ಸ್ಪರ್ಧಿಗಳನ್ನು ಕಾಡುತ್ತಿರುವ ಎಲಿಮಿನೇಷನ್ ಭೂತ: ವೈಲ್ಡ್‌ಕಾರ್ಡ್ ಕಂಟೆಸ್ಟೆಂಟ್‌ಗಳಿಗೆ ವಿಶೇಷ ಅಧಿಕಾರ..!

By Shruthi Harishgowda

ಬಿಗ್ ಬಾಸ್ ಮನೆಯಿಂದ ಈಗಾಗಲೇ ಆರು ಮಂದಿ ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದಾರೆ. ಇಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಎಲಿಮಿನೇಷನ್ ಭೂತ ಕಾಡುತ್ತಾ ಇದೆ. ಕೆಲವೊಂದು ಬಾರಿ ಎಲಿಮಿನೇಟ್ ಆದವರನ್ನು ಎಲ್ಲರ ಮುಂದೆ ಹೇಳಿ ಎಂದು ಬಿಗ್ ಬಾಸ್ ಹೇಳುತ್ತಿದ್ದರು. ಈಗ ಸಪರೇಟ್ ಆಗಿ ಕರೆದು ನೀವು ಯಾರನ್ನು ನಾಮಿನೇಟ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ತಮಗೆ ಯಾರು ಇಷ್ಟವಿಲ್ಲವೋ ಅವರನ್ನ ಸೂಕ್ತ ಕಾರಣದೊಂದಿಗೆ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಮಾಡಲು ಸಜ್ಜಾಗಿದ್ದಾರೆ. ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಯಾರು ಉಳಿದುಕೊಳ್ಳುತ್ತಾರೆ ನೋಡಬೇಕು.

ಬಿಗ್ ಬಾಸ್ ಶುರುವಾದಾಗಿನಿಂದ ಇಲ್ಲಿಯವರೆಗೂ ಮನೆಯಿಂದ ಆರು ಮಂದಿ ಹೊರ ಹೋಗಿದ್ದಾರೆ. ಮೊದಲ ವಾರದಲ್ಲಿ ಸ್ನೇಕ್ ಶ್ಯಾಮ್ ಹಾಗೂ ಎರಡನೆಯ ವಾರದಲ್ಲಿ ಗೌರೀಶ್ ಅಕ್ಕಿ ಹೊರಗಡೆ ಹೋದರು. ಮೂರನೇ ವಾರ ವಿಜಯದಶಮಿ ಬಂದಿದ್ದರಿಂದ ಭಾಗ್ಯಶ್ರೀ ಅವರು ಎಲಿಮಿನೇಷನ್ ನಿಂದ ಪರಾಗಿದ್ದರು . ನಂತರ ಬುಲೆಟ್ ರಕ್ಷಕ್ ಮನೆಯಿಂದ ಹೊರಗೆ ಹೋಗಿದ್ದರು. ರಕ್ಷಕ್ ಮನೆಯಿಂದ ಹೊರಗೆ ಹೋದ ನಂತರ ಇನ್ನೊಂದು ಎಲಿಮಿನೇಷನ್ ನಿಂದ ಭಾಗ್ಯಶ್ರೀ ಹಾಗೂ ನೀತು ಪಾರಾಗಿದ್ದರು. ಅದು ಸಹ ವರ್ತೂರು ಸಂತೋಷ್ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದಿದರಿಂದ. ನಂತರ ನಡೆದ ದಿನದಲ್ಲಿ ಡಬಲ್ ಎಲಿಮಿನೇಷನ್ ಆಗಿ ಭಾಗ್ಯಶ್ರೀ ಹಾಗೂ ಈಶಾನಿ ಹೊರಗೆ ಹೋದರೆ ಈ ವಾರ ನೀತು ಹೊರಗೆ ಹೋಗಿದ್ದಾರೆ.

Kannada Bigg Boss Season 10 : Written Update on 8th Weeks Elimination and wildcard entry

ಸದ್ಯಕ್ಕೆ 8ನೇ ವಾರದ ಎಲಿಮಿನೇಷನ್ ನಡೆಯುತ್ತಾ ಇದೆ ಇದರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ನೋಡಬೇಕಾಗಿದೆ. ಈಗಾಗಲೇ ವಿನಯ್ ಟೀಮ್ ನಲ್ಲಿರುವವರು ಕಾರ್ತಿಕ್ ಟೀಂ ಸೇರಿಕೊಂಡಿದ್ದಾರೆ. ಕಾರ್ತಿಕ್ ಟೀಂ‌ನಲ್ಲಿದ್ದ ಪ್ರತಾಪ್ ಹಾಗೂ ಸಂಗೀತಾ ವಿನಯ್ ಟೀಮ್ ಸೇರಿಕೊಂಡಿದ್ದಾರೆ. ಎಲಿಮಿನೇಷನ್‌ನಲ್ಲೂ ಕೂಡ ಏನಾದರೂ ಬದಲಾವಣೆ ಇದೆಯಾ ಎಂಬುವುದು ವೀಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ.‌ ದೊಡ್ಮನೆಗೆ ಬಂದಿರುವ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿಗಳು ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರಾ ಅವರಿಗೆ ಯಾವ ವಿಶೇಷ ಅಧಿಕಾರವನ್ನು ಬಿಗ್ ಬಾಸ್ ಕೊಡುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಸಂಗೀತಾರನ್ನು ನಾಮಿನೇಟ್ ಮಾಡಿದ ಪ್ರತಾಪ್

ವಿನಯ್‌ಗೆ ಪ್ರತಾಪ್ ಮೇಲೆ ಒಂದೊಂದು ಚೂರು ಕೋಪ ಇದ್ದೇ ಇದೆ ಅದನ್ನ ಹಲವಾರು ಬಾರಿ ಜಗಳದ ಮೂಲಕವೂ ತೋರಿಸಿದ್ದಾರೆ. ಕೆಲವೊಮ್ಮೆ ಅವರನ್ನೇ ನಾಮಿನೇಟ್ ಮಾಡುವ ಮೂಲಕ ತೋರಿಸಿದ್ದಾರೆ. ಈಗ ವಿನಯ್ ಮತ್ತೊಮ್ಮೆ ಪ್ರತಾಪ್‌ನನ್ನು ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಸಿಂಪತಿಯಿಂದ ವೋಟ್ ಪಡೆಯುತ್ತಿದ್ದಾರೆ ಎಂಬ ಕಾರಣವನ್ನು ಸಹ ಕೊಟ್ಟಿದ್ದಾರೆ. ಇನ್ನು ಸಂಗೀತಾರನ್ನು ಡ್ರೋನ್ ಪ್ರತಾಪ್ ನಾಮಿನೇಟ್ ಮಾಡಿದ್ದು, ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಏನೇ ಹೇಳಿದರೂ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ ಎಂದಿದ್ದಾರೆ.

ಇನ್ನು ಈ ಕಡೆ ತುಕಾಲಿ ಸಂತೋಷ್ ನಮ್ರತಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇನ್ನೂ ಸಿರಿ ಸಹ ನಾಮಿನೇಟ್ ಆಗಿದ್ದು ಬೇಸರದಲ್ಲಿ ಇದ್ದಾರೆ. ಇನ್ನು ಈ ವಾರ ಇನ್ಯಾರು ಯಾರು ನಾಮಿನೇಟ್ ಆಗಿದ್ದಾರೆ ಎಂಬುವುದು ಸಂಜೆಯ ಎಪಿಸೋಡ್‌ನಲ್ಲಿ ತಿಳಿಯಲಿದೆ. ಕಲರ್ಸ್ ಕನ್ನಡದಲ್ಲಿ ಪ್ರೋಮೋವನ್ನು ಬಿಡಲಾಗಿದ್ದು ಅದರಲ್ಲಿ ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ ಎಂಬುದನ್ನು ಮಾತ್ರ ತೋರಿಸಲಾಗಿದೆ. ಉಳಿದ ಸದಸ್ಯರು ಯಾರು ಎಂಬುದನ್ನು ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಾಗಿದೆ.

Kannada Bigg Boss Season 10 : Written Update on 8th Weeks Elimination and wildcard entry

ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ

ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಇಬ್ಬರಿಗೆ ಬಿಗ್ ಬಾಸ್ ವಿಶೇಷ ಅಧಿಕಾರವನ್ನು ಕೊಟ್ಟಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಇಬ್ಬರನ್ನು ಉಳಿಸುವ ಅಧಿಕಾರವನ್ನು ನೀಡಿದೆ. ಈ ಪ್ರಕಾರ ನಮ್ರತಾ ಹಾಗೂ ಸಿರಿ ನಾಮಿನೇಟ್ ಆಗಿದ್ದು, ಇವರು ಹೋಗಿ ಮನೆಗೆ ಸೇರ್ಪಡೆಯಾಗಿರುವ ಹೊಸ ಸದಸ್ಯರ ಬಳಿ ಮನವಿ ಮಾಡಿಕೊಳ್ಳುತ್ತಾ ಇದ್ದಾರೆ. ದಯವಿಟ್ಟು ನನ್ನನ್ನು ಉಳಿಸಿ. ನಾನು ಇಲ್ಲಿಯ ತನಕ ಕಷ್ಟಪಟ್ಟು ಆಟವನ್ನು ಆಡಿದ್ದೇನೆ. 50 ದಿನಗಳನ್ನು ಪೂರೈಸಿದ್ದೇನೆ ಎಂದು ಕನ್ವೀನ್ಸ್ ಮಾಡಲು ನೋಡಿದ್ದಾರೆ.

ಮನೆಯಲ್ಲಿರುವ ಇತರ ಸದಸ್ಯರು ಅವರಿಬ್ಬರನ್ನ ಕನ್ವಿನ್ಸ್ ಮಾಡುವುದು ತುಂಬಾ ಕಷ್ಟ ಎಂದುಕೊಂಡಿದ್ದಾರೆ. ಆದರೂ ಸಹ ಸಿರಿ ಹಾಗೂ ನಮ್ರತಾ ತಮ್ಮ ಕೈಲಾದ ಮಟ್ಟಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವವರ ಮನಸ್ಸನ್ನ ಗೆಲ್ಲಲು ನೋಡುತ್ತಾ ಇದ್ದಾರೆ. ಹೊಸ ಸದಸ್ಯರು ಯಾರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಳ್ಳುತ್ತಾರೆ ನೋಡಬೇಕಾಗಿದೆ.

More from Filmibeat

English summary
Colors kannada bigg boss 8th week's elimination
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X