For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ

  By Suneetha
  |

  ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 3' ಅಕ್ಟೋಬರ್ 25 ರಿಂದ ರಾತ್ರಿ 9 ರಿಂದ 10 ಘಂಟೆಯವರೆಗೆ ಕಲರ್ಸ್ ಕನ್ನಡದಲ್ಲಿ ಪ್ರಾರಂಭವಾಗಲಿದೆ.

  ಕನ್ನಡ ನಟ ಜೆ.ಕೆ, ನಟಿ ರಾಗಿಣಿ, ನೀನಾಸಂ ಸತೀಶ್, ಹಾಗೂ ನಟ ರಕ್ಷಿತ್ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬಿಲ್ ಕುಲ್ ನೋ ಎಂಟ್ರಿ ಎಂದಿದ್ದಾರೆ. ಸದ್ಯಕ್ಕೆ ಚಂದನ್, ಹುಚ್ಚ ವೆಂಕಟ್, ಹರಿಪ್ರಿಯಾ ಹೋಗುತ್ತಿದ್ದಾರಂತೆ. [ಅರಮನೆಯಿಂದ ಸೆರೆಮನೆ ಯಾನಕೆ ಕಿಚ್ಚನೇ ಸಾರಥಿ]

  ಈಗಾಗಲೇ ಸ್ಪರ್ಧಾರ್ಥಿಗಳಿಗೆ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ದೊಡ್ಡದಾದ ಮನೆ ನಿರ್ಮಾಣವಾಗಿದೆ. ಜೊತೆಗೆ ಅಂತಿಮವಾಗಿ ಬಿಗ್ ಬಾಸ್ ,ಮನೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಾರ್ಥಿಗಳ ಹೆಸರನ್ನು ಕೂಡ ಫೈನಲ್ ಮಾಡಲಾಗಿದೆ.

  ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ರಿಯಾಲಿಟಿ ಶೋ ನ 3 ಪ್ರೋಮೋಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಬಿಗ್ ಬಾಸ್ ಮನೆಯ ಸ್ಪರ್ಧಿ ಬಗ್ಗೆ ಬಿಸಿಬಿಸಿ ಸುದ್ದಿ!]

  ಅಕ್ಟೋಬರ್ 25 ರಂದು ಸುದೀಪ್ ಅವರೊಂದಿಗೆ ಸ್ಪರ್ಧಾರ್ಥಿಗಳು ಮನೆಗೆ ಎಂಟ್ರಿ ಕೊಡಲಿದ್ದಾರೆ. ನಂತರ ಪ್ರತಿದಿನ ರಾತ್ರಿ 9 ಘಂಟೆಗೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ ಜನಪ್ರಿಯ ಶೋ ಆರಂಭವಾಗಲಿದೆ.

  "ಸ್ವಿಮ್ಮಿಂಗ್ ಫೂಲ್ ಸಖತ್ ಆಗಿದೆ, ಗಾರ್ಡನ್ ಏರಿಯಾ ದೊಡ್ಡದಾಗಿದೆ, ಮನೆ ಒಳಗಡೆ ಇರುವ ಹಾಲ್ ಅಂತೂ ಇನ್ನೂ ದೊಡ್ಡದಾಗಿದೆ ಕಿಚನ್ ನಲ್ಲಂತೂ ಆಕ್ಚುವಲಿ ಬ್ಯಾಡ್ ಮಿಂಟನ್ ಆಡಬಹುದು. ಆಸ್ ಫಾರ್ ದ ಪ್ಲಾನ್ ಬಿಗ್ ಬಾಸ್ ಮನೆಯಲ್ಲಿ ಈ ಸರ್ತಿ ಬೇಕಾದಷ್ಟು ಜಾಗ ಇದೆ. ಆದ್ರೆ...ನಾಟ್ಕ ಆಡೋದಕ್ಕೆ ಮಾತ್ರ ಜಾಗ ಇಲ್ಲ..." ಇದು ಬಿಗ್ ಬಾಸ್ 3 ರೂಲ್ಸ್ ಸ್ವಾಮಿ, ಫಾಲೋ ಮಾಡ್ಲೇ ಬೇಕು.['ಬಿಗ್ ಬಾಸ್' ಕನ್ನಡ ಸೀಸನ್ 3 ಆಗುತ್ತಾ ಫ್ಲಾಪ್ ಶೋ?]

  ಸಖತ್ ಕಲರ್ ಫುಲ್ ಆಗಿರೋ 'ಬಿಗ್ ಬಾಸ್ 3' ರಿಯಾಲಿಟಿ ಶೋ ನ ಇನ್ನೊಂದು ಪ್ರೊಮೋನ ಸಣ್ಣ ಝಲಕ್ ಇಲ್ಲಿದೆ ನೋಡಿ..

  English summary
  The third edition of 'Big Boss' is all set to be launched on the 25th of October. The hugely popular reality programme will be aired in the Colors Kannada channel from 25th from night 9 to 10.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X