ಅಪ್ಪು ಬರ್ತ್‌ಡೇಗೆ ಆಂಕರ್ ಅನುಶ್ರೀ ಮದುವೆ ಆಗ್ತಾರಾ?
ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಅನುಶ್ರೀ ಮದುವೆ ನೋಡುವುದಕ್ಕೆ ಕಿರುತೆರೆ ವೀಕ್ಷಕರು, ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ವೇದಿಕೆ ಮೇಲೆ ಅನುಶ್ರೀ ಕೂಡ ಮದುವೆ ಆಗುವುದಾಗಿ ಭರವಸೆಯನ್ನು ನೀಡಿದ್ದರು. ಅದರಲ್ಲೂ ಪುನೀತ್ ಅಭಿಮಾನಿಯಾಗಿರುವ ಅನುಶ್ರೀ ಅವರ ಹುಟ್ಟುಹಬ್ಬದಂದೇ ವಿವಾಹ ಆಗುವುದಾಗಿ ಹೇಳಿದ್ದರು. ಹೀಗಾಗಿ ಅವರ ಮದುವೆ ವಿಷಯ ತಿಳಿಯುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಇತ್ತೀಚೆಗಷ್ಟೇ ಆಂಕರ್ ಅನುಶ್ರೀ ಬರ್ತ್‌ಡೇಯನ್ನು ಆಚರಿಸಿಕೊಂಡಿದ್ದರು. ಕಳೆದ ತಿಂಗಳು ಜನವರಿ 25ರಂದು ಅನುಶ್ರೀ ಹುಟ್ಟುಹಬ್ಬವಿತ್ತು. ಆ ದಿನನಾದರೂ ಮದುವೆ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಆಗಲೂ ಅನುಶ್ರೀ ಕಡೆಯಿಂದ ಸುದ್ದಿ ಬಂದಿರಲಿಲ್ಲ. ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದರು. ಕುಟುಂಬದ ಜೊತೆಗೆ ತೆರಳಿದ್ದ ಅನುಶ್ರೀ ಜೊತೆ ರಾಜ್ ಬಿ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದರು.

ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಮತ್ತೆ ಆಕ್ಟಿವ್ ಆಗಿತ್ತು. ಅನುಶ್ರೀ ಮದುವೆ ವಿಷಯ ಕೇಳುವುದಕ್ಕೆ ಕಾದು ಕೂತಿರುವ ಅವರ ಅಭಿಮಾನಿಗಳಿಗೊಂದು ಸುದ್ದಿಯಿದೆ. ಮೂಲಕಗಳ ಪ್ರಕಾರ, ಅಪ್ಪು ಹುಟ್ಟುಹಬ್ಬಕ್ಕೆ ಅನುಶ್ರೀ ಮದುವೆ ಆಗುತ್ತಿಲ್ಲ. ಅದ್ಯಾಕೆ? ಅಂದು ವೇದಿಕೆ ಮೇಲೆ ಮದುವೆ ಆಗುತ್ತೇನೆ ಅಂದಿದ್ದು ಯಾಕೆ? ಮದುವೆ ತಡವಾಗುತ್ತಿರುವುದು ಯಾಕೆ? ಅಂತ ನೋಡುವುದಾರೇ...
ಹೌದು, ಅನುಶ್ರೀ ಮದುವೆ ಸದ್ಯಕ್ಕಿಲ್ಲ. ಇದು ಅವರ ಆಪ್ತ ಮೂಲಗಳಿಂದಲೇ ಸಿಕ್ಕಿರುವ ಮಾಹಿತಿ. ಅಂದು ವೇದಿಕೆ ಮೇಲೆ ತಮಾಷೆಗಾಗಿ ಮುಂದಿನ ವರ್ಷ ಮದುವೆ ಆಗುತ್ತೇನೆ ಅಂತ ಅನುಶ್ರೀ ಹೇಳಿದ್ದರು. ಆದರೆ, ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಮದುವೆ ಆಗುತ್ತಿಲ್ಲ. ಅಂದು ಹೇಳಿದ ಮಾತು ಕೇವಲ ಕಾರ್ಯಕ್ರಮಕ್ಕಾಗಿ ಅಷ್ಟೇ ಎನ್ನಲಾಗಿದೆ. ಹಾಗಂತ ಮದುವೆ ಆಗುವುದಿಲ್ಲವೇ..?

ಅನುಶ್ರೀ ಮದುವೆ ಕಂಡಿತಾ ಆಗುತ್ತಾರೆ. ಅವರಿಗೆ ಕುಟುಂಬಸ್ಥರು ಹುಡುಗನನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರಂತೆ. ಆದರೆ, ಅನುಶ್ರೀ ಸರಿಹೊಂದುವಂತಹ ಹುಡುಗ ಇನ್ನೂ ಸಿಕ್ಕಿಲ್ವಂತೆ. ಅನುಶ್ರೀ ಅಮ್ಮ ಸೇರಿದಂತೆ ಕುಟುಂಬದ ಸದಸ್ಯರು ಮಗಳಿಗೆ ವರ ಹುಡುಕುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಇತ್ತ ಅನುಶ್ರೀ ಕೂಡ ತನ್ನ ಅರ್ಥ ಮಾಡಿಕೊಂಡು ಸಪೂರ್ಟ್ ಮಾಡುವ ಹುಡುಗನನ್ನು ನೋಡಿ ಮದುವೆ ಆಗುತ್ತಾರೆ. ಸದ್ಯ ಮದುವೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ ಆಪ್ತರು.
ಇನ್ನು ವೃತ್ತಿ ಬದುಕಿನ ಕಡೆಗೆ ಬರುವುದಾರೆ ಅನುಶ್ರೀ ಸದ್ಯ ಜೀ ಕನ್ನಡದಲ್ಲಿ ನಿರೂಪಕಿಯಾಗು ಕೆಲಸ ಮುಂದುವರೆಸಿದ್ದಾರೆ. ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮವನ್ನು ಎಂದಿನಂತೆ ತಮ್ಮದೇ ಸ್ಟೈಲ್‌ನಲ್ಲಿ ನಡೆಸಿಕೊಡುತ್ತಿದ್ದಾರೆ. ಹಾಗೇ ಸಿನಿಮಾ ಇವೆಂಟ್‌ಗಳಿಗೂ ನಿರೂಪಣೆಯನ್ನು ಮಾಡುತ್ತಿದ್ದಾರೆ. ತಮ್ಮ ಲೈಫ್ ಅನ್ನು ಸಿಕ್ಕಾಪಟ್ಟೆ ಬ್ಯುಸಿಯಾಗಿ ಇಟ್ಟಿಕೊಂಡಿದ್ದಾರೆ.
ರಿಯಾಲಿಟಿ ಶೋ ನಿರೂಪಣೆ ಜೊತೆಗೆ ಯೂಟ್ಯೂಬ್ ಚಾನೆಲ್ ಅನ್ನು ಕೂಡ ನಡೆಸುತ್ತಿದ್ದಾರೆ. ಆ ಕಡೆಗೂ ಹೆಚ್ಚು ಗಮನ ಹರಿಸಿದ್ದಾರೆ. ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಕಡೆಗೂ ಅಷ್ಟೇ ಎಫರ್ಟ್ ಹಾಕುತ್ತಿದ್ದಾರೆ. ಈ ಮಧ್ಯೆ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅನುಶ್ರೀ ಮದುವೆ ಆಗುವುದರ ಬಗ್ಗೆ ಸೀರಿಯಸ್ ಆಗಿದ್ದಾರೆ. ಆದರೆ, ಅವರ ಮನಸ್ಥಿತಿಗೆ ತಕ್ಕಂತೆ ಹುಡುಗ ಸಿಗಬೇಕು ಅನ್ನೋದು ಅವರ ಆಸೆ. ತಮ್ಮ ಅಭಿಮಾನಿಗಳಿಗೆ ಯಾವಾಗ ಖುಷಿ ಸುದ್ದಿಯನ್ನು ಕೊಡುತ್ತಾರೋ ನೋಡೋಣ.


Click it and Unblock the Notifications











