Bigg boss Nominations: 9ನೇ ವಾರ ದೊಡ್ಮನೆಯಲ್ಲಿ ನಾಲ್ಕು ಮಂದಿ ಮಾತ್ರ ಸೇಫ್, 9 ಮಂದಿ ನಾಮಿನೇಟ್..! ಉಳಿಯೋದು ಯಾರು..?
ಬಿಗ್ ಬಾಸ್ ಸೀಸನ್ 108 ವಾರಗಳನ್ನು ಯಶಸ್ವಿಯಾಗಿ ಪೂರೈಸಿ 9ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಸುದೀಪ್ ತಮ್ಮ ಸೂಪರ್ ಪವರ್ ಬಳಸಿ ಮೈಕಲ್ ಹಾಗೂ ಸ್ನೇಹಿತ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡು ಅವರಿಬ್ಬರನ್ನು ಡೈರೆಕ್ಟ್ ನ್ಯಾಮೀನೆಟ್ ಮಾಡಿದ್ದರು. ಮನೆಗೆ ಬಂದಿದ್ದ ಅಭಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ಈಗ ತಾನೆ ಬಂದಿದ್ದು 50 ದಿನ ಆಟವಾಡಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ ಇಬ್ಬರನ್ನು ಹೊರಗೆ ಕಳುಹಿಸಲು ಕಷ್ಟವಾಗುತ್ತಿದೆ ಎಂದು ಸುದೀಪ್ ಕಾರಣವನ್ನ ಕೊಟ್ಟು ಇವರಿಬ್ಬರನ್ನು ಕೂಡ ಮನೆಯಲ್ಲೇ ಉಳಿಸಿಕೊಂಡಿದ್ದರು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿ ಹೋಗಿರಲಿಲ್ಲ.
ಈ ವಾರದ ಮೊದಲನೇ ದಿನವೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿತ್ತು. ಸ್ನೇಹಿತ್‌ಗೆ ವಿಶೇಷವಾದ ಅಧಿಕಾರವನ್ನು ಬಿಗ್ ಬಾಸ್ ನೀಡಿ ಅವರೊಬ್ಬರೇ ಮನೆಯಲ್ಲಿರುವ ಸದಸ್ಯರನ್ನ ಸೂಕ್ತ ಕಾರಣಕೊಟ್ಟು ನಾಮಿನೇಟ್ ಮಾಡಬೇಕು ಎಂದು ತಿಳಿಸಿದರು. ಅದರಂತೆ ಸ್ನೇಹಿತ್ ಮುಂದೆ ಬಂದಂತಹ ಪ್ರತಿಸ್ಪರ್ಧಿಗಳು ಕೂಡ ತಾವು ಮನೆಯಲ್ಲಿ ಯಾಕೆ ಉಳಿದುಕೊಳ್ಳಬೇಕು ಎಂಬ ಕಾರಣವನ್ನು ನೀಡಿದ್ದಾರೆ. ನಮ್ರತಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ವಿನಯ್ ಈ ನಾಲ್ಕು ಮಂದಿಯನ್ನು ನಾಮಿನೇಷನ್ ನಿಂದ ಪಾರು ಮಾಡಿದ್ದು ಮಿಕ್ಕ 9 ಮಂದಿ ನಾಮಿನೇಟ್ ಆಗಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಮನೆಗೆ ಬಂದಿರುವ ಇಬ್ಬರೂ ಸ್ಪರ್ಧಿಗಳು ಕೂಡ ನಾಮಿನೇಷನ್ ನಲ್ಲಿ ಇರಬೇಕು ಎಂದು ಸ್ಪರ್ಧಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಲ್ಲರೂ ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಹೊಸದಾಗಿ ಬಂದಿರುವ ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ವ ಅವರನ್ನು ಕೂಡ ಈ ಬಾರಿ ನಾಮಿನೇಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ 13 ಸದಸ್ಯರ ಪೈಕಿ 9 ಮಂದಿ ಈಗಾಗಲೇ ನಾಮಿನೇಟ್ ಆಗಿದ್ದಾರೆ. ಕೇವಲ 4 ಮಂದಿ ಮಾತ್ರ ಸೇಫ್ ಆಗಿದ್ದಾರೆ. ಈಗ 9 ಮಂದಿ ಭವಿಷ್ಯ ವೀಕ್ಷಕರು ಹಾಗೂ ಅಭಿಮಾನಿಗಳ ಕೈಯಲ್ಲಿ ಇದೆ.
9ನೇ ವಾರದಲ್ಲಿ 9 ಮಂದಿ ನ್ಯಾಮಿನೇಟ್..!
ಈ ವಾರ ಮನೆಗೆ ಹೋಗೋದು ಯಾರು?
ಬಿಗ್ ಬಾಸ್ ಮನೆ ಪ್ರತಿ ಕ್ಷಣಕ್ಕೂ ಕೂಡ ರೋಚಕತೆಯಿಂದ ಕೂಡಿದ್ದು ಎಲ್ಲರಿಗೂ ಕೂಡ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ನಂತರ ಇಲ್ಲಿ ಯಾರು ಶತ್ರು ಅಲ್ಲ ಮಿತ್ರರು ಅಲ್ಲ ಎಂಬಂತೆ ಸ್ಪರ್ಧಿಗಳು ನಡೆದುಕೊಳ್ಳುತ್ತಾರೆ. ವರ್ತೂರು ಹಾಗೂ ತನಿಷಾ ನಡುವೆ ನಾಮಿನೇಷನ್ ಮಾಡುವ ವಿಚಾರಕ್ಕೆ ಸಣ್ಣ ಕಿರಿಕ್ ಆಗಿದೆ. ಇಷ್ಟು ದಿನ ವರ್ತೂರು ಸಂತೋಷ್ ಸುಮ್ಮನೆ ಇದ್ದು ಏಕಾಏಕಿ ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆಗಿದ್ದಾರೆ. ವರ್ತೂರು ಸಂತೋಷ್ ತೆಗೆದುಕೊಂಡ ನಿರ್ಧಾರ ಕೆಲವರಲ್ಲಂತೂ ಖುಷಿಯನ್ನ ತಂದಿದೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್‌ರಿಂದ 7 ಮಂದಿ ನಾಮಿನೇಟ್ ಆಗಿದ್ದಾರೆ. ಸ್ನೇಹಿತ್ ಹಾಗೂ ಮೈಕಲ್ ಇವರಿಬ್ಬರನ್ನು ಸುದೀಪ್ ಅವರೇ ನೇರವಾಗಿ ನಾಮಿನೇಟ್ ಮಾಡಿದ್ದರು.
ಕಳೆದ ವಾರ ಸಿರಿ ಹೇಗೋ ಅದೃಷ್ಟದಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡರು ಎಂದೆ ಹೇಳಬಹುದು. ಯಾಕೆಂದರೆ ಹೊಸದಾಗಿ ಮನೆಗೆ ಬಂದಂತಹ ಸದಸ್ಯರು ಸಿರಿ ಅವರನ್ನ ಉಳಿಸಿದ್ದಾರೆ. ಕಳೆದ ಬಾರಿ ನಾಮಿನೇಟ್ ಆಗಿದ್ದ ಸಿರಿ ಕೂಡ ಈ ಬಾರಿಯು ನ್ಯಾಮಿನೇಟ್ ಆಗಿದ್ದಾರೆ. ಇನ್ನು ಕ್ಯಾಪ್ಟನ್ ಆಗಿದ್ದಾಗ ಕಾರ್ತಿಕ್ ಒಮ್ಮೆ ಮಾತ್ರ ನಾಮಿನೇಟ್ ಆಗಿರಲಿಲ್ಲ. ಆದರೆ ಪ್ರತಿ ಸಲವೂ ಕೂಡ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕಾರ್ತಿಕ್ ಹೆಸರು ಇದ್ದೇ ಇರುತ್ತದೆ. ಸಂಗೀತಾ ಹಾಗೂ ತನಿಷಾ ಕೂಡ ಈ ಬಾರಿ ನಾಮಿನೇಟ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವವರು ಯಾರು..? ಯಾರಿಗೆ ಅತಿ ಹೆಚ್ಚು ವೋಟ್ ಗಳು ಬರುತ್ತವೆ ಎಂಬುದು ಕುತೂಹಲವಾಗಿದೆ.

ಸ್ನೇಹಿತ್‌ರಿಂದ ಸೇವ್ ಆದ ನಮ್ರತಾ, ತುಕಾಲಿ, ವರ್ತೂರು, ಆನೆ ಸೇಫ್
ನಮ್ರತಾ ಸ್ನೇಹಿತ್ ಮುಂದೆ ನಾನು ಬಿಗ್ ಬಾಸ್ ಮನೆಯಲ್ಲಿ ಯಾವ ಕಾರಣಕ್ಕೆ ನಾಮಿನೇಟ್ ಆಗದೆ ಉಳಿದುಕೊಳ್ಳಬೇಕು ಎಂಬುದನ್ನು ಹೇಳಿದ್ದರು. ಇದೇ ಕಾರಣಕ್ಕೆ ಸ್ನೇಹಿತ್ ಉಳಿಸಿದ್ರಾ ಅಥವಾ ಸಿಂಪತಿಯಿಂದ ಉಳಿಸಿದ್ರಾ ಅದಂತೂ ಗೊತ್ತಿಲ್ಲ. ಆದರೂ ಕೂಡ ಸ್ನೇಹಿತ್ ತೆಗೆದುಕೊಂಡ ನಿರ್ಧಾರ ಎಲ್ಲೋ ಒಂದು ಕಡೆ ಸಿಂಪತಿಯೇ ಎಂದು ಹೇಳಲಾಗುತ್ತಿದೆ. ನಮ್ರತಾ ಮೇಲೆ ಸ್ನೇಹಿತ್‌ಗೆ ಎಲ್ಲೋ ಒಂದು ಕಡೆ ಪ್ರೀತಿ ಇದೆ. ಅದನ್ನು ತೋರಿಸಿಕೊಳ್ಳಲಾಗದೆ ಈ ರೀತಿಯಾಗಿ ನಮ್ರತಾರನ್ನ ಸೇವ್ ಮಾಡಿರುವುದಾಗಿ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ವಿನಯ್ ಮೂವರು ಸಹ ಸ್ನೇಹಿತ್ ಕಡೆಯಿಂದ ಸೇಫ್ ಆಗಿದ್ದಾರೆ.


Click it and Unblock the Notifications











