'ಪರ್ಫೆಕ್ಟ್ ಕಿಸ್' ಹೇಗಿರಬೇಕು ಎಂದು ಹೇಳಿಕೊಟ್ಟ ಅನುಪಮಾ ಭಟ್
ಅನುಪಮಾ ಭಟ್ ಕಿರುತೆರೆಯ ಜನಪ್ರಿಯ ನಿರೂಪಕಿ. ಅನೇಕ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಅನುಪಮಾ ಸಾಕಷ್ಟು ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಬೇಬಿ ಡಾಲ್ ಅಂತಲೇ ಕರೆಸಿಕೊಳ್ಳುವ ಅನುಪಮಾ ಈಗ ಒಂದು ಬೋಲ್ಡ್ ಹೇಳಿಕೆಯನ್ನು ನೀಡಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿಯಾಗಿ ನಟಿ ಅನುಪಮಾ ಆಗಮಿಸಿದ್ದರು. ಕಾರ್ಯಕ್ರಮದ Rapid Fire ಸುತ್ತಿನಲ್ಲಿ ಅಕುಲ್ ' ನಿಮ್ಮ ಪ್ರಕಾರ ಪರ್ಫೆಕ್ಟ್ ಕಿಸ್ ಅಂದರೆ ಹೇಗಿರಬೇಕು ಮೂರು ಪದದಲ್ಲಿ ಹೇಳಿ ಎಂದು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಅನುಪಮಾ 'Passionate, Lots of love, Involvement' ಅಂತ ಬೋಲ್ಡ್ ಆಗಿ ಉತ್ತರ ನೀಡಿದರು. ಈಗಾಗಲೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಈ ಸಂಚಿಕೆ ಪ್ರಸಾರವಾಗಿದ್ದು, ಕಾರ್ಯಕ್ರಮದಲ್ಲಿ ಅನುಪಮಾ ಅವರೊಂದಿಗೆ ನಟ ಪ್ರವೀಣ್ ಮತ್ತು ಕಿರುತೆರೆಯ ನಟಿ ರಜನಿ ಭಾಗಿಯಾಗಿದ್ದರು.
More from Filmibeat
English summary
Kannada Anchor Anupama Bhat gave a Bold statement in Colors Super Channel's popular show 'Super talk time'.


Click it and Unblock the Notifications











