಿ ಶ್ವೇತಾ ಕೊರೋನ ಲಾಕ್ ಡೌನ್ ಸಮಯದಲ್ಲಂತೂ ಬಹಳ ವಿಭಿನ್ನ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದರು. ಆರ್ ಜೆ ಪ್ರದೀಪ್ ಅವರ ಪತ್ನಿ ಆಗಿರುವ ಈಕೆ, ಆಗಾಗ ಒಂದಷ್ಟು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು.

ಏನೇ ಆದರೂ ನಟಿ ಶ್ವೇತಾ ಕಿರುತೆರೆಗೆ ಯಾವಾಗ ವಾಪಸ್ ಬರುತ್ತಾರೆ ಎಂಬ ಪ್ರಶ್ನೆ ಇವರ ಅಭಿಮಾನಿಗಳಲ್ಲಿ ಸದಾ ಇದೆ. ನಟನೆಗೆ ಮರಳುವ ಯೋಚನೆ ಇಲ್ಲದಿದ್ದರೂ ಹೊಸದೊಂದು ಹೆಜ್ಜೆಯ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ ನಟಿ ಶ್ವೇತಾ ಪ್ರಸಾದ್.
ಹೌದು, ಇತ್ತೀಚೆಗಷ್ಟೇ ತೆರೆಕಂಡಿರುವ 'ಮರ್ಯಾದೆ ಪ್ರಶ್ನೆ' ಎಂಬ ಸಿನಿಮಾದ ನಿರ್ಮಾಪಕಿಯಾಗಿ ನಟಿ ಶ್ವೇತಾ ಪ್ರಸಾದ್ ಹೊರಹೊಮ್ಮಿದ್ದಾರೆ. ಇವರ ಪತಿ ಆರ್ ಜೆ ಪ್ರದೀಪ್ ಅವರೇ ಬರೆದಿರುವ ಕಥೆಯೇ 'ಮರ್ಯಾದೆ ಪ್ರಶ್ನೆ' ಸಿನಿಮಾ ಆಗಿದೆ. ಮಧ್ಯಮ ವರ್ಗದ ಜನರ ಜೀವನವನ್ನು ಬಹಳ ವಿಭಿನ್ನ ಹಾಗೂ ಸೊಗಸಾಗಿ ಹೆಣೆದಿಟ್ಟಿದೆ. ಈ ಸಿನಿಮಾದ ನಿರ್ಮಾಪಕವಾಗಿರುವ ನಟಿ ಶ್ವೇತಾ ಪ್ರಸಾದ್ ಅವರು ಇದೀಗ ಯಶಸ್ವಿ ನಿರ್ಮಾಪಕಿ ಎಂಬ ಹೆಗ್ಗಳಿಕೆಯನ್ನೂ ಗಳಿಸಿದ್ದಾರೆ.
'ಮರ್ಯಾದೆ ಪ್ರಶ್ನೆ' ಸಿನಿಮಾದಲ್ಲಿ ಬಹಳಷ್ಟು ಖ್ಯಾತ ನಟರು ನಟಿಸಿರುವುದಲ್ಲದೆ ಒಂದಷ್ಟು ಹೊಸ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಟರಾದ ರಾಜೇಶ್ ಅಡಿಗ, ಶೈನ್ ಶೆಟ್ಟಿ, ತೇಜು ಬೆಳವಾಡಿ, ಬಹಳ ವರ್ಷಗಳ ನಂತರ ಕಾಣಿಸಿಕೊಂಡಿರುವ ನಟ ಸುನಿಲ್ ರಾವ್, ಉತ್ತಮ ಕಲಾವಿದರ ತಂಡ ಒಂದು ಈ ಸಿನಿಮಾದಲ್ಲಿ ತಾರಾಗಣವಾಗಿ ಕಾಣುತ್ತಾರೆ.
ಸದ್ಯಕ್ಕಂತೂ ಬಹಳ ಉತ್ತಮ ರೀತಿಯ ಅಭಿಪ್ರಾಯವನ್ನು ಪಡೆಯುತ್ತಿರುವ ಈ ಸಿನಿಮಾ ಕನ್ನಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ನಟಿ ಶ್ವೇತಾ ಪ್ರಸಾದ್ ಅವರು ಯಶಸ್ವಿ ನಿರ್ಮಾಪಕವಾಗಿ ಕನ್ನಡ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಇವರು ನಟನೆಗೆ ಯಾವಾಗ ವಾಪಸ್ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಗಲಿಲ್ಲವಾದರೂ, ಒಳ್ಳೊಳ್ಳೆಯ ಕಥೆಗಳನ್ನು ಕೊಡುವ ನಿರೀಕ್ಷೆಯನ್ನಂತೂ ಖಂಡಿತ ಮೂಡಿಸಿದ್ದಾರೆ.


Click it and Unblock the Notifications











