ದೊಡ್ಮನೆಯಲ್ಲಿ ಮತ್ತೆ ಬಳೆ ಸದ್ದಿನಿಂದ ಆರಂಭವಾಯ್ತು ಸಂಗೀತಾ-ವಿನಯ್ ಕಿತ್ತಾಟ: ನೆಗೆಟಿವಿಟಿಯ ಬೀಜವೇ ಸಂಗೀತಾ ಎಂದ ವಿನಯ್!
ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಸಂಗೀತಾ ಹಾಗೂ ವಿನಯ್ ಒಂದಲ್ಲ ಒಂದು ವಿಚಾರಕ್ಕೆ ಜಗಳಗಳನ್ನು ಆಡುತ್ತಾ ಬಂದಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತು ಶುರುವಾದ ಮೇಲೆ ಹಳ್ಳಿಯ ಟಾಸ್ಕ್ ಆಡುವ ವೇಳೆ ಸಂಗೀತ ಹಾಗೂ ವಿನಯ್ ನಡುವೆ ಜೋರಾಗಿ ಜಗಳವೇ ನಡೆದಿತ್ತು. ಈ ವೇಳೆ ಸಂಗೀತಾಗೆ ವಿನಯ್ ಬಳೆಯ ವಿಚಾರದಲ್ಲಿ ಅವಮಾನ ಮಾಡಿದ್ದರು. ಇದಕ್ಕೆ ಸಂಗೀತಾ ನಾನು ಬಳೆ ಹಾಕಿಕೊಂಡಿದ್ದೇನೆ ನೋಡು ಎಂಬಂತೆ ಕೈ ಎತ್ತಿ ತೋರಿಸಿದ್ದರು.ಇದಕ್ಕೆ ಕಿಚ್ಚನ ಚಪ್ಪಾಳೆಯೂ ಕೂಡ ಸಿಕ್ಕಿತು. ಈಗ ಅದೇ ವಿಷಯ ಮತ್ತೆ ದೊಡ್ಮನೆಯಲ್ಲಿ ಸದ್ದು ಮಾಡುತ್ತಿದೆ.
ಇದಕ್ಕೂ ಮುಂಚೆ ವಿನಯ್ ಬಿಗ್ ಬಾಸ್ ಮನೆಗೆ ಬಂದಿರುವ ನನ್ನ ಸ್ನೇಹಿತರು ನನಗೆ ಸಪೋರ್ಟ್ ಮಾಡುತ್ತಿಲ್ಲ ಎಂದಿದ್ದರು. ಸಂಗೀತಾ ಹಾಗೂ ಕಾರ್ತಿಕ್ ವಿನಯ್ ಗೆ ಮೊದಲಿನಿಂದಲೂ ಪರಿಚಿತರು. ಆದರೆ ಬಿಗ್ ಬಾಸ್ ಮನೆಗೆ ಬಂದ ಮೇಲೆ ಕಾರ್ತಿಕ್ ಹಾಗೂ ಸಂಗೀತಾ ಇಬ್ಬರೂ ಕ್ಲೋಸ್ ಆಗಿದ್ದು ವಿನಯ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸಂಗೀತಾ ಅಂತೂ ನೆಕ್ಸ್ಟ್ ಲೆವೆಲ್ ಗೆ ಹೋಗಿದ್ದು ವಿನಯ್ ಮೇಲೆ ಅದು ಯಾಕೋ ಕಾಣೆ ಪದೇ ಪದೇ ಸೇಡು ತೀರಿಸಿಕೊಳ್ಳುತ್ತಲೇ ಇದ್ದಾರೆ. ಈಗ ಮನೆಯಲ್ಲಿ ವಿನಯ್ ಹಾಗೂ ಸಂಗೀತಾ ನಡುವೆ ಒಂದು ಮಾತಿಗೆ ದೊಡ್ಡ ಜಗಳವೇ ಆಗಿದ್ದು ಸಂಗೀತಾಗೆ ವಿನಯ್ ಮುಚ್ಚಿಕೊಂಡು ಕುಳಿತುಕೋ ಎಂಬಂತೆ ಬೈದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ಗಳನ್ನ ನೀಡಲಾಗುತ್ತದೆ ನೆನ್ನೆ ಸಹ ಇಂತಹದ್ದೇ ಟಾಸ್ಕ್ ಆಡಿಸಲಾಗಿತ್ತು.ಯಾರು ಬುದ್ಧಿವಂತರು ಎಂದು ಮನೆಯಲ್ಲಿ ಅಂದುಕೊಂಡಿದ್ದಾರೆ ಹಾಗೂ ಯಾರು ಯಾರ ಸ್ನೇಹವನ್ನು ಬಯಸುವುದಿಲ್ಲ ಹೀಗೆ ಹಲವಾರು ಪ್ರಶ್ನೆಗಳನ್ನ ಕೇಳಲಾಗಿತ್ತು ಇಂದು ಸಹ ಅಂತಹದ್ದೇ ಟಾಸ್ಕನ್ನು ಬಿಗ್ ಬಾಸ್ ಮನೆಯಲ್ಲಿ ಆಡಿಸಲಾಗಿದೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಇದರ ಸ್ಪರ್ಧಿಗಳ ಮೇಲೆ ಯಾವ ರೀತಿ ಅಭಿಪ್ರಾಯವಿದೆ ಎಂಬುದನ್ನು ಹೊರಹಾಕಬಹುದು ಎಂಬ ದೃಷ್ಟಿಕೋನದಿಂದ ಈ ತರಹದ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಇವತ್ತು ಸಹ ವಿನಯ್ ಮೇಲೆ ಸಂಗೀತಾಗೆ ಯಾವ ಅಭಿಪ್ರಾಯವಿದೆ ಹಾಗೂ ಸಂಗೀತ ಮೇಲೆ ವಿನಯ್ ಗೆ ಯಾವ ಅಭಿಪ್ರಾಯವಿದೆ ಎಂಬುವುದು ಗೊತ್ತಾಗಿದೆ.
ಮತ್ತೆ ಚರ್ಚೆಗೆ ಬಂತು ಬೆಳೆಯ ವಿಚಾರ
ಸಂಗೀತಾಗೆ ಶಾಟ್ ಆಫ್ ಎಂದ ವಿನಯ್
ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಅನ್ನು ನೀಡಲಾಗಿದೆ. ದೊಡ್ಮನೆಯಲ್ಲಿ ಧನಾತ್ಮಕವಾಗಿ ಹಾಗೂ ಋಣಾತ್ಮಕವಾಗಿ ಇರುವ ಸ್ಪರ್ಧಿಗಳು ಯಾರು ಎಂಬುದನ್ನು ಎಲ್ಲಾ ಸ್ಪರ್ಧಿಗಳು ಡಿಸೈಡ್ ಮಾಡಬೇಕಾಗಿದೆ. ಈ ಒಂದು ಆಟದಲ್ಲಿ ಕಾರ್ತಿಕ್ ಮೈಕಲ್‌ವರಿಗೆ ಹೆಚ್ಚು ಧನಾತ್ಮಕವಾಗಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಎಂದು ಒಂದು ರೋಸ್ ಕೊಟ್ಟಿದ್ದಾರೆ. ನಂತರ ಪ್ರತಾಪ್ ವರ್ತೂರು ಸಂತೋಷ್ ಅವರಿಗೆ ಧನಾತ್ಮಕವಾಗಿ ಆಡುತ್ತಿದ್ದಾರೆ ಎಂಬಂತಹ ರೋಸ್ ಕೊಟ್ಟಿದ್ದಾರೆ. ಆದರೆ ಇಲ್ಲಿ ಸಂಗೀತಾ ಹಾಗೂ ವಿನಯ್ ನಡುವೆ ಇದೆ ವಿಚಾರಕ್ಕೆ ಜಗಳವಾಗಿದೆ.
ಸಂಗೀತಾ ಬಂದವರೇ ನಾನು ವಿನಯ್ ಅವರಿಗೆ ಋಣಾತ್ಮಕವಾಗಿ ಆಡುತ್ತಾರೆ ಎಂಬ ಹೂವನ್ನು ನೀಡುತ್ತೇನೆ ಎಂದಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಮೊದಲನೇ ದಿನದಿಂದವೂ ನೆಗೆಟಿವಿಟಿಗೆ ರೂಟ್ ನೀನು ಎಂದು ವಿನಯ್‌ಗೆ ಸಂಗೀತ ಹೇಳಿದ್ದಾರೆ. ಸಂಗೀತಾ ಆಡಿದ ಮಾತು ವಿನಯ್ ಗೆ ಸ್ವಲ್ಪವೂ ಕೂಡ ಇಷ್ಟವಾಗಲಿಲ್ಲ ಅದಕ್ಕಾಗಿ ತಮ್ಮ ಸರಣಿ ಬಂದಾಗ ಪ್ಲೀಸ್ ಶೆಟ್ ಆಫ್ ಎಂಬ ಮಾತನ್ನು ಹೇಳಿದ್ದಾರೆ.

ನೆಗೆಟಿವಿಟಿ ಬೀಜವೇ ಸಂಗೀತಾ ಎಂದ ವಿನಯ್!
ನಾನು ನೆಗೆಟಿವಿಟಿಗೆ ಬೇರು. ಆದರೆ ಆ ಬೇರು ಬೆಳೆಯಲು ಬೀಜವನ್ನು ನೆಡಬೇಕಲ್ಲ..ಅ ಬೀಜವೇ ಸಂಗೀತಾ ಎಂದಿದ್ದಾರೆ. ಇಲ್ಲದೆ ಇರದ ಕಾರಣಕ್ಕೆ ಮೂಗನ್ನು ತೂರಿಸಿ ಅದನ್ನು ಒಂದು ಮೂಮೆಂಟ್ ಮಾಡಿದ್ರು ಎಂದಿದ್ದಾರೆ. ಇದಕ್ಕೆ ಸಂಗೀತಾ ನಾನು ಅಂದು ಆಡಿದ ಮಾತಿಗೆ ಇಂದು ಕೂಡ ಬದ್ಧಳಾಗಿದ್ದೇನೆ ಎಂದಿದ್ದಾರೆ. ಈ ವೇಳೆ ವಿನಯ್ ಗೆ ಕೋಪ ಬಂದಿದ್ದು ಪ್ಲೀಸ್ ಶೆಟ್ ಆಫ್ ಎಂದಿದ್ದಾರೆ. ಈ ಮಾತಿಗೆ ತಿರುಗಿಸಿ ಸಂಗೀತ ಮೈಂಡ್ ಯುವರ್ ಲಾಂಗ್ವೇಜ್ ಎಂದು ವಿನಯ್‌ಗೆ ಎಚ್ಚರಿಕೆ ನೀಡಿದ್ದಾರೆ. ಇವರಿಬ್ಬರು ಮಾತನಾಡುತ್ತಿದ್ದರೆ ಸ್ನೇಹಿತ್ ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಕಾರ್ತಿಕ್ ಎಲ್ಲೋ ಒಂದು ಕಡೆ ಬೇಸರವಾಗಿದೆ ಹೀಗಾಗಿ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ.


Click it and Unblock the Notifications











