Wildcard Entry: ಬಿಗ್ ಬಾಸ್ ಮನೆಗೆ ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ... ಚೇಂಜ್ ಆಗುತ್ತಾ ದೊಡ್ಮನೆ ವಾತಾವರಣ..?
ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರಿದ್ದು ಸ್ಪರ್ಧಿಗಳು ತಮ್ಮ ಆಟದಿಂದ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಐವತ್ತು ದಿನಗಳನ್ನು ಪೂರೈಸಿದ್ದು 51ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಯನ್ನು ಕೊಟ್ಟಿದ್ದು ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಬಿರುಗಾಳಿಯನ್ನು ಎಬ್ಬಿಸಿದ್ದಾರೆ. ನಿನ್ನೆ ನೀತು ವನಜಾಕ್ಷಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು, ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ತಾವು ಮನೆಯಿಂದ ಹೊರಗೆ ಹೋಗುವಾಗ ನೀತು ಮೈಕಲ್‌ಗೆ ಕ್ಯಾಪ್ಟನ್ ಜವಾಬ್ದಾರಿ ವಹಿಸಿ ಹೋಗಿದ್ದಾರೆ.
ಬಿಗ್ ಬಾಸ್ ಮನೆಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಡಬೇಕು ಎಂದರೆ ರಕ್ಷಕ್ ಬುಲೆಟ್‌ಗೆ ಕೊಡಿ ಎಂದು ಕೆಲವರು ಒತ್ತಾಯ ಮಾಡಿದ್ದರು. ಆದರೆ ಈಗ ಹೊಸಬರು ಬಿಗ್ ಬಾಸ್ ಮನೆಗೆ ಕೊಟ್ಟಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು ವಾತಾವರಣವೇ ನಿರ್ಮಾಣವಾಗಲಿದೆ. 50 ದಿನಗಳ ನಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವವರು ಯಾರು ಎಂಬ ಕುತೂಹಲ ಸದ್ಯಕ್ಕೆ ಎಲ್ಲರಲ್ಲೂ ಮನೆ ಮಾಡಿದೆ. ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲೂ ಕೂಡ ಬಿಗ್ ಬಾಸ್ ಮನೆಗೆ ಬಂದವರು ಯಾರು ಎಂಬ ಬಗ್ಗೆ ಸುಳಿವನ್ನು ನೀಡಿಲ್ಲ ಬರಿ ಗೆಸ್ ಮಾಡಿ ಎಂದಷ್ಟೇ ಹೇಳಿದ್ದಾರೆ. ಇದರಲ್ಲಿ ವೀಕ್ಷಕರು ಯಾರು ಎಂಬುದನ್ನು ಗೆಸ್ ಮಾಡುತ್ತಾ ಇದ್ದಾರೆ ಕೆಲವರು ಸಾನಿಯಾ ಅಯ್ಯರ್ ಹಾಗೂ ಮತ್ತೆ ಕೆಲವರು ಬೇರೆ ಯಾರೂ ಬಂದಿದ್ದಾರೆ ಎಂದು ಹೇಳುತ್ತಾ ಇದ್ದಾರೆ.

ಇನ್ನೂ ಕೆಲವರು ಉದಯ್ ಸೂರ್ಯ ಹಾಗೂ ಬೇರೆ ಯಾರೋ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ ಆದರೆ ಬಂದವರ ಮುಖವನ್ನ ತೋರಿಸಲಿಲ್ಲ. ಈ ಮೊದಲು ಉದಯ್ ಸೂರ್ಯ ಒಒಟಿ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಮನೆಗೆ ಬಂದವರು ಉದಯ್ ಸೂರ್ಯನಾ ಅಥವಾ ಭುವನ್ ಪೊನ್ನಣ್ಣನಾ, ಪವಿ ಪೂವಪ್ಪ, ಸಾನಿಯಾ ಅಯ್ಯರ್ ಯಾರು ಎಂಬುದು ಕುತೂಹಲವಾಗಿದೆ. ಇನ್ನು ಬಿಗ್ ಬಾಸ್ ಮನೆಗೆ ಯಾರೋ ಬರುತ್ತಿದ್ದಾರೆ ಎಂದು ವಿನಯ್ ಮೈಕಲ್ ಜೊತೆ ಹೇಳಿದ್ದಾರೆ. ಬಂದವರು ಏನಾದರೂ ಬಹಳ ಚೆನ್ನಾಗಿ ಆಟವಾಡಿದರೆ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಗುತ್ತದೆ ಎಂದು ಹೇಳಿದ್ದಾರೆ.
ಕಾರಿನಲ್ಲಿ ಬಂದ ಮಹಿಳಾ ಕಂಟೆಸ್ಟೆಂಟ್
ಸರ್ಪ್ರೈಸ್ ಆಗಿ ಬಂದವರು ಮತ್ಯಾರು..?
ಬಿಗ್ ಬಾಸ್ ಮನೆಗೆ ಯಾರೋ ಬರುತ್ತಾ ಇದ್ದಾರೆ ಎಂದು ವಿನಯ್ ಹೇಳಿದ್ದಾರೆ. ಅಷ್ಟರಲ್ಲಿ ಕಾರಿನಲ್ಲಿ ಯಾರೋ ಮಹಿಳಾ ಕಂಟೆಸ್ಟೆಂಟ್ ಎಂಟ್ರಿ ಕೊಟ್ಟಿದ್ದಾರೆ. ಮಹಿಳಾ ಕಂಟೆಸ್ಟ್‌ಟೆಂಟ್ ಬಿಗ್ ಬಾಸ್ ಮನೆಯೊಳಗೆ ಬಂದು ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಸ್ಪರ್ಧಿಗಳ ಮುಖದ ಭಾವವೇ ಚೇಂಜ್ ಆಗಿ ಹೋಗಿದೆ. ಬಂದ ಹೊಸ ಕಂಟೆಸ್ಟ್‌ಟೆಂಟ್ ಯಾರು ಎಂಬುದು ಸರ್ಪೈಸ್ ಆಗಿ ಇದೆ.
ಸಾನಿಯಾ ಅಯ್ಯರ್ ರೀತಿಯಲ್ಲಿ ಸ್ಪರ್ಧಿ ಕಾಣುತ್ತಿದ್ದು, ಎಲ್ಲರೂ ಸಾನಿಯಾ ಅಯ್ಯರ್ ಎಂಟ್ರಿ ಕೊಟ್ಟಿದ್ದಾರೆ ಎಂದರೆ ಇನ್ನೂ ಕೆಲವರು ಪವಿ ಪೂವಪ್ಪ ಎಂಟ್ರಿ ಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು ಎಂಟ್ರಿ ಕೊಟ್ಟಿದ್ದು ಅವರನ್ನು ಶೈನ್ ಶೆಟ್ಟಿ, ಉದಯ್ ಸೂರ್ಯ, ಭುವನ್ ಪೊನ್ನಣ್ಣ ಎನ್ನಲಾಗಿದೆ. ಆದರೆ ಯಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಕುತೂಹಲವನ್ನು ಹಾಗೆ ಉಳಿಸಿಕೊಳ್ಳಲಾಗಿದೆ ಇದಕ್ಕೆಲ್ಲಾ ಸಂಜೆ ಉತ್ತರ ದೊರೆಯಲಿದೆ ಬಿಗ್ ಬಾಸ್ ಮನೆಗೆ ಬಂದವರು ಯಾರು ಯಾವ ರೀತಿ ಆಟವನ್ನು ಆಡುತ್ತಾರೆ ಎಂಬುದು ತದನಂತರ ಗೊತ್ತಾಗಲಿದೆ. ಈಗಾಗಲೇ ಇಬ್ಬರು ಒಟ್ಟಿಗೆ ರೂಮಲ್ಲಿ ಇದ್ದು ಮಾತನಾಡಿಕೊಳ್ಳುತ್ತಾ ಇದ್ದಾರೆ. ಇವರು ನಮ್ಮನ್ನ ಟ್ರಿಗರ್ ಮಾಡಬಹುದು ನಾವು ಟ್ರಿಗರ್ ಆಗಬಾರದು ಎಂದು ಮಾತನಾಡಿಕೊಂಡಿದ್ದಾರೆ.

ಈಗ ಗೇಮ್ ಸ್ಟಾರ್ಟ್ ಅಂತೆ, ಸಪ್ಪೆಯಾದ್ರು ವಿನಯ್!
ಬಿಗ್ ಬಾಸ್ ಮನೆಯರಿಗೆ ಈ ಶಾಕ್ ಬೇಕಿತ್ತು ಎಂದು ಒಬ್ಬರು ಹೇಳಿದರೆ. ಇನ್ನೊಬ್ಬರು ಈಗ ಗೇಮ್ ನಿಜವಾಗಲೂ ಸ್ಟಾರ್ಟ್ ಆಗುತ್ತದೆ ಎಂದು ಹೇಳಿದ್ದಾರೆ. ಆದರೆ ವಿನಯ್ ಯಾಕೋ ಮಂಕಾದಂತೆ ಇದ್ದಾರೆ. ಸ್ನೇಹಿತ್ ಹೊಸ ಸ್ಪರ್ಧಿಗಳು ಬಂದ ಮೇಲೆ ತಲೆಯ ಮೇಲೆ ಕೈ ಹೊತ್ತುಕೊಂಡು ನಿಂತುಕೊಂಡಿದ್ದಾರೆ. ಇನ್ನು ಹೊಸ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದೆ ಈಗ ಎಲ್ಲಾ ಸ್ಪರ್ಧಿಗಳ ಮುಖದಲ್ಲೂ ಆತಂಕದ ಛಾಯೆ ಆವರಿಸಿದೆ.
ಈಗ ಬಿಗ್ ಬಾಸ್ ಮನೆ ದೊಡ್ಡದಾಗಿದ್ದು ಹೊಸ ಎಂಟ್ರಿ ಮನೆಗೆ ಬಂತು ಎಂದರೆ ಆಟ ಚೇಂಜ್ ಆಗುತ್ತದೆ ಎಂದು ವಿನಯ್ ಹೇಳಿದ್ದಾರೆ. ಈಗ ಯಾಕೋ ಎಲ್ಲರ ಮನದಲ್ಲೂ ಹೊಸದೊಂದು ಆಲೋಚನೆ ಬಂದಂತಿದೆ. ಇಷ್ಟು ದಿನ ಜಗಳವಾಡಿಕೊಳ್ಳುತ್ತಾ ಇದ್ದವರು ಈಗ ಏನು ಮಾಡುತ್ತಾರೆ. ಹೊಸದಾಗಿ ಬಂದವರು ಯಾರ ಗುಂಪು ಸೇರಿಕೊಳ್ಳುತ್ತಾರೆ ಏನಾಗುತ್ತದೆ ಎಂಬುದಕ್ಕೆಲ್ಲ ಬಿಗ್ ಬಾಸ್ ಉತ್ತರಿಸಲಿದೆ.


Click it and Unblock the Notifications











