ಇವರು ಯಾರೋ ಬಾಲಿವುಡ್ ನಟಿಯಲ್ಲ, ನಮ್ಮ ಕನ್ನಡದವರೇ; ಯಾರೀಕೆ? ನೆಟ್ಟಿಗರು ಹುಷಾರು ಎಂದಿದ್ದೇಕೆ?
ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆ್ಯಕ್ಟಿವ್ ಇರುವ ತೇಜಸ್ವಿನಿ ಶರ್ಮ ಆಗಾಗ ಹೊಸ ಹೊಸ ರೀತಿಯ ಫೋಟೋಶೂಟ್‌ಗಳನ್ನು ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಮಾತ್ರವಲ್ಲದೇ ಬಹಳ ದೊಡ್ಡ ಫ್ಯಾನ್ ಫಾಲೋಯಿಂಗ್ ಅನ್ನು ಕೂಡಾ ಈಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಈಕೆ ಮಾಡಿರುವ ಒಂದು ಫೋಟೋ ಶೂಟ್ ಬಹಳ ವೈರಲ್ ಆಗಿದೆ.
ಅಂದ ಹಾಗೆ ಫೋಟೋಶೂಟ್ ಎನ್ನುವುದು ಇಂದು ಬಹು ದೊಡ್ಡ ಟ್ರೆಂಡ್ ಆಗಿದೆ. ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ರೀತಿಯ ಫೋಟೋ ಶೂಟ್ ಮಾಡಿಸುವುದು ನಟಿಯರ ಹೊಸ ಹ್ಯಾಬಿಟ್ ಆಗಿ ಬಿಟ್ಟಿದೆ. ನಟಿಯರಂತೂ ಹೊಸ ಹೊಸ ರೀತಿಯಲ್ಲಿ ಫೋಟೋಶೂಟ್‌ಗಳನ್ನು ಮಾಡಿಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಹೊಸ ಐಡಿಯಾಗಳ ಮೂಲಕ ತಮ್ಮ ಕ್ರಿಯಾಶೀಲತೆಯನ್ನು ಹೊರ ಹಾಕುತ್ತಿರುತ್ತಾರೆ.

ಅದೇ ರೀತಿ ನಟಿ ತೇಜಸ್ವಿನಿ ಶರ್ಮ ಗ್ಯಾರೇಜ್‌ನಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಹೊಸದೊಂದು ವೈಬ್ ಕ್ರಿಯೇಟ್ ಮಾಡಿದ್ದಾರೆ. ಗ್ಯಾರೇಜ್‌ನಲ್ಲಿ ಟೈಯರ್ ಗಳ ಸುತ್ತ ಕೂತಿರುವ ನಟಿ ತೇಜಸ್ವಿನಿ ಶರ್ಮ ಬೆಂಕಿ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಇದರಲ್ಲಿ ಈಕೆ ಎಂದಿಗಿಂತ ಬಹಳ ವಿಭಿನ್ನವಾಗಿ ಕಾಣಿಸಿದ್ದು ನೆಟ್ಟಿಗರಿಗೆ ಈ ಫೋಟೋ ಬಹಳ ಇಷ್ಟವಾಗಿದೆ. ಅದೇ ರೀತಿ ಬಹಳಷ್ಟು ಜನ ಹುಷಾರಾಗಿರಿ ಬೆಂಕಿಯೊಂದಿಗೆ ಆಟ ಆಡಬೇಡಿ ಎಂದು ಎಚ್ಚರಿಕೆಯನ್ನು ಹೇಳಿದ್ದಾರೆ.
ತೇಜಸ್ವಿನಿ ಶರ್ಮ ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ನನಗೆ ಹೊಸ ಹೊಸ ರೀತಿಯ ಫೋಟೋಶೂಟ್‌ಗಳನ್ನು ಮಾಡಿಸುವುದೆಂದರೆ ಬಹಳ ಇಷ್ಟ. ಅದಕ್ಕೆ ಸರಿಯಾಗಿ ನನ್ನೊಂದಿಗೆ ಬಹಳ ಒಳ್ಳೆಯ ಟೀಮ್ ಇದೆ.
ಗ್ಯಾರೇಜ್‌ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವಾಗ ನಾವು ಬಹಳ ಜಾಗೃತೆಯಿಂದ ಇದ್ದೆವು. ಈ ರೀತಿ ಬೆಂಕಿ ಸೇರಿದಂತೆ ಡೇಂಜರಸ್ ವಸ್ತುಗಳೊಂದಿಗೆ ಶೂಟ್ ಮಾಡುವಾಗ ನಾವು ಎಕ್ಸ್ಪರ್ಟ್ ಗಳನ್ನು ಮೊದಲೇ ಕನ್ಸಲ್ಟ್ ಮಾಡಬೇಕು. ಈ ಫೋಟೋಗಳಲ್ಲಿ ಬೆಂಕಿ ಎಫೆಕ್ಟ್‌ಗೆ ನಾವು ಚಿಕ್ಕ ಚಿಕ್ಕ ಬಟ್ಟೆಗಳನ್ನು ಬಳಸಿದ್ದೇವೆ. ನನ್ನ ಫೋಟೋಗ್ರಾಫರ್‌ಗೆ ಯಾವ ರೀತಿ ಫೋಟೋ ಬೇಕು ಹಾಗೂ ಬೆಂಕಿ ಎಷ್ಟು ಕಾಣಿಸಬೇಕು ಎಂಬುದರ ಐಡಿಯಾ ತುಂಬಾ ಚೆನ್ನಾಗಿತ್ತು. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೆ ಬಹಳ ಒಳ್ಳೆಯ ರೀತಿಯಲ್ಲಿ ಫೋಟೋಗಳು ಬಂದಿವೆ" ಎಂದಿದ್ದಾರೆ.

ಇದರ ಜೊತೆಗೆ "ನನ್ನ ಇನ್‌ಸ್ಟಾಗ್ರಾಂನಲ್ಲಿ ನಾನು ಬೇರೆ ಬೇರೆ ರೀತಿಯ ಫೋಟೋಶೂಟ್‌ಗಳನ್ನು ಮಾಡಿಸಿಕೊಂಡಿದ್ದೇನೆ. ಆದರೆ, ಅವೆಲ್ಲವೂ ಬಹಳ ಕಲರ್‌ಫುಲ್ ಆಗಿ ಇತ್ತು. ನನಗ್ಯಾಕೋ ಸ್ವಲ್ಪ ಡಾರ್ಕರ್ ಶೇಡ್‌ನ ಫೋಟೋಸ್ ಬೇಕೆಂದೆನಿಸಿತು. ಹಾಗಾಗಿ ಈ ಫೋಟೋ ಶೂಟ್ ಮಾಡಿಸಿದೆ" ಎಂದು ಆಕೆ ಸಂದರ್ಶನದಲ್ಲಿ ಹೇಳಿದ್ದಾರೆ.
"ನಾನು ಈ ಮೊದಲು ಹಲವು ಫೋಟೋಶೂಟ್‌ಗಳನ್ನು ಮಾಡಿಸಿದಾಗ ನನಗೆ ಸಿನಿಮಾಗಳಿಂದ ಅವಕಾಶ ಬಂದಿದೆ. ಅದೇ ರೀತಿ ನಾನು ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದರೆ ನಾನು ವಿಭಿನ್ನ ಪಾತ್ರಗಳಿಗೆ ಹೇಗೆ ಒಪ್ಪುತ್ತೇನೆ ಎಂಬುದರ ಬಗ್ಗೆ ನಿರ್ದೇಶಕರಿಗೂ ಒಂದು ಐಡಿಯಾ ಸಿಗುತ್ತದೆ. ಹಾಗಾಗಿ ಈ ರೀತಿಯ ಫೋಟೋಗಳನ್ನು ಕಲಾವಿದರಿಗೆ ಬಹಳ ಹೆಲ್ಪ್ ಆಗುತ್ತದೆ" ಎಂದಿದ್ದಾರೆ ನಟಿ ತೇಜಸ್ವಿನಿ ಶರ್ಮಾ. ಈಕೆ ಇದುವರೆಗೂ 'ಇಂಗ್ಲಿಷ್ ಮಂಜ', 'ಕೊಡಗರ ಸಿಪಾಯಿ', 'ಮೇರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











