ದೊಡ್ಮನೆಯಲ್ಲಿ ರಾಕ್ಷಸರಾಗಿ ಬದಲಾದ ಗಂಧರ್ವರು: ಸಂಗೀತಾ- ಕಾರ್ತಿಕ್ ಮೇಲೆ ಸೇಡು ತೀರಿಸಿಕೊಂಡ ವಿನಯ್..!
ಬಿಗ್ ಬಾಸ್ ಸೀಸನ್ 10 ಹಲವಾರು ರೋಚಕತೆಗಳನ್ನು ಹೊತ್ತು ವೀಕ್ಷಕರ ಮುಂದೆ ಬಂದಿದೆ. ಪ್ರತಿ ಸೀಸನ್‌ನಲ್ಲೂ ಕೂಡ ಗಂಧರ್ವರು ಹಾಗೂ ರಾಕ್ಷಸರು ಎಂಬ ಟಾಸ್ಕ್ ಅನ್ನು ನೀಡಲಾಗುತ್ತದೆ. ಗಂಧರ್ವರಾಗಿದ್ದವರು ರಾಕ್ಷಸರಾಗುತ್ತಾರೆ ನಂತರ ರಾಕ್ಷಸರಾಗಿದ್ದವರು ಗಂಧರ್ವರಾಗುತ್ತಾರೆ. ಈ ವೇಳೆ ಗಂಧರ್ವರಾಗಿದ್ದವರಿಗೆ ರಾಕ್ಷಸರು ನೀಡುವ ಕಷ್ಟಗಳೆಲ್ಲವನ್ನು ಸಹಿಸಿಕೊಂಡಿರುತ್ತಾರೆ.
ನಂತರ ತಾವು ರಾಕ್ಷಸರಾದಾಗ ಗಂಧರ್ವರಿಗೆ ಅವರು ಯಾವ ರೀತಿ ಟಾರ್ಚರ್ ಕೊಟ್ಟಿದ್ದರು. ಅದೇ ರೀತಿ ಟಾರ್ಚರ್ ಕೊಡಲು ಶುರು ಮಾಡುತ್ತಾರೆ. ಈಗಂತೂ ವಿನಯ್ ಹಾಗೂ ಕಾರ್ತಿಕ್, ಸಂಗೀತಾ ಎದುರಾಳಿಗಳಂತೆ ವರ್ತಿಸುತ್ತಿದ್ದು. ವಿನಯ್‌ಗೆ ಕಾರ್ತಿಕ್ ಹಾಗೂ ಸಂಗೀತಾ ಸಾಕಷ್ಟು ಕೋಪವನ್ನು ತರಿಸಿದ್ದರು. ಆದರೂ ಕೂಡ ಟಾಸ್ಕ್ ಗೆಲ್ಲಲು ವಿನಯ್ ಸಹಿಸಿಕೊಂಡಿದ್ದರು.
ಈಗ ವಿನಯ್ ಗಂಧರ್ವರಿಂದ ರಾಕ್ಷಸರಾಗಿ ಬದಲಾಗಿದ್ದಾರೆ. ಕಾರ್ತಿಕ್ ಹಾಗು ಸಂಗೀರಆ ನೀಡಿದ ಕೀಟಲೆ, ಆಡಿದ ಮಾತನ್ನು ವಾಪಸ್ ನೀಡಲು ವಿನಯ್ ರೆಡಿಯಾಗಿದ್ದಾರೆ. ನೆನ್ನೆ ಆಟವಾಡುವಾಗ ವಿನಯ್ ಹೇಳಿದ್ದರು ನಾನೇನಾದರೂ ಗಂಧರ್ವನಾಗಿರದೆ ಇದ್ದರೆ ಇಷ್ಟೊತ್ತಿಗೆ ಬಾಯಿಂದ ಬರುತ್ತಿದ್ದ ಮಾತುಗಳೇ ಬೇರೆ. ನಾನು ಇಲ್ಲಿ ಸೈಲೆಂಟ್ ಆಗಿದ್ದೇನೆ ಎಂದುಕೊಳ್ಳಬೇಡಿ ಎಂದು ಹೇಳಿದ್ದರು.

ಈಗ ಅದರಂತೆ ವಿನಯ್ ನಡೆದುಕೊಳ್ಳುತ್ತಾ ಇದ್ದಾರೆ. ಮುಯ್ಯಿಗೆ ಮುಯ್ಯಿ ತಿರಿಸಿಕೊಳ್ಳಬೇಕು ಎಂದು ಬದಲಾಗಿದ್ದಾರೆ. ಇನ್ನು ನಮ್ರತಾ ಒಂದು ಹೆಜ್ಜೆ ಮುಂದೆ ಹೋಗಿ ವಿನಯ್ ಹಾಗೂ ಅವಿನಾಶ್ ಶೆಟ್ಟಿಗೆ ಫುಲ್ ಟಾರ್ಚರ್ ನೀಡುತ್ತಿದ್ದಾರೆ. ಕಾರ್ತಿಕ್ ಹಾಗೂ ಅವಿನಾಶ್ ಶೆಟ್ಟಿ ನಾಯಿಯ ರೀತಿ ನಮ್ರತಾ ಹಾಗೂ ವಿನಯ್ ಮುಂದೆ ಓಡಾಡಿದ್ದಾರೆ.
ಬಿಗ್ ಬಾಸ್ ಎಲ್ಲರನ್ನೂ ಒಂದು ಕಡೆ ಕೂರಿಸಿ ಈಗ ಗಂಧರ್ವರಾಗಿದ್ದವರು ರಾಕ್ಷಸರಾಗಬೇಕು... ರಾಕ್ಷಸರಾಗಿದ್ದವರು ಗಂಧರ್ವರಂತೆ ಬದಲಾಗಬೇಕು ಎಂದು ಹೇಳಿದರು. ಆಗಲೇ ವಿನಯ್‌ಗೆ ಸಾಕಷ್ಟು ಖುಷಿಯಾಗಿದೆ. ನಾನು ಟೈಮ್‌ಗಾಗಿ ಕಾಯುತ್ತಾ ಇದ್ದೇ ಈಗ ಟೈಮ್ ಬಂದಿದೆ ಅವರೆಲ್ಲರನ್ನು ಯಾವ ರೀತಿ ಆಟವಾಡಿಸುತ್ತೇನೆ ನೋಡುತ್ತಾ ಇರಿ ಎಂದು ವಿನಯ್ ಹೇಳಿದ್ದಾರೆ. ಅದರಂತೆ ಈಗ ಕಾರ್ತಿಕ್ ಜೊತೆಗೆ ಜಿದ್ದಿಗೆ ಬಿದ್ದವರಂತೆ ಆಡುತ್ತಾ ಇದ್ದಾರೆ.
ಕಾರ್ತಿಕ್ ಬಳಿ ತಮ್ಮ ಕೆಲಸವನ್ನೆಲ್ಲ ಮಾಡಿಸಿಕೊಳ್ಳುತ್ತಿದ್ದಾರೆ. ಇವರು ಕೊಟ್ಟ ರೋಧನೆಗಿಂತ ವಿನಯ್ ಟೀಮ್ ಕೊಡುತ್ತಿರುವ ರೋಧನೆ ಮಾತ್ರ ಭಯಂಕರವಾಗಿದೆ. ಇವರು ಒಂದು ಕಷ್ಟಕೊಟ್ಟಿದ್ದರೆ ವಿನಯ್ ಟೀಂ ದುಪ್ಪಟ್ಟು ಕಷ್ಟವನ್ನು ಎದುರಾಳಿ ತಂಡಕ್ಕೆ ನೀಡುತ್ತಿದ್ದು ಅವರಲ್ಲಿ ಕೋಪ ತರಿಸುವ ಕೆಲಸ ಮಾಡುತ್ತಿದೆ.
ನಾನೇ ಗುಲಾಮ ಎಂದು ಒಪ್ಪಿಕೊಂಡ ಕಾರ್ತಿಕ್
ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರಾಗಿದ್ದ ಕಾರ್ತಿಕ್, ಸಂಗೀತಾ, ತನಿಷಾ, ಸಿರಿ, ಅವಿನಾಶ್ ಹಾಗೂ ಪ್ರತಾಪ್ ಇವರೆಲ್ಲರೂ ಗಂಧರ್ವರಾಗಿ ಪರಿವರ್ತನೆಯಾಗಿದ್ದಾರೆ. ಇನ್ನು ವಿನಯ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕಲ್ ಹಾಗೂ ನಮ್ರತಾ, ಪವಿ ಇವರು ರಾಕ್ಷಸರಾಗಿದ್ದಾರೆ.

ಈಗ ವಿನಯ್ ಟೀಂ ಎಲ್ಲದಕ್ಕಿಂತ ಒಂದು ಕೈ ಮೇಲಾಗಿ ನಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದು ಗಂಧರ್ವರಿಗೆ ಸಾಕಷ್ಟು ಅವಮಾನ ಮಾಡುತ್ತಾ ಇದ್ದಾರೆ. ನಿನ್ನೆ ಟಾಸ್ಕ್ ಆಡುವ ವೇಳೆ ಕಾರ್ತಿಕ್ ಆನೆಯನ್ನು ತೆಗೆದು ವಿನಯ್ ಮುಂದೆ ಡಸ್ಟ್ ಬಿನ್ ಗೆ ಹಾಕಿದ್ದರು. ಇದಕ್ಕೆ ತಕ್ಕಂತೆ ಈಗ ಕಾರ್ತಿಕ್ ಕ್ಷಮೆ ಕೇಳಬೇಕು ಎಂದು ವಿನಯ್ ಕಾರ್ತಿಕ್ ಬಳಿ ಹೇಳಿದ್ದಾರೆ.
ಆನೆಗೆ ಕೈಮುಗಿದ ಕಾರ್ತಿಕ್ ನಾನು ಆನೆಯನ್ನು ಡಸ್ಟ್ ಬೀನ್‌ಗೆ ಹಾಕಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಇದೇ ವೇಳೆ ನಾನೊಬ್ಬ ದಡ್ಡ, ನಾನೊಬ್ಬ ಗುಲಾಮ ಎಂದು ಕಾರ್ತಿಕ್ ಬಾಯಿಯಲ್ಲಿ ವಿನಯ್ ಹೇಳಿಸಿದ್ದಾರೆ. ಗಂಧರ್ವರು ಯಾವುದೇ ಕೋಪವನ್ನು ಮಾಡಿಕೊಳ್ಳುವಂತಿಲ್ಲ. ಕೋಪ ಮಾಡಿಕೊಂಡು ರಿಯಾಕ್ಟ್ ಮಾಡಿದರೆ ಟಾಸ್ಕ್ ಸೋತಂತೆ ಅದಕ್ಕಾಗಿ ಈಗ ಕಾರ್ತಿಕ್ ಎಲ್ಲವನ್ನೂ ಸಹಿಸಿಕೊಂಡು ವಿನಯ್ ಹೇಳಿದಂತೆ ಮಾಡುವುದು ಅನಿವಾರ್ಯವಾಗಿದೆ.
ಕಾಲು ಒತ್ತಿಸಿಕೊಂಡ ನಮ್ರತಾ, ಮುಖಕ್ಕೆ ನೀರು ಎರಚಿದ ಪವಿ
ನಮ್ರತಾ, ವಿನಯ್ ಅವಿನಾಶ್ ಹಾಗೂ ಕಾರ್ತಿಕ್ ಅವರನ್ನು ನಾಯಿಯ ರೀತಿ ವರ್ತಿಸಬೇಕು ನಾಯಿಯಂತೆ ಬರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಅವರ ಹಿಂದೆ ಹಿಂದೆಯೇ ಕಾರ್ತಿಕ್ ಹಾಗೂ ಅವಿನಾಶ್ ಹೋಗಿದ್ದಾರೆ. ನಾಯಿಯನ್ನು ಕರೆಯುವಂತೆ ಕಾರ್ತಿಕ್ ಅವರನ್ನು ನಮ್ರತಾ ಕರೆದಿದ್ದಾರೆ. ನಂತರ ಎಲ್ಲಾ ಮುಗಿದ ಮೇಲೆ ಈಗ ನನ್ನ ಕಾಲನ್ನ ಹೊತ್ತು ಎಂದು ಹೇಳುವ ಮೂಲಕ ಕಾರ್ತಿಕ್ ಕೈಯಲ್ಲಿ ನಮ್ರತಾ ಕಾಲು ಒತ್ತಿಸಿಕೊಂಡಿದ್ದಾರೆ.
ಟಾಸ್ಕ್ ವೇಳೆ ಪವಿಗೆ ಕಾರ್ತಿಕ್ ನೀರನ್ನು ಎರಚಿದ್ದರು. ಇದಕ್ಕೆ ರಿವೇಂಜ್ ಎಂಬಂತೆ ಕಾರ್ತಿಕ್ ಮುಖಕ್ಕೆ ಜೋರಾಗಿ ಪವಿ ನೀರು ಹಾಕಿದ್ದಾರೆ. ಕಾರ್ತಿಕ್ ಕೋಪ ಬಂದರು ಕೂಡ ತಾಳ್ಮೆಯ ಮೂರ್ತಿಯಾಗಿ ಎಲ್ಲವನ್ನೂ ಸಹಿಸಿಕೊಂಡು ಇದ್ದಾರೆ. ಗಂಧರ್ವರಾಗಿದ್ದವರು ಈಗ ರಾಕ್ಷಸರಾಗಿದ್ದು ರಿವೆಂಜ್ ತಿಳಿಸಿಕೊಳ್ಳುತ್ತಾ ಇದ್ದಾರೆ. ಇನ್ನು ಎಲ್ಲವನ್ನು ಕೂಡ ಕಾರ್ತಿಕ್ ನಿಭಾಯಿಸುತ್ತಾ ಇದ್ದಾರೆ. ತಮ್ಮ ಟೀಮ್ ಗೆಲುವಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ.


Click it and Unblock the Notifications











