ಅನುಪಮಾ ಹಾಕಿರೋ ಸ್ಕರ್ಟ್ ಎಲ್ಲೂ ಸಿಗಲ್ವಂತೆ; ಮತ್ತೆ ಅವ್ರು ತಗೊಂಡಿದಾದ್ರು ಎಲ್ಲಿ..?

By ಎಸ್ ಸುಮಂತ್

ಅನುಪಮಾ ಗೌಡ ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಪಿಟ್ನೆಸ್ ಕಾಪಾಡಿಕೊಳ್ಳುತ್ತಾ, ವಿಭಿನ್ನವಾದ ಡ್ರೆಸ್ ಎಕ್ಸ್‌ಪೆರಿಮೆಂಟ್ ಮಾಡುತ್ತಾ, ಸಿಂಪಲ್ ಮೇಕಪ್, ಪ್ರೋಗ್ರಾಂ ಮೇಕಪ್ ಸೇರಿದಂತೆ ಸಖತ್ ಲೈಫ್ ಸ್ಟೈಲ್ ಬಗ್ಗೆ ವಿಡಿಯೋ ಮಾಡಿ ಹಾಕ್ತಾ ಇರ್ತಾರೆ. ಇತ್ತೀಚೆಗಂತು ಜಿಮ್‌ನಲ್ಲಿಯೇ ಕಸರತ್ತು ನಡೆಸುತ್ತಿರುತ್ತಾರೆ. ಆ ವಿಡಿಯೋ,‌ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಅನುಪಮಾ ಗೌಡ ಸ್ನೇಹಜೀವಿ. ಒಟ್ಟಿಗೆ ಇರುವವರನ್ನು ನಕ್ಕು ನಗಿಸುತ್ತಲೇ ಇರುತ್ತಾರೆ. ಅನುಪಮಾ ಹಾಗೂ ಸ್ನೇಹಿತರನ್ನ ನೋಡಿದಾಗಲೇ ಆ ಸತ್ಯ ಸುಮಾರು ಜನರಿಗೆ ಗೊತ್ತಾಗುತ್ತದೆ. ಜಿಮ್‌ನಲ್ಲೂ ಅಷ್ಟೇ ಸೀರಿಯಸ್ ಆಗಿಯೂ ವರ್ಕೌಟ್ ಮಾಡ್ತಾರೆ. ಫ್ರೆಂಡ್ಸ್ ಇದ್ದಾಗಂತೂ ಜಿಮ್‌ನಲ್ಲೂ ಫನ್ ಮಾಡ್ತಾರೆ. ಇದೀಗ ಹಳೆ ಶರ್ಟ್ ಸ್ಕರ್ಟ್ ಹಾಕಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ.

Kannada Anchor Anupama gowda In Loose Shirt And Short Skirt

ಗ್ರೀನ್ ಶರ್ಟ್‌ನಲ್ಲಿ ಕಂಡ ಅನುಪಮಾ

ಅನುಪಮಾ ಗೌಡ ಇಂದು ಹೊರಗೆ ಹೋಗುವುದಕ್ಕೆ ಅಂತ ರೆಡಿಯಾಗ್ತಾ ಇದ್ರು. ಸ್ಪೆಷಲ್ ಆಗಿ ರೆಡಿ ಆಗುವಾಗೆಲ್ಲಾ ವಿಡಿಯೋ ಮಾಡಿ ಬಿಡುತ್ತಾರೆ. ಈಗ ಗ್ರೀನ್ ಕಲರ್ ಶರ್ಟ್ ಹಾಕಿ ಮೇಕಪ್ ಮಾಡಿಕೊಂಡದ್ದನ್ನು ಹಾಕಿದ್ದಾರೆ. ಆ ಶರ್ಟ್ ಅನ್ನ ಜಮಾನದಲ್ಲಿ ಯಾವುದೋ ಸೇಲ್ ನಡೆಯುವಾಗ ತೆಗೆದುಕೊಂಡ ಶರ್ಟ್ ಅಂತೆ. ಆ ಶರ್ಟ್ ಅನ್ನು ಯಾವ ಸಮಯದಲ್ಲಿ ಹಾಕಿಕೊಳ್ಳಬೇಕು ಅಂತ ತಿಳಿಯದೆ ಹಾಗೇ ಇಟ್ಟಿದ್ದರಂತೆ. ಈಗ ಆ ಶರ್ಟ್ ತೆಗೆದು ವೇರ್ ಮಾಡಿದ್ದಾರೆ.

ಬ್ಲಾಕ್ ಕಲರ್ ಸ್ಕರ್ಟ್ ಹಾಕಿದ ಅನು

ಈ ಶರ್ಟ್‌ನಲ್ಲಿ ಇನ್ನೊಬ್ಬರು ತೂರಬಹುದು ಅಷ್ಟು ದೊಗಲೆ ದೊಗಲೆ ಇದೆ. ಹೀಗಾಗಿ ಆ ಶರ್ಟ್ ಜೊತೆಗೆ ಪ್ಯಾಂಟ್ ಹಾಕುವುದಕ್ಕೆ ಆಗಲ್ಲ. ಅದಕ್ಕೆ ಅಂತ ನ್ಯೂ ಫ್ಯಾಷನ್ ಅವರೇ ಕಂಡು ಹಿಡಿದಿದ್ದಾರೆ. ಹಸಿರು ಬಣ್ಣದ ಶರ್ಟ್ ಗೆ ಕಪ್ಪು ಬಣ್ಣದ ಸ್ಕರ್ಟ್ ಹಾಕಿದ್ದಾರೆ. ಆ ಸ್ಕರ್ಟ್ ಇರುವುದು, ಟವೆಲ್ ರೀತಿ ಕಟ್ಟಿಕೊಳ್ಳುವ ಸ್ಕರ್ಟ್.

ಅನು ಸ್ಕರ್ಟ್‌ಗೆ ಫುಲ್ ಡಿಮ್ಯಾಂಡ್

ಸ್ಕರ್ಟ್ ಹಾಕಿಕೊಂಡಿರುವ ಅನುಪಮಾ ಅವರಿಗೆ ಕಮೆಂಟ್‌ಗಳೋ ಕಮೆಂಟ್. ಅದರಲ್ಲೂ ಆ ಸ್ಕರ್ಟ್ ಎಲ್ಲಿ ಸಿಗುತ್ತದೆ ಎಂಬುದೇ ಎಲ್ಲರಲ್ಲೂ ಇರುವ ಪ್ರಶ್ನೆ. ಈ ಸ್ಕರ್ಟ್ ಎಲ್ಲಿ ಸಿಗುತ್ತದೆ ಅನುಪಮಾ ಎಂದೇ ಕೇಳಿದ್ದಾರೆ. ಆದರೆ ಅನುಪಮಾ ಈ ಸ್ಕರ್ಟ್ ಇನ್ಮುಂದೆ ಲಭ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಪಾಪ ಇದೇ ರೀತಿಯ ಸ್ಕರ್ಟ್ ತೆಗೆದುಕೊಳ್ಳಬೇಕು ಎಂದುಕೊಂಡವರಿಗೆ ಬೇಸರವಾಗಿದೆ. ಅನುಪಮಾ ಕಮೆಂಟ್ ನೋಡಿದರೆ ಈ ಸ್ಕರ್ಟ್ ಅನ್ನು ಅವರೇ ತಯಾರು ಮಾಡಿದ್ದಾರೆ ಎನಿಸುತ್ತದೆ.

ಹೊಸ ಸ್ಟೈಲ್‌ಗೆ ಫ್ರೆಂಡ್ಸ್ ಫಿದಾ

ಅನುಪಮ ಗೌಡ ಹೊಸ ಫ್ಯಾಷನ್‌ಗೆ ಸ್ನೇಹಿತರೆ ಫಿದಾ ಆಗಿದ್ದಾರೆ. ಕಮೆಂಟ್ ಮೂಲಕ ಅನುಪಮಾ ಅವರನ್ನ ಪ್ರೋತ್ಸಾಹಿಸುತ್ತಿದ್ದಾರೆ. ಹಾರ್ಟ್ ನೀಡಿ, ಬೆಂಕಿ ನೀಡಿ ಹೊಗಳುತ್ತಾ ಇದ್ದಾರೆ. ಅನುಪಮಾ ಗೌಡ ಕೂಡ ತಮ್ಮ ಸ್ನೇಹಿತರಿಗೆ ರಿಪ್ಲೇ ಮಾಡಿದ್ದಾರೆ. ಕಮೆಂಟ್‌ನಲ್ಲೂ ಆ ಜೋಶ್ ಎದ್ದು ಕಾಣಿಸುತ್ತಿದೆ. ಇನ್ನು ಅನುಪಮಾ ಗೌಡ ಅವರಿಂದ ಹೊಸ ಫ್ಉಅಷನ್ ಪರಿಚಯವಾದಂತೆ ಆಗಿದ್ದು, ಮನೆಯಲ್ಲಿರುವ ಲೂಸ್ ಶರ್ಟ್‌ಗಳನ್ನೆಲ್ಲ ಉಳಿದ ಹೆಣ್ಣು‌ಮಕ್ಕಳು ಬಳಸುವಂತ ಐಡಿಯಾ ಸಿಕ್ಕಂತೆ ಆಗಿದೆ.

More from Filmibeat

English summary
Here is the details about Anupama gowda new Fashion;
Read more about: sumanth tv anchor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X