Bhagyalakshmi: ಮಹೇಶ್-ಸುಂದರಿ ಓವರ್ ಆಕ್ಟಿಂಗ್: ತಾಂಡವ್‌ಗೆ ಇರಿಸು-ಮುರಿಸು
ಇಷ್ಟು ದಿನ ಹೇಗೋ ಶ್ರೇಷ್ಠಾ ಜೊತೆಗೆ ಡೇಟ್ ಮಾಡಿಕೊಂಡು ಇದ್ದ ತಾಂಡವ್ ಈಗ ಸಂಕಷ್ಟಕ್ಕೆ ಸುಲುಕಿ ಬಿದ್ದಿದ್ದಾನೆ. ಯಾಕೆಂದರೆ ಶ್ರೇಷ್ಠ ಕೊಡುತ್ತಿರುವ ಟಾರ್ಚರ್ ಅಂತದ್ದಾಗಿದೆ. ತಾಂಡವ್‌ಗೆ ಹೆಜ್ಜೆ ಹೆಜ್ಜೆಗೂ ಸಹ ಇರಿಟೇಶನ್ ಆಗುತ್ತಿದೆ. ತಾಂಡವ್‌ಗೆ ಶ್ರೇಷ್ಠ ಈಗೇಕೆ ಮಾಡುತ್ತಿದ್ದಾಳೆ ಎಂಬುದು ಗೊತ್ತಿಲ್ಲ.
ಶ್ರೇಷ್ಠ ಹೇಳಿರುವುದು ನಾನು ಒಂದು ವರ್ಷ ಮದುವೆಯಿಂದ ತಪ್ಪಿಸಿಕೊಂಡರೆ ಸಾಕು ಎಂದು. ಆದರೆ ತಾಂಡವ್‌ಗೆ ಶ್ರೇಷ್ಠಾ ತನ್ನನ್ನು ಒಂದು ದೊಡ್ಡ ಬಲೆಯಲ್ಲಿ ಸಿಕ್ಕಿಸಿ ಹಾಕುತ್ತಿದ್ದಾಳೆ ಎಂಬುದು ಗೊತ್ತಿಲ್ಲ. ಡೂಪ್ಲಿಕೇಟ್ ತಂದೆ ಆಗಿ ಬಂದಿರುವ ಮಹೇಶ್ ನಿಜವಾದ ತಂದೆ ಧರ್ಮರಾಜ್ ಅವರ ಬೈಕಿಗೆ ಗುದ್ದಿದ್ದಾನೆ. ನ್ಯಾಯ ಕೇಳಲು ಬಂದ ಧರ್ಮರಾಜ್‌ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಇದೇ ವೇಳೆ ಧರ್ಮರಾಜ್ ನಿನ್ನಂತವರಾ ಜೊತೆ ಮಾತನಾಡಿದರೆ ನಮ್ಮ ಸಮಯವೇ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಧರ್ಮರಾಜ್ ಗಾಡಿ ಬಣ್ಣ ಹೋಗಿದೆ ಎಂದಿದ್ದಕ್ಕೆ ನೋಟುಗಳನ್ನು ತೆಗೆದು ಮುಖದ ಮೇಲೆ ಎಸೆದಿದ್ದಾನೆ.

ಈ ಕಡೆ ತಾಂಡವ್ ತನ್ನ ತಂದೆ ತಾಯಿಯ ಗುಣಗಾನ ಮಾಡುತ್ತಿದ್ದಾನೆ. ಆದರೆ ಯಾವ ಹೋಲಿಕೆಯು ಮಹೇಶ್ ಹಾಗೂ ಸುಂದರಿ ಅವರಲ್ಲಿ ಇಲ್ಲ. ಅವರು ಡಿಫ್ರೆಂಟ್ ಆಗಿ ರೆಡಿ ಆಗಿ ಬಂದಿದ್ದಾರೆ. ಸುಂದರಿಗೆ ಮೊದಲೇ ಕಳ್ಳತನ ಮಾಡುವುದೇ ಕೆಲಸವಾಗಿದ್ದು ಯಾರದೇ ಪರ್ಸ್ ನೋಡಿದರೂ ಮಾಡಬೇಕು ಎನಿಸುತ್ತದೆ. ಇಬ್ಬೆ ವೇಷಭೂಷಣ ನೋಡಿದರೆ ನಿಜವಾದ ತಂದೆ, ತಾಯಿಯಲ್ಲ ಎಂದು ತಿಳಿಯುವ ತರ ಇದ್ದಾರೆ.
ಸಿಕ್ಕಿ ಬೀಳ್ತಾರಾ ತಾಂಡವ್ - ಶ್ರೇಷ್ಠ?
ತಾಂಡವ್ ನನ್ನ ತಂದೆ ತಾಯಿ ಬರುವುದಿಲ್ಲ ಎಂದು ಶ್ರೇಷ್ಠ ತಂದೆ ತಾಯಿಯ ಬಳಿ ಹೇಳಿದ್ದನು. ಆದರೆ ಇಲ್ಲಿ ಮಹೇಶ್ ಹಾಗೂ ಸುಂದರಿ ಇಬ್ಬರು ಸಹ ನಾವು , ಅಮ್ಮ ಅಪ್ಪ ಎಂದು ಹೇಳಿಕೊಂಡು ಬಂದಿದ್ದಾರೆ. ಅಪ್ಪ ಅವರಿಬ್ಬರನ್ನ ನೋಡಿ ಯಾರು ನೀವು ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಮಾಡಿದ್ದಕ್ಕೆ ಡುಬ್ಲಿಕೇಟ್ ಅಮ್ಮ ಅಪ್ಪ ಶಾಕ್ ಆಗಿದ್ದಾರೆ. ಮಹೇಶ್ ತನ್ನ ಹರುಕು ಮುರುಕು ಇಂಗ್ಲೀಷ್‌ನಲ್ಲಿ ಸರ್ ವಾಟ್ ಇಸ್ ದಿಸ್ ನೋ ಇಂಟ್ರೊಡಕ್ಷನ್ ಎಂದು ಕೇಳಿದ್ದಾನೆ.

ಶ್ರೇಷ್ಠಾ ತಂದೆ-ತಾಯಿಗೆ ಅವಮಾನ
ಮಹೇಶ್ ಹಾಗು ಸುಂದರಿ ಆಡುತ್ತಿರುವುದನ್ನ ನೋಡುತ್ತಿರುವ ತಾಂಡವ್‌ಗೆ ಯಾರಾದರೂ ನನ್ನನ್ನ ಶೂಟ್ ಮಾಡಬಾರದಾ? ಎಂದು ಅಂದುಕೊಳ್ಳುತ್ತಿದ್ದಾನೆ. ಇಂತಹ ಥರ್ಡ್ ಕ್ಲಾಸ್ ನನ್ನ ಮಕ್ಕಳನ್ನೆಲ್ಲ ನಾನು ನನ್ನ ತಂದೆ ಹಾಗೂ ತಾಯಿ ಎಂದುಕೊಳ್ಳಬೇಕು ಎಂದು ಬೈದುಕೊಳ್ಳುತ್ತಿದ್ದಾನೆ. ಇದೇ ವೇಳೆ ಶ್ರೇಷ್ಠ ತಂದೆ ತಾಂಡವ್ ಇವರೇನೂ ಡ್ಯಾಡಿ ಗಿಡಿಯನ್ನುತ್ತಿದ್ದಾರೆ. ಇವರು ನಿಮ್ಮ ಅಪ್ಪನ ಎಂದು ತಾಂಡವ್‌ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶ್ರೇಷ್ಠಾ ಹೌದು ಎಂದು ಉತ್ತರ ಕೊಟ್ಟಿದ್ದಾಳೆ.
ಮಹೇಶ್‌ನ ಓವರ್ ಆಕ್ಟಿಂಗ್
ಶ್ರೇಷ್ಠ ಇವರೇನೇ ತಾಂಡವ್ ಅಪ್ಪ ಅಮ್ಮ ಎಂದು ಹೇಳಿದಾಗ ಮಹೇಶ್ ಅಡ್ಡಬಾಯಿ ಹಾಕಿದ್ದಾನೆ. ಕರೆಕ್ಟ್ ನನ್ನ ಮುದ್ದು ಸೊಸೆ ನೀನು ಬಹಳ ಚುರುಕು ಎಂದೆಲ್ಲಾ ಹೇಳಿದ್ದಾನೆ. ಇದೇ ವೇಳೆ ಶ್ರೇಷ್ಠಗೆ ಸೊಸೆ ಮುದ್ದು ಹೇಗಿದ್ದೀಯಾ ಇವರೇನಾ ನಿಮ್ಮ ಮಮ್ಮಿ ಡ್ಯಾಡಿ ಎಂದು ಕೇಳಿದ್ದಾನೆ. ಇದಕ್ಕೆ ಶ್ರೇಷ್ಠ ಹೌದು, ಇವರೇ ನನ್ನ ತಂದೆ ತಾಯಿ ಎಂದು ಪರಿಚಯ ಮಾಡಿಕೊಟ್ಟಿದ್ದಾಳೆ. ಸುಂದರಿಗೆ ಶ್ರೇಷ್ಠ ಹಾಕಿರುವ ಬ್ಯಾಗ್ ಮೇಲೆ ಕಣ್ಣು ಬಿದ್ದಿದೆ.
ತಾಂಡವ್ ಕಥೆ ಏನಾಗುತ್ತೋ?
ಎಲ್ಲಿಂದ ತಂದಿದ್ದು ಸೊಸೆ ಮುದ್ದು, ಫಾರಿನ್‌ನಿಂದಾನ ಎಂದೆಲ್ಲಾ ಕೇಳುತ್ತಿದ್ದಾಳೆ. ಮಹೇಶ್ ನಡುವೆ ಹೌದು ಎಂದು ಸುಂದರಿಯನ್ನ ಎಳೆದುಕೊಂಡಿದ್ದಾನೆ. ತಾಂಡವ್ ಇದಕ್ಕೂ ಮೊದಲು ನನ್ನ ತಂದೆ ತಾಯಿ ಬರುವುದಿಲ್ಲ ಎಂದಿದ್ದನು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮಗ ತಮಾಷೆಗೆ ಅಂದಿದ್ದಾನೆ ಎಂದು ಅಲ್ಲೂ ನಾಟಕ ಮಾಡಿದ್ದಾರೆ. ಇದು ಯಾಕೋ ಶ್ರೇಷ್ಠ ತಂದೆಗೆ ಅನುಮಾನ ಬರುವಂತೆ ಮಾಡಿದೆ. ನೀವು ನಿಜವಾಗಲೂ ಸಹ ತಾಂಡವ್ ಅಪ್ಪ ಅಮ್ಮನೇನಾ ಎಂದು ಪ್ರಶ್ನೆಯನ್ನ ಮಾಡಿದ್ದಾರೆ.


Click it and Unblock the Notifications











