ಬಿಗ್‌ಬಾಸ್ ಮನೆಯಲ್ಲಿ ಭಾರಿ ಬದಲಾವಣೆ, ಸ್ಪರ್ಧಿಗಳಿಗೆ ಹಲವು ನಿಯಮ?

ಕನ್ನಡ ಬಿಗ್‌ಬಾಸ್ ಸೀಸನ್ 8 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಪ್ರೋಮೋ ಬಿಡುಗಡೆ ಆಗಿದ್ದು, ಮೂಲಗಳ ಪ್ರಕಾರ ಇದೇ ತಿಂಗಳ 28 ರಂದು ಬಿಗ್‌ಬಾಸ್ ಪ್ರಸಾರ ಆರಂಭವಾಗಲಿದೆ.

Recommended Video

ಸ್ಪರ್ಧಿಗಳಿಗೆ ಅಷ್ಟು ಸುಲಭ ಇರಲ್ಲ ಈ ಬಾರಿಯ ಬಿಗ್ ಬಾಸ್

ಆದರೆ ಈ ಬಾರಿಯ ಬಿಗ್‌ಬಾಸ್ ಈ ಹಿಂದಿನಂತೆ ಇರುವುದಿಲ್ಲ. ಹಲವು ಬದಲಾವಣೆಗಳು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇರಲಿದೆ. ಇದಕ್ಕೆ ಕಾರಣ ಕೊರೊನಾ ವೈರಸ್.

ಹೌದು, ಕೊರೊನಾ ವೈರಸ್ ಇನ್ನೂ ನಿರ್ಮೂಲನೆ ಆಗದೇ ಇರುವ ಕಾರಣ ಬಿಗ್‌ಬಾಸ್ ಕಾರ್ಯಕ್ರಮವನ್ನು ಕೊರೊನಾ ರಹಿತವಾಗಿ ನಡೆಸಲು ಸಕಲ ತಯಾರಿಯನ್ನು ಆಯೋಜಕರು ಕೈಗೊಂಡಿದ್ದಾರೆ.

Kannada Bigg Boss 8 House Will Be Diffrent This Time

ಬಿಗ್‌ಬಾಸ್ ಶೋ ನಲ್ಲಿ ಭಾಗವಹಿಸಲಿರುವ ಸ್ಪರ್ಧಾಳುಗಳಿಗೆ ಮೊದಲೇ ಕ್ವಾರಂಟೈನ್ ವಿಧಿಸಲಾಗಿರುತ್ತದೆ. ಬಿಗ್‌ಬಾಸ್ ಶೋ ಗೆ ಬರುವ ಮುನ್ನಾ ಅವರ ಆರೋಗ್ಯ ತಪಾಸಣೆ. ಕೊರೊನಾ ತಪಾಸಣೆ ಸಹ ಮಾಡಿಸಲಾಗುತ್ತದೆ.

ಕೊರೊನಾ ಇರುವ ಕಾರಣ ಈ ಬಾರಿಯ ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲೂ ತುಸು ಬದಲಾವಣೆ ಇರಲಿದೆ. ಸ್ಪರ್ಧಿಗಳ ಬೆಡ್‌ಗಳು ದೂರ ಇರುವ ಸಾಧ್ಯತೆ ಇದೆ. ಇನ್ನೂ ಕೆಲವು ಬದಲಾವಣೆಗಳನ್ನು ಈ ಬಾರಿಯ ಬಿಗ್‌ಬಾಸ್ ಹೌಸ್‌ನಲ್ಲಿ ನಿರೀಕ್ಷಿಸಬಹುದು.

ಬಿಗ್‌ ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಫೂಲ್ ಸಹ ಇರುವುದಿಲ್ಲ ಎನ್ನಲಾಗುತ್ತಿದೆ. ತಮಿಳು ಬಿಗ್‌ಬಾಸ್‌ ನಲ್ಲಿ ಸ್ವಿಮ್ಮಿಂಗ್ ಫೂಲ್ ಇತ್ತು. ಆದರೆ ಅದನ್ನು ಬಳಸಲು ನಿಷೇಧ ಹೇರಿದ್ದರು ಬಿಗ್‌ಬಾಸ್. ಅಂತೆಯೇ ಯಾವ ಸ್ಪರ್ಧಿಗಳೂ ಸಹ ಸ್ವಿಮ್ಮಿಂಗ್ ಪೂಲ್ ಬಳಸಿರಲಿಲ್ಲ.

More from Filmibeat

English summary
Kannada Bigg Boss season 8 will start soon. Bigg Boss house expected to be different this time for COVI 19 reasons.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X