Bhagyalakshmi: ಭಾಗ್ಯ ಮುಂದೆ ತಾಂಡವ್ ಮತ್ತೊಂದು ಮುಖ ಅನಾವರಣ: ಇನ್ಮುಂದೆ ಕಥೆಯೇನು?
ಕುಸುಮಾ ತನ್ನ ಸೊಸೆಯನ್ನು ತನ್ವಿ ಓದುತ್ತಿರುವ ಶಾಲೆಗೆ ಸೇರಿಸಿದ್ದೇನೆ ಎಂದು ಮಗನ ಬಳಿ ಹೇಳಿದಾಗ ತಾಂಡವ್‌ಗೆ ಕೋಪ ಬಂದಿದೆ. ಆದರೆ ಅದನ್ನು ಅಮ್ಮನ ಮುಂದೆ ಪ್ರದರ್ಶನ ಮಾಡಲು ಆಗದೇ ತನ್ನ ಕೈಯನ್ನು ಮುಷ್ಟಿ ಮಾಡಿ ಹಿಡಿದುಕೊಂಡು ಕೋಪ ಒಳಗೊಳಗೆ ನುಂಗಿ ಕೊಂಡಿದ್ದಾನೆ. ಭಾಗ್ಯಳ ಮುಖ ನೋಡಿಕೊಂಡು ನಗುವ ಮುಖವಾಡ ಹಾಕಿ ಮನೆಯವರ ಮುಂದೆ ನಾಟಕ ಮುಂದುವರೆಸಿದ್ದಾನೆ.
ಶ್ರೇಷ್ಠಾ ಮನೆಯವರು ತಾಂಡವ್‌ಗೆ ನಿಮ್ಮ ತಂದೆ ತಾಯಿಯನ್ನ ಭೇಟಿ ಮಾಡಿಸಲೇಬೇಕು ಎಂದಿದ್ದಾರೆ.ಈ ಟೆನ್ಶನ್ ಒಂದು ಕಡೆ ಇದ್ದು ಇನ್ನೂ ಭಾಗ್ಯ ಶಾಲೆಗೆ ಸೇರಿದ್ದಾಳೆ ಎಂಬ ಟೆನ್ಶನ್. ಶ್ರೇಷ್ಠಾ ಯಾವುದೋ ಪ್ಲಾನ್ ಮಾಡಿದ್ದು ಅದಕ್ಕೆ ತಾಂಡವ್ ಒಪ್ಪಿಗೆ ಇಲ್ಲ. ಈ ವೇಳೆ ಶ್ರೇಷ್ಠಾ, ತಾಂಡವ್‌ಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ನನಗೆ ನೀನು ಬೇಕೇ ಬೇಕು. ನೀನು ನನಗೆ ಸಿಗದೇ ಹೋದರೆ ನಿನ್ನ ಹೆಸರನ್ನ ಬರೆದಿಟ್ಟು. ನಾನು ಸೊಸೈಡ್ ಮಾಡಿಕೊಳ್ಳುತ್ತೇನೆ ಎಂದೆಲ್ಲಾ ಹೇಳಿದ್ದಾಳೆ.

ಇನ್ನು ಮನೆಗೆ ಬಂದಾಗ ತಾಂಡವ್ ಭಾಗ್ಯ ಬಳಿ ಕಾಫಿ ಕೇಳಿದ್ದನು. ಭಾಗ್ಯ ಮೊದಲ ಬಾರಿಗೆ ತಾಂಡವ್‌ಗೆ ಎದುರು ಉತ್ತರ ನೀಡಿದಳು ಇದನ್ನೆಲ್ಲವನ್ನು ಮನಸ್ಸಿಗೆ ಹಾಕಿಕೊಂಡ ತಾಂಡವ್ ನನ್ನ ಮುಂದೆ ಮಾತನಾಡಲು ಎದುರುತ್ತಿದ್ದವಳು ಈಗ ನನಗೆ ಎದುರು ಉತ್ತರ ಕೊಡುತ್ತಿದ್ದಾಳೆ. ನಾನು ಏನಾದರೂ ಬೇಕು ಎಂದರೆ ತಕ್ಷಣವೇ ಮಾಡಿಕೊಂಡು ಬರುತ್ತಿದ್ದವಳು ನಂತರ ಮಾಡಿಕೊಡುತ್ತೇನೆ ಎಂದೆಲ್ಲ ಹೇಳುತ್ತಿದ್ದಾಳೆ. ಇವಳನ್ನ ನಾನು ಸುಮ್ಮನೆ ಬಿಡೋದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ.
ಗಂಡನ ದ್ವೇಷಕ್ಕೆ ಬೆಚ್ಚಿದ ಭಾಗ್ಯ
ತಾಂಡವ್, ಭಾಗ್ಯಳನ್ನ ಶಾಲೆಗೆ ಸೇರಿಸಿದ ವಿಷಯವನ್ನು ತಿಳಿದುಕೊಂಡ ಮೇಲೆ ಮನಸ್ಸಿನಲ್ಲಿ ಒಂದಷ್ಟು ಕೋಪ ತುಂಬಿಕೊಂಡಿದ್ದನು. ಮನೆಯಿಂದ ಹೊರಗೆ ಬಂದವನೇ ಸೀದಾ ಅಂಗಡಿಗೆ ಹೋಗಿ ಒಂದು ಕ್ರೇಟ್ ಥಾಮ್ಸಪ್ ಬಾಟಲ್‌ಗಳನ್ನು ಖರೀದಿಯನ್ನು ಮಾಡಿದನು. ತನ್ನ ಗಂಡ ಏನು ಮಾಡುತ್ತಿದ್ದಾನೆ ಎಂಬುದನ್ನ ತಿಳಿದುಕೊಳ್ಳಲು ಭಾಗ್ಯ ತಾಂಡವ ಹಿಂದೆಯೇ ಬಂದಿದ್ದಳು. ನಿರ್ಜನ ಪ್ರದೇಶಕ್ಕೆ ಬಂದ ತಾಂಡವ್ ಬಾಟಲ್‌ಗಳನ್ನ ಗೋಡೆಗೆ ಒಡೆದು ತನ್ನ ಕೋಪವನ್ನು ತೀರಿಸಿಕೊಳ್ಳುತ್ತಿದ್ದನು.

ಕುದಿಯುತ್ತಿರುವ ತಾಂಡವ್
ನನ್ನ ಮಾತನ್ನು ಕೇಳದೆ ಶಾಲೆಗೆ ಸೇರಿಕೊಂಡಿದ್ದಾಳೆ, ನನ್ನ ಮಾನ ಮರ್ಯಾದೆ ತೆಗೆಯಲು ಹರಳೆಣ್ಣೆ ಮುಖದ ಭಾಗ್ಯ ನಿಂತಿದ್ದಾಳೆ. ನಾನೇ ಮನೆ ಬಿಟ್ಟು ಹೋಗುವ ನಾಟಕ ಆಡಿದೆ ಅದು ಸಹ ವರ್ಕ್ ಔಟ್ ಆಗಲಿಲ್ಲ. ತನ್ವಿನ ಮುಂದಿಟ್ಟುಕೊಂಡು ಏನೇನೋ ಮಾತನಾಡಿದೆ ಅದು ಸಹ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಭಾಗ್ಯಗೆ ಅವಮಾನ ಮಾಡಿದೆ ಅದಕ್ಕೂ ಸಹ ಭಾಗ್ಯ ಜಗ್ಗಲಿಲ್ಲ ಏನೇ ಮಾಡಿದರು ಆ ಹರಳೆಣ್ಣೆ ಮುಖದವಳು ಮನೆಯಲ್ಲಿಯೇ ಇದ್ದಾಳೆ. ಈ ಗ್ರೇಟ್ ತಾಂಡವ್ ಸೂರ್ಯವಂಶಿಯ ಮಾನ ಮರ್ಯಾದೆ ಕಳೆಯಲು ಶಾಲೆಗೆ ಸೇರಿಕೊಂಡಿದ್ದಾಳೆ. ಅವಳು ಶಾಲೆಗೆ ಹೋಗಬಾರದು ಎಂದು ಕೋಪ ಗೋಡೆಯ ಮೇಲೆ ತೀರಿಸಿಕೊಳ್ಳುತ್ತಿದ್ದಾನೆ.
ಬದಲಾಗುವ ಮಾತನ್ನಾಡಿದ ಭಾಗ್ಯ
ಗಂಡನ ವರ್ತನೆ ನೋಡಿದ ಭಾಗ್ಯ ಕಣ್ಣೀರು ಹಾಕಿದ್ದಾಳೆ. ನೀವು ನಿಜವಾಗಲೂ ನನ್ನ ಗಂಡನಾ ನಿಮ್ಮನ್ನ ನಂಬಿ ನಾನು ತವರು ಮನೆಯನ್ನ ಬಿಟ್ಟು ಬಂದು 15 ವರ್ಷ ಸಂಸಾರವನ್ನು ಮಾಡಿದ್ನಾ ಎಂದು ಭಾಗ್ಯ ತನ್ನಲ್ಲಿ ತಾನೇ ಪ್ರಶ್ನೆ ಮಾಡಿಕೊಳ್ಳುತ್ತಾ ಇದ್ದಾಳೆ. ಎರಡು ಮಕ್ಕಳು ಜೊತೆಗೆ ನೀವು ಏನೇ ಅಂದರೂ, ಅಂಗಿಸಿದರೂ ನಿಮ್ಮ ಹಿಂದೆ ಓಡಿ ಬಂದು ಪ್ರೀತಿ ಮಾಡ್ತಾ ಇದ್ದೆ. ನನ್ನ ಮೇಲೆ ನಿಮಗೆ ಯಾಕೆ ಇಷ್ಟು ಕೋಪ ದ್ವೇಷವಿದೆ. ಇಂದು ನನ್ನ ಮನಸ್ಸು ಒಡೆದು ಹೋಯಿತು ಎಂದು ಭಾಗ್ಯ ತನ್ನಲ್ಲೇ ತಾನು ಮಾತನಾಡಿಕೊಂಡಿದ್ದಾಳೆ.
ಭಾಗ್ಯ ದೃಢ ನಿರ್ಧಾರ
ನೀವು ಒಡೆದಿದ್ದು ಗಾಜಿನ ಬಾಟಲ್‌ಗಳನ್ನಲ್ಲ ನನ್ನ ಮನಸ್ಸನ್ನು. ಪ್ರೀತಿ ಸತ್ತು ಹೋದ ಮೇಲೆ ಯಾವುದೇ ಹೆಣ್ಣು ಬದಲಾಗದೆ ಇರೋದಿಲ್ಲ. ಜಗತ್ತು ಹೆಣ್ಣಿನ ಇನ್ನೊಂದು ರೂಪವನ್ನ ನೋಡುತ್ತೆ, ನೀವು ಸಹ ಅದನ್ನು ನೋಡುತ್ತೀರಿ ಎಂದು ಭಾಗ್ಯ ಹೇಳಿದ್ದಾಳೆ. ಇನ್ನೊಂದು ರೂಪ ನಿಮಗೆ ತೋರಿಸುತ್ತೇನೆ ಇವತ್ತು ಮಾಡುತ್ತಿರುವ ಕೆಲಸಕ್ಕೆ ನಾನು ಉತ್ತರ ಕೊಡುತ್ತೇನೆ. ನಿಮಗೆ ಸರಿಯಾಗಿ ಎಲ್ಲವನ್ನ ಅರ್ಥ ಮಾಡಿಸುತ್ತೇನೆ, ಈ ಭಾಗ್ಯ ಮನಸ್ಸು ಮಾಡಿದರೆ ಏನೇನು ಮಾಡುತ್ತಾಳೆ ಎಂಬುದನ್ನು ತೋರಿಸುತ್ತೇನೆ ಎಂದು ಭಾಗ್ಯ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ.


Click it and Unblock the Notifications











