ತಮಿಳು ಹಾಡಿಗೆ ಹೆಜ್ಜೆ ಹಾಕಿದ ವೈಷ್ಣವಿ ಗೌಡ, ನೀವೇ ನಮ್ಮ ರೌಡಿ ಬೇಬಿ ಎಂದ ಫ್ಯಾನ್ಸ್..!

By ಪೂರ್ವ

ಸೀತಾ ರಾಮ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದವರು ನಟಿ ವೈಷ್ಣವಿ ಗೌಡ. ಸೀತಾಳ ಪಾತ್ರ ಇದರಲ್ಲಿ ಬಹಳ ಮುದ್ದು ಮುದ್ದಾದ ಪಾತ್ರ. ಸಿಹಿಯ ಪ್ರೀತಿಯ ಅಮ್ಮ. ಹಾಗೆಯೇ ರಾಮನ ಪ್ರೀತಿಯ ಮಡದಿ. ಎಲ್ಲರ ಮನಗೆದ್ದಿರುವ ಈ ಧಾರಾವಾಹಿಯ ಹಾಗೆಯೇ ಒಂದು ಕಾಲದಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿ ಕೂಡ ಎಲ್ಲರ ಅಚ್ಚುಮೆಚ್ಚಿನ ಧಾರವಾಹಿ ಆಗಿತ್ತು. ಈ ಎರಡು ಧಾರಾವಾಹಿಗಳಲ್ಲಿ ವೈಷ್ಣವಿ ಗೌಡ ಅವರೇ ಪ್ರಮುಖ ಪಾತ್ರಧಾರಿ.

ಇಂಥಾ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ. ಆಗಾಗ ಫೋಟೋ ಶೂಟ್ ಮಾಡಿಸಿಕೊಂಡು ಹಾಗೆಯೇ ರೀಲ್ಸ್ ಮಾಡಿಕೊಂಡು ಎಲ್ಲರ ಮನಸನ್ನು ಗೆದ್ದಿರುವ ವೈಷ್ಣವಿ ಗೌಡ ಸದ್ಯಕ್ಕೆ ತಮಿಳಿನ ರಾಯನ್ ಚಿತ್ರದ ಹಾಡೊಂದಕ್ಕೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ವೈಷ್ಣವಿ ಅವರ ಈ ಡ್ಯಾನ್ಸ್ ಮತ್ತು ಮುಖದಲ್ಲಿನ ಭಾವನೆಗಳನ್ನು ನೋಡಿದ ಇವರ ಅಭಿಮಾನಿಗಳು ನೀವೇ ನಮ್ಮ ರೌಡಿ ಬೇಬಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ

kannada actress vaishnavi gowda reels viral

ಇನ್ನೂ ಹಾಲು ಗೆನ್ನೆಯ ಚೆಲುವೆಯ ನೋಟಕ್ಕೆ ಮನಸೋಲದವರೇ ಇಲ್ಲ. ಈಕೆ ಮಾಡಿದ ರೀಲ್ಸ್ ಗಳು ಬಹಳ ಫೇಮಸ್ ಆಗುತ್ತಿದ್ದ ಹಾಗೆಯೇ ಆಕೆಗೆ ಇನ್ನಷ್ಟು ಅವಕಾಶಗಳು ಅರಸಿ ಬರುತ್ತಿವೆ. ಇನ್ನೂ ಈ ಚೆಲುವೆ ಕನ್ನಡ , ಹಾಗೆಯೇ ಇತರ ಭಾಷೆಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಕಿರುತೆರೆಯಲ್ಲಿ ಸಖತ್ ಮಾಸ್ ಆಗಿ ನಟಿಸುವ ಈ ಬ್ಯೂಟಿ ಎಲ್ಲರ ಮನಸ್ಸಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವುದು ಮಾತ್ರ ಅಷ್ಟೇ ಸತ್ಯ. ಇನ್ನೂ ಇತ್ತೀಚಿನ ದಿನಗಳಲ್ಲಿ ವೈಷ್ಣವಿ ಗೌಡ ಹಲವಾರು ಬಾರಿ ಸೀತಾ ರಾಮ ಟೀಂ ಜೊತೆಗೆ ಹಾಗೆಯೇ ಮಗಳು ಸಿಹಿ ಜೊತೆಗೆ ಭರ್ಜರಿ ಸ್ಟೆಪ್ ಹಾಕುತ್ತಾರೆ .

ಹಾಗೆಯೇ ಇದೀಗ ತೆಲುಗು ಹಾಡಿಗೆ ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ ವೈಷ್ಣವಿ ಗೌಡ. ಈ ವಿಡಿಯೋ ನೋಡಿದ ಅನೇಕ ಜನರು ನಿಮಗೆ ಬಹಳ ಟ್ಯಾಲೆಂಟ್ ಇದೆ. ನಿಮ್ಮ ಟ್ಯಾಲೆಂಟ್ ಅನ್ನು ಕಿರುತೆರೆಗೆ ಮೀಸಲು ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು ತೆಲುಗಿನಲ್ಲಿ ಕೂಡ ನೀವು ಸೀತಾ ರಾಮ ರೀಮೇಕ್ ಮಾಡಿ ಎಂದು ಹೇಳುತ್ತಾರೆ. ಇದೆಲ್ಲವನ್ನೂ ಕೇಳಿದ ವೈಷ್ಣವಿ ಗೌಡ ಮತ್ತಷ್ಟು ಖುಷಿ ಆಗಿರುವುದಂತು ಸತ್ಯ. ಜೀ ಕನ್ನಡದ ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, ಪುನರ್‌ವಿವಾಹ'ದಲ್ಲಿ ನಟಿಸಿದರು.

kannada actress vaishnavi gowda reels viral

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅದ್ಭುತ ನಟನೆ

ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರವೂ ಜನರ ಮನ ಗೆದ್ದಿತ್ತು. ಆಗ ಪಾತ್ರಕ್ಕೆ ಜೀವ ತುಂಬಿದವರು. ವೈಷ್ಣವಿ ಗೌಡ ಎಂದು ಹೇಳಿದರೆ ತಪ್ಪಾಗದು. ಇನ್ನೂ ಸೀತಾ ರಾಮ ಧಾರಾವಾಹಿಯ ಕ್ಯೂಟ್ ಕಪಲ್ ಆದ ವೈಷ್ಣವಿ ಗೌಡ ಹಾಗೆಯೇ ಗಗನ್ ಇವರಿಬ್ಬರ ಜೋಡಿ ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿಯಾಗಿದ್ದಾರೆ.

ಸೀತಾ ರಾಮ ಜೋಡಿಯ ಮೇಲೆ ಅಭಿಮಾನಿಗಳ ಕಣ್ಣು

ಇವರಿಬ್ಬರೂ ಯಾಕೆ ನಿಜ ಜೀವನದಲ್ಲಿ ಒಂದಾಗಬಾರದು ಎನ್ನುವುದು ಇವರ ಅಭಿಮಾನಿಗಳ ಆಸೆ ಹಾಗೂ ಪ್ರಶ್ನೆ ಆಗಿದೆ. ಇದಕ್ಕೆ ವೈಷ್ಣವಿ ಗೌಡ ಎನು ಉತ್ತರ ಕೂಡ ನೀಡಿಲ್ಲ. ಇನ್ನೂ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡುತ್ತಿರುವ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ. ಇನ್ನೂ ಸೀತಾ ರಾಮ ಧಾರವಾಹಿಯ ಬಗ್ಗೆ ಹೇಳುವುದಾರೆ, ರಾಮನ ಹೆಂಡತಿ ಆಗಲು ಸೀತಾಗೆ ಬಹಳ ಕಷ್ಟ ದ ಹಾದಿ ಆಗಿತ್ತು . ತನಗೆ ಒಬ್ಬಳು ಮಗಳು ಇದ್ದರೂ ಬೇರೆ ಮದುವೆಯ ಬಗ್ಗೆ ಸೀತಾ ಅಷ್ಟು ತಲೆ ಕೆಡಿಸಿಕೊಂಡಂತೆ ಇರಲಿಲ್ಲ.

ಸಿಹಿ ಬಗ್ಗೆ ಹೆಚ್ಚು ಗಮನ ನೀಡುತ್ತಿರುವ ಸೀತಾ

ಇನ್ನೂ ಆ ಬಳಿಕ ರಾಮನ ಪ್ರೀತಿಗೆ ಮೆಚ್ಚಿದ ನಟಿ ರಾಮನನ್ನು ಮದುವೆ ಆದಳು. ಮದುವೆ ಆದ ಬಳಿಕ ಆಕೆಗೆ ಇದೀಗ ಸಿಹಿಯಾದ ಚಿಂತೆ. ಸಿಹಿ ಚಿಕ್ಕ ವಯಸ್ಸಿನಿಂದಲೂ ಶುಗರ್ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಆದರೆ ಆಕೆಗೆ ಬೋರ್ಡಿಂಗ್ ಶಾಲೆಯಲ್ಲಿ ಟ್ರೀಟ್ ಮೆಂಟ್ ನೀಡುತ್ತಿರುವ ಡಾ. ಮೇಘ ಶ್ಯಾಮ ಸಿಹಿ ನಿಜವಾದ ತಂದೆ ಎನ್ನುವುದು ಎಲ್ಲರ ಅನುಮಾನ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X