'ಬಿಗ್ ಬಾಸ್' ಮನೆಗೆ ಹೋಗುವ ಸ್ಪರ್ಧಿಗಳ ಪಟ್ಟಿ ಇದೇನಾ?
ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-7ಗೆ ದಿನಗಣನೆ ಶುರುವಾಗಿದೆ. ಇನ್ನೇನು ಮುಂದಿನ ತಿಂಗಳಿಂದ ಬಿಗ್ ಬಾಸ್ ಪ್ರಾರಂಭವಾಗಲಿದೆ. ಬಿಗ್ ಬಾಸ್ ಸಮೀಪವಾಗುತ್ತಿದ್ದಂತೆ ಬಿಗ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ಕಿರುತೆರೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಈ ಬಾರಿಯ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಒಂದಿಷ್ಟು ಸ್ಪರ್ಧಿಗಳ ಹೆಸರು ಈಗಾಗಾಗಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಬಿಗ್ ಬಾಸ್ ಮನೆಯ ಎಂಟ್ರಿಗೆ ಅವಕಾಶವಿರುವುದು.
ಹಾಗಾಗಿ ಯಾರೆಲ್ಲ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ. ಸದ್ಯ ಹಾರಿದಾಡುತ್ತಿರುವ ಸೆಲೆಬ್ರಿಟಿಗಳ ಲಿಸ್ಟ್ ಇಲ್ಲಿದೆ.

ಶ್ವೇತಾ ಪ್ರಸಾದ್
ಕನ್ನಡ ಕಿರುತೆಯಲ್ಲಿ ಮಿಂಚಿದ ನಟಿ. ರಾಧಾ ರಮಣ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದ ಶ್ವೇತಾ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ರಾಧಾ ಮಿಸ್ ಆಗಿ ಎಲ್ಲರನ್ನು ರಂಜಿಸಿದ್ದ ಶ್ವೇತಾ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಮತ್ತೆ ಅಭಿಮಾನಿಗಳನ್ನು ರಂಜಿಸುತ್ತಾರಾ ಎನ್ನುವುದು ಕಾದುನೋಬೇಕು. ಆದ್ರೆ ಶ್ವೇತಾ ಹೆಸರು ಈಗಾಗಲೆ ಸಖತ್ ವೈರಲ್ ಆಗಿದೆ.

ಶಿವರಾಜ್ ಕೆ.ಆರ್ ಪೇಟೆ
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಶಿವರಾಜ್ ಕೆಆರ್ ಪೇಟೆ ಹೆಸರು ಕೂಡ ಬಿಗ್ ಬಾಸ್ ಸ್ಪರ್ಧಿಗಳ ಹೆಸರಿನ ಲಿಸ್ಟ್ ನಲ್ಲಿ ಇದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಶಿವರಾಜ್ ಕೆಆರ್. ಆದ್ರೆ ಶಿವರಾಜ್ ಹೆಸರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಇನ್ನು ಅಧಿಕೃತವಾಗಿಲ್ಲ. ಒಂದುವೇಳೆ ಬಿಗ್ ಬಸ್ ಮನೆಯಲ್ಲಿ ಕಾಣಿಸಿಕೊಂಡರೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಫಿಕ್ಸ್.

ನಟಿ ರಾಗಿಣಿ
ಈ ಬಾರಿಯ ಬಗ್ ಮನೆಗೆ ಎಂಟ್ರಿಕೊಡುವ ಸೆಲೆಬ್ರಿಟಿ ಲಿಸ್ಟ್ ನಲ್ಲಿ ರಗಿಣಿ ಹೆಸರು ಕೂಡ ಇದೆ ಎನ್ನುವ ಸುದ್ದಿ ಹರದಾಡುತ್ತಿದೆ. ರಾಗಿಣಿ ಸದ್ಯ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದ ರಿಲೀಸ್ ನ ಬ್ಯುಸಿಯಾಗಿದ್ದಾರೆ. ಇದೊಂದು ಸಿನಿಮಾ ಬಿಟ್ಟರೆ ರಾಗಿಣಿ ಬಳಿ ಬೇರೆ ಯಾವ ಸಿನಿಮಾಗಳು ಇಲ್ಲ. ಹಾಗಾಗಿ ತುಪ್ಪದ ಬೆಡಗಿ ಈ ಬಾರಿಯ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗಾಯಕ ಹನುಮಂತ
'ಸರಿಗಮಪ' ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿರುವ ಗಾಯಕ ಹುನುಮಂತ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಪರ್ಧಿಗಳ ಲಿಸ್ಟ್ ನಲ್ಲಿ ಹನುಮಂತನ ಹೆಸರು ಕೂಡ ಇದೆ.

ನಟಿ ಪಾರುಲ್ ಯಾದವ್
ಪ್ಯಾರ್ ಗೆ ಆಗ್ಬಿಟ್ಟೈತೆ ಖ್ಯಾತಿಯ ನಟಿ ಪಾರಲ್ ಯಾದವ್ ಬಿಗ್ ಬಾಸ್ ಸೀಸನ್-7ಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಪಾರುಲ್ ಎಂಟ್ರಿಯ ಬಗ್ಗೆ ಅದಿಕೃತವಾದ ಮಾಹಿತಿಲ್ಲ. ಸದ್ಯ ಹರಿದಾಡುತ್ತಿರುವ ಸೆಲೆಬ್ರಿಟಗಳ ಹೆಸರಿನ ಲಿಸ್ಟ್ ನಲ್ಲಿ ಪರುಲ್ ಹೆಸರು ಕೂಡ ಕೇಳಿಬರುತ್ತಿದೆ. ಪಾರುಲ್ ಅಭಿನಯದ ಬಟರ್ ಫ್ಲೈ ಸಿನಿಮಾ ರಿಲೀಸ್ ಗೆ ರೆಡಿಯಿದೆ. ಆದುಬಿಟ್ಟರೆ ಬೇರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಪಾರುಲ್. ಹಾಗಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟರು ಅಚ್ಚರಿ ಇಲ್ಲ.

ಕುರಿ ಪ್ರತಾಪ್
ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಹಾಸ್ಯ ನಟ ಕುರಿ ಪ್ರತಾಪ್ ಹೆಸರು ಕೂಡ ಕೇಳಿ ಬರುತ್ತಿದೆ. ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿರುವ ಕುರಿ ಪ್ರತಾಪ್ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಜಾ ಟಾಕೀಸ್ ಕೂಡ ಮುಗಿಯುವ ಹಂತಕ್ಕೆ ಬಂದಿದೆ. ಹಾಗಾಗಿ ಕುರು ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.

ನಟಿ ವಿಜಯಲಕ್ಷ್ಮಿ
ಒಂದು ಕಾಲದ ಖ್ಯಾತ ನಟಿ ವಿಜಯಲಕ್ಷ್ಮಿ ಈ ಬಾರಿಯ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಸೀಸನ್ ನಲ್ಲಿಯೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೆ ಈ ಬಾರಿಯು ವಿಜಯ ಲಕ್ಷ್ಮಿ ಹೆಸರು ಜೋರಾಗೆ ಕೇಳಿ ಬರುತ್ತಿದೆ. ಆರೋಗ್ಯ ಸರಿ ಇಲ್ಲ. ಆರ್ಥಿಕವಾಗಿ ತೀರ ಕಷ್ಟದಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿರುವ ವಿಜಯಲಕ್ಷ್ಮಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಸಿಗುತ್ತಾರಾ ಕಾದು ನೋಡಬೇಕು.


Click it and Unblock the Notifications











