Shwetha Srivatsav: ಪ್ರಕೃತಿ ಮಧ್ಯೆ ಸೀರೆ ಧರಿಸಿದ ಚಿಟ್ಟೆಯಾದ ನಟಿ ಶ್ವೇತಾ ಶ್ರೀವಾತ್ಸವ್

By Poorva

ಶ್ವೇತಾ ಶ್ರೀವಾತ್ಸವ್‌ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಕನ್ನಡದ ಬಹಳ ಅದ್ಭುತ ನಟಿಮಣಿಯಾರಲ್ಲಿ ಒಬ್ಬರು. 2013 ರಲ್ಲಿ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮೂಲಕ ಮಿಂಚಿದ ಶ್ವೇತಾ ಶ್ರೀವಾತ್ಸವ್‌ ಅವರಿಗೆ ಈ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು. ಇದಾದ ಮೇಲೆ ಫೇರ್ ಆಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಹೋಪ್ ಮತ್ತು ರಾಘವೇಂದ್ರ ಸ್ಟೋರ್ಸ್‌ ಸಿನಿಮಾದಲ್ಲಿ ನಟಿಸಿದ್ದಾರೆ. ತನ್ನ ಸಲಿಸಾದ ನಟನೆಯ ಮೂಲಕ ಎಲ್ಲರ ಮನಗೆದ್ದ ನಟಿ ಶ್ವೇತಾ ಶ್ರೀವಾತ್ಸವ್.

ಶ್ವೇತಾ ಶ್ರೀವಾತ್ಸವ್ ತಮ್ಮ ಮುದ್ದು ಮುದ್ದು ಮಾತುಗಳಿಂದ ಎಲ್ಲರ ಮನಗೆದ್ದ ಚೆಲುವೆ ಈಕೆ ಎಂದರೆ ತಪ್ಪಾಗದು. ನಟಿ ಶ್ವೇತಾ ಇತ್ತೀಚಿನ ದಿನಗಳಲ್ಲಿ ಸೂಪರ್ ಮಾಮ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ನಟಿ ಆಗಿರುವ ಶ್ವೇತಾ ಮೊದಲ ಬಾರಿಗೆ ಜಡ್ಜ್ ಸೀಟ್ ನಲ್ಲಿ ಆಸೀನರಾಗಿದ್ದಾರೆ. ಇನ್ನು ಈ ರಿಯಾಲಿಟಿ ಶೋನಲ್ಲಿ ಶ್ವೇತಾ ಸೀರೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಹಲವರು ಶ್ವೇತಾ ಧರಿಸಿರುವ ಸೀರೆಯನ್ನು ನೋಡಿ ಮಾರು ಹೋಗಿದ್ದಾರೆ.

Kannada actress Shwetha Srivatsav new saree photoshoot

ಇನ್ನು ತನ್ನ ನಟನೆಯ ಮೂಲಕ ಎಲ್ಲರ ಮನಗೆದ್ದ ನಟಿ ಶ್ವೇತಾ ಶ್ರೀವಾತ್ಸವ್, ಮದುವೆ ಆದ ಬಳಿಕ ಮಗಳ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಬಳಿಕ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ವೇತಾ ಸೀರೆಯನ್ನುಟ್ಟು ಫೋಟೋಗಳಿಗೆ ಪೋಸ್ ನೀಡುತ್ತಾ ಇರುತ್ತಾರೆ. ಫೋಟೋ ನೋಡಿದ ಅದೆಷ್ಟೋ ಮಂದಿ ಶ್ವೇತಾ ಅವರ ಅಭಿಮಾನಿಗಳಾಗಿದ್ದಾರೆ.

ಹೂವಿನ ಸೀರೆಯಲ್ಲಿ ಮಿಂಚಿದ ನಟಿ ಶ್ವೇತಾ ಶ್ರೀವಾತ್ಸವ್

ಶ್ವೇತಾ ಶ್ರೀವಾತ್ಸವ್ ಕೆಂಪು ಬಣ್ಣದ ಫ್ಲೋರಲ್ ಸೀರೆಉಟ್ಟು ಅದಕ್ಕೆ ಹಸಿರು ಕಲರ್ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈ ಸೀರೆಯಲ್ಲಿ ಶ್ವೇತಾ ಶ್ರೀವಾತ್ಸವ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಕಲರ್ ಹೂ ಬಿಡುವ ಪೇಪರ್ ಹೂವಿನ ಮರದ ಅಡಿ ನಿಂತು ಸಖತ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಶ್ವೇತಾ ಶ್ರೀವಾತ್ಸವ್ ಲುಕ್‌ಗೆ ಫಿದಾ ಆದ ಫ್ಯಾನ್ಸ್

ಇನ್ನು ಶ್ವೇತಾ ಶ್ರೀವಾತ್ಸವ್ ಅಭಿಮಾನಿಗಳು ಹೂವನ್ನು ನೋಡಬೇಕ ಅಥವಾ ನಿಮ್ಮನ್ನ ನೋಡಬೇಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇದೀಗ ರಿಯಾಲಿಟಿ ಶೋ ಜಡ್ಜ್ ಆಗಿ ಮಿಂಚುತ್ತಿದ್ದಾರೆ. ಮದುವೆ ಆದ ಬಳಿಕ ಕೂಡ ವೈವಾಹಿಕ ಜೀವನ ಹಾಗೂ ತಮ್ಮ ವೃತ್ತಿ ಜೀವನವನ್ನು ಕೂಡ ಒಟ್ಟಿಗೆ ಸರಿದೂಗಿಸಿಕೊಂಡು ಹೋಗುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

Kannada actress Shwetha Srivatsav new saree photoshoot

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಶ್ವೇತಾ ಶ್ರೀವಾತ್ಸವ್ ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ವೇತಾ ಹೆಚ್ಚು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಸೀರೆಗಳ ಆಯ್ಕೆ ಕೂಡ ಬಹಳ ಡಿಫರೆಂಟ್ ಆಗಿ ಇದ್ದು ಕೆಲವೊಮ್ಮೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಶ್ವೇತಾ ಶ್ರೀವಾತ್ಸವ್ ಮಾತ್ರವಲ್ಲ ಪುತ್ರಿ ಅಶ್ಮಿತಾ ಕೂಡ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

More from Filmibeat

English summary
Actress Shwetha Srivastav new photoshoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X