Bhagyalakshmi: ಸ್ವಲ್ಪವೂ ಕಡಿಮೆಯಾಗಿಲ್ಲ ತಾಂಡವ್ ಅಹಂಕಾರ!? ಅತ್ತೆಗಾಗಿ ಗಂಡನ ವಿರುದ್ಧ ಸಿಡಿದೆದ್ದ ಭಾಗ್ಯ..!
ತಾಂಡವ್ ತನ್ನ ವರ್ತನೆ ಬದಲಾಯಿಸಿಕೊಳ್ಳುತ್ತಾನೆ ಎಂದು ಭಾಗ್ಯ ಇಲ್ಲಿತನಕವು ಕೂಡ ತಾಳ್ಮೆಯಿಂದಲೇ ಕಾದಿದ್ದಾಳೆ. ಈಗ ತಾಂಡವ್ ಗಾಳಿಪಟ ಸ್ಪರ್ಧೆಯಲ್ಲಿ ಸೋತಿರೋದು, ಶ್ರೇಷ್ಠಾ ಮಾತುಗಳಿಂದ ತಾಂಡವ್‌ಗೆ ಕೋಪ ಬಂದಿದ್ದು ಅಮ್ಮ ನನ್ನನ್ನ ಕೆಣಕಬೇಕು ಎಂದೇ ತಮ್ಮ ಬಳಿಗೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಕುಸುಮಾ ವಿರುದ್ಧ ಮಾತನಾಡಿದ್ದಾನೆ.
ಗುಂಡಣ್ಣ ಹೋಗಿ ಅಜ್ಜಿ ಕರೆಯುತ್ತಾ ಇದ್ದಾರೆ ಬರಬೇಕಂತೆ ಎಂದು ತಾಂಡವ್ ಬಳಿ ಹೇಳಿದಾಗ ಸೊಸೆಯ ಬಗ್ಗೆ ಗುಣಗಾನ ಮಾಡಲು ಇರಬೇಕು ಎಂದು ಅಂದುಕೊಂಡಿದ್ದಾನೆ. ಶ್ರೇಷ್ಠಾ ಹೇಳಿರುವುದನ್ನೇ ನಿಜ ಎಂದುಕೊಂಡಿರುವ ತಾಂಡವ್ ಓಡಿ ಬಂದು ಅಮ್ಮನ ಕಾಲಿಗೆ ಬಿದ್ದಿದ್ದು ಕ್ಷಮಿಸಿ ಬಿಡಮ್ಮ ಎಂದಿದ್ದಾನೆ. ನೀನು ಕರೆದುಕೊಂಡು ಬಂದಿರುವ ಸೊಸೆಯೇ ಸರ್ವ ಶ್ರೇಷ್ಠ ಎಂದೆಲ್ಲಾ ಮಾತನಾಡಿದ್ದಾನೆ. ನಿನಗೆ ಯಾವಾಗಲೂ ಕೂಡ ಮಗನಿಗಿಂತ ಸೊಸೆ ಹೆಚ್ಚಾಗಿ ಹೋಗಿದ್ದಾಳೆ. ಈಗ ಸೊಸೆ ಗೆದ್ದಿದ್ದು ನನ್ನನ್ನು ಕೆಳಗೆ ತುಳಿಯಬೇಕು ಎಂದುಕೊಂಡೆ ಇಲ್ಲಿಗೆ ಕರೆಸಿಕೊಂಡಿದ್ದೀಯಾ ಎಂದಿದ್ದಾನೆ.

ತಾಂಡವ್ ಮಕ್ಕಳು ಇದ್ದಾರೆ ಎಂಬುದನ್ನು ನೋಡದೆ ಕುಸುಮಾ ವಿರುದ್ಧ ನಾಲಿಗೆಗೆ ಲಗಾಮು ಹಾಕದೆ ಮಾತನಾಡುತ್ತಿರುವುದು ಭಾಗ್ಯಗಂತು ಕೆಟ್ಟ ಕೋಪವನ್ನು ತರಿಸುತ್ತಿದೆ. ಭಾಗ್ಯಗೆ ತಾಂಡವ್ ತನ್ನ ಬಗ್ಗೆ ಹಾಗೂ ಅತ್ತೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದಕ್ಕೆ ಕೋಪ ಬಂದಿದೆ. ಇವತ್ತು ಏನೇ ಆದರೂ ಕೂಡ ಗಂಡ ಹೇಳಿದ ಮಾತುಗಳೆಲ್ಲವನ್ನು ಕೂಡ ಕೇಳದೆ ವಾಪಾಸ್ ಕೊಡಬೇಕು ಎಂದು ಭಾಗ್ಯ ತೀರ್ಮಾನವನ್ನು ಮಾಡಿದಂತೆ ಇದೆ.
ಅಮ್ಮನ ವಿರುದ್ಧ ತಾಂಡವ್ ಕಿಡಿ, ಗಂಡನಿಗೆ ಬುದ್ಧಿ ಹೇಳಿದ ಭಾಗ್ಯ
ತಾಂಡವ್ ಮಾತನ್ನು ಮುಗಿಸಿದ ಮೇಲೆ ಭಾಗ್ಯ ಗಂಡನ ಮುಂದೆ ಬಂದು ನಿಂತುಕೊಂಡವಳೇ ಈಗ ನೀವು ಹೇಳಿದ್ದನ್ನೆಲ್ಲ ನಾವು ಕೇಳಿಯಾಯಿತು. ಈಗೇನಿದ್ದರೂ ನನ್ನ ಸರದಿ ಅತ್ತೆ ತಂದಿರುವ ಸರ್ವ ಶ್ರೇಷ್ಠ ಸೊಸೆ ನಾನೇ ತಾನೇ ಇದಕ್ಕೆಲ್ಲ ನಾನೇ ಉತ್ತರವನ್ನು ನೀಡುತ್ತೇನೆ ಎಂದಿದ್ದಾಳೆ. ಈಗ ನೀವು ಏನೇನು ಮಾತನಾಡುದ್ರಿ, ಆದರೆ ಇಲ್ಲಿ ಇರುವ ಅಸಲು ಸತ್ಯವೇ ಬೇರೆ ನೀವು ಇಲ್ಲಿಗೆ ಬಂದು ಕ್ಷಮೆ ಕೇಳಲಿ ಎಂಬುವುದು ಅತ್ತೆಯ ಉದ್ದೇಶವಾಗಿರಲಿಲ್ಲ ನೀವೇ ಏನೇನೋ ಕಲ್ಪನೆ ಮಾಡಿಕೊಂಡು ಬಂದು ಮಾತನಾಡಿದರೆ ಇಲ್ಲಿ ಯಾರಿಗೂ ನಷ್ಟವಿಲ್ಲ ಎಂದು ಭಾಗ್ಯ ಅಂದಿದ್ದಾಳೆ.
ಮನೆ ಬಿಟ್ಟು ಹೋಗಿರುವ ವಿಚಾರ ನಿಮ್ಮ ಆಫೀಸ್ ನವರಿಗೆ ತಿಳಿಯಬಾರದು ಎಂದುಕೊಂಡ ಅತ್ತೆ ಒಬ್ಬರೇ ಊಟ ಮಾಡುವುದನ್ನು ತಪ್ಪಿಸಲು ಇಲ್ಲಿಗೆ ಗುಂಡಣ್ಣನ ಬಳಿ ಬರಬೇಕಂತೆ ಎಂದು ಹೇಳಿ ಕಳುಹಿಸಿದರು. ಆದರೆ ನೀವು ಏನೇನೋ ಕಲ್ಪನೆ ಮಾಡಿಕೊಂಡು ಅತ್ತೆಗೆ ಬಾಯಿಗೆ ಬಂದಂತೆ ಮಾತನಾಡಿದ್ರಿ ಎಂದು ಭಾಗ್ಯ ಕ್ಲಾಸ್ ತೆಗೆದುಕೊಂಡಿದ್ದಾಳೆ. ಭಾಗ್ಯ ಆಡುತ್ತಿರುವ ಮಾತುಗಳನ್ನು ಕೇಳುತ್ತಿರುವ ತಾಂಡವ್‌ಗೆ ಕೋಪ ಬರುತ್ತಿದೆ. ಆದರೆ ಅಮ್ಮನ ಮುಂದೆ ಮತ್ತಷ್ಟು ಮಾತನಾಡಿದರೆ ಕೆಟ್ಟವನಾಗುತ್ತೇನೆ ಎಂದು ಸುಮ್ಮನೆ ಇದ್ದಾನೆ.

ಅಮ್ಮನ ನಿರ್ಧಾರಕ್ಕೆ ಕಣ್ಣೀರು ಹಾಕಿದ ತಾಂಡವ್
ಅಮ್ಮ ನನಗಾಗಿ ಊಟ ಮಾಡದೆ ಕಾಯುತ್ತಾ ಇದ್ದಳು ಎಂಬ ಮಾತನ್ನು ಕೇಳಿದ ತಾಂಡವ್‌ಗೆ ನಾನು ಆ ರೀತಿಯಾಗಿ ಎಲ್ಲಾ ಮಾತನಾಡಬಾರದಿತ್ತು ಎಂದು ಅನಿಸಿದೆ. ಆದರೆ ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ. ತಾಂಡವ್ ಭಾಗ್ಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದನ್ನೆಲ್ಲಾ ತನ್ವಿ ಕೇಳಿಸಿಕೊಳ್ಳುತ್ತಿದ್ದಾಳೆ. ತನ್ವಿಗೆ ಈಗ ತನ್ನ ಅಪ್ಪನ ಬಗ್ಗೆ ಯಾವುದೇ ಒಳ್ಳೆಯ ಅಭಿಪ್ರಾಯವಿಲ್ಲ ಮಗಳು ಇದ್ದಾಳೆ ಎಂಬುದನ್ನು ಮರೆತ ತಾಂಡವ್ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಈ ಕಡೆ ಕುಸುಮಾಗೆ ನಾನು ಯಾವ ರೀತಿ ಮಗನನ್ನ ಬೆಳೆಸಿಬಿಟ್ಟೆ ಎಂದು ಕಣ್ಣೀರು ಬಂದಿದೆ.
ಭಾಗ್ಯ ತನ್ನ ಅತ್ತೆಯ ಬಗ್ಗೆ ಗುಣಗಾನ ಮಾಡುತ್ತಿರುವುದು ತಾಂಡವ್ ಇಷ್ಟವಾಗುತ್ತಿಲ್ಲ ನೀನು ನನ್ನ ಅಮ್ಮನನ್ನು ನನ್ನಿಂದ ಕಿತ್ತುಕೊಂಡು ಬಿಟ್ಟೆ ಎಂದೇ ವಾದ ಮಾಡುತ್ತಿದ್ದಾನೆ. ಭಾಗ್ಯ ಎಷ್ಟೇ ಒಳ್ಳೆಯದು ಮಾಡಿದ್ದರು ಕೂಡ ತಾಂಡವ್‌ಗೆ ಅದು ಕೆಟ್ಟದಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನೂ ಕುಸುಮಗಂತೂ ತನ್ನ ಮಗ ಈ ರೀತಿಯಲ್ಲ ಮಾತನಾಡುತ್ತಾನೆ ಎಂದು ಎನಿಸಿರಲಿಲ್ಲ. ಈಗ ತಾಂಡವ್‌ನ ಮತ್ತೊಂದು ಮುಖ ಕುಸುಮಾ ಮುಂದೆ ಅನಾವರಣವಾಗಿದೆ.


Click it and Unblock the Notifications











