ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರಿರಲಿದ್ದಾರೆ? ಇಲ್ಲಿದೆ ಸಂಭಾವ್ಯ ಪಟ್ಟಿ

By ಫಿಲ್ಮೀಬೀಟ್ ಡೆಸ್ಕ್‌

ಬಿಗ್‌ಬಾಸ್ 8 ಪ್ರಾರಂಭದ ಹಂತದಲ್ಲಿದೆ. ಬಿಗ್‌ಬಾಸ್ ರಿಯಾಲಿಟಿ ಶೋ ಆಯೋಜಕರ ತಂಡ ಈಗಾಗಲೇ ಸುದೀಪ್ ಅವರನ್ನು ಭೇಟಿಮಾಡಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆದಿದ್ದು, ಬಿಗ್‌ಬಾಸ್ ಆಯೋಜನೆ ಪ್ರಕ್ರಿಯೆ ಆರಂಭಗೊಂಡಿದೆ.

ಕನ್ನಡ ಟಿವಿಗಳ ಟಾಪ್ ರಿಯಾಲಿಟಿ ಶೋ ಬಿಗ್‌ಬಾಸ್‌ ಪ್ರತಿವರ್ಷವೂ ಹೊಸ ರೋಚಕತೆ, ಕುತೂಹಲದೊಂದಿಗೆ ವೀಕ್ಷಕರ ಮುಂದೆ ಬರುತ್ತಲೇ ಇದೆ. ಎಂಟು ಸೀಸನ್‌ಗಳಾದರೂ ಜನಪ್ರಿಯತೆ ಕಳೆದುಕೊಂಡಿಲ್ಲ ಬಿಗ್‌ಬಾಸ್.

ವಿವಿಧ ಕ್ಷೇತ್ರಗಳ ಜನರನ್ನು ಒಂದು ಮನೆಯಲ್ಲಿ ಕೂಡಿಟ್ಟು, ನೂರಾರು ಕ್ಯಾಮೆರಾಗಳ ಮೂಲಕ ಅವರ ವರ್ತನೆ, ಆಟ, ಜಗಳ, ಪ್ರೀತಿ, ನೋವು, ನಲಿವುಗಳನ್ನು ಸೆರೆ ಹಿಡಿದು ಪ್ರೇಕ್ಷಕರ ಮುಂದಿಡುವ ಬಿಗ್‌ಬಾಸ್ ಗೆ ಈ ಬಾರಿ ಯಾರ್ಯಾರು ಹೋಗಲಿದ್ದಾರೆ. ಯಾರು ಬಿಗ್‌ಬಾಸ್ ಸ್ಪರ್ಧಿಗಳಾಗಲಿದ್ದಾರೆ ಎಂಬ ಕುತೂಹಲ ಶುರುವಾಗಿದ್ದು, ಇಲ್ಲಿದೆ ಒಂದು ಸಂಭಾವ್ಯ ಪಟ್ಟಿ.

ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಹಾರಿಸ್ತಾರಾ ಪ್ರತಾಪ್?

ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಹಾರಿಸ್ತಾರಾ ಪ್ರತಾಪ್?

ಡ್ರೋನ್ ಪ್ರತಾಪ್ ಈ ವರ್ಷ ಹೆಚ್ಚು ಚರ್ಚೆಯಲ್ಲಿದ್ದ ವ್ಯಕ್ತಿ. ತನ್ನ ಡ್ರೋನ್‌ಗೆ ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆ ಪ್ರಶಸ್ತಿಗಳು ದೊರೆತಿದೆಯೆಂದು ಕೊಚ್ಚಿಕೊಂಡಿದ್ದರು ಪ್ರತಾಪ್. ಅದಾದ ನಂತರ ಆತ ಹೇಳಿರುವುದೆಲ್ಲಾ ಸುಳ್ಳು ಎಂದು ಗೊತ್ತಾದ ನಂತರ ಭಾರಿ ಮೂದಲಿಕೆಗಳಿಗೆ, ಟ್ರೋಲ್‌ಗಳಿಗೆ ಒಳಗಾದರು ಪ್ರತಾಪ್. ಈ ಬಾರಿ ಬಿಗ್‌ಬಾಸ್ ಮನೆಗೆ ಪ್ರತಾಪ್ ಎಂಟ್ರಿ ಪಕ್ಕಾ ಎಂದು ನಿರೀಕ್ಷಿಸಲಾಗಿದೆ.

ರಾಕೇಶ್ ಅಡಿಗಗೆ ಬಿಗ್‌ಬಾಸ್‌ ನಿಂದ ಬುಲಾವ್?

ರಾಕೇಶ್ ಅಡಿಗಗೆ ಬಿಗ್‌ಬಾಸ್‌ ನಿಂದ ಬುಲಾವ್?

ನಟ, ನಿರ್ದೇಶಕ ರಾಕೇಶ್ ಅಡಿಗ ಈ ಬಾರಿ ಬಿಗ್‌ಬಾಸ್‌ಗೆ ಹೋಗುವ ಸಾಧ್ಯತೆ ಇದೆ. ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ ಬಿಚ್ಚಿಕೊಂಡಾಗ, ರಾಕೇಶ್ ಅಡಿಗ, ಗಾಂಜಾ ವನ್ನು ಕಾನೂನುಬದ್ಧಗೊಳಿಸಬೇಕು ಎಂದು ಹೇಳಿದ್ದರು. ರಾಕೇಶ್ ಅಡಿಗ ಅವರ ಹೇಳಿಕೆಗೆ ಸಾಕಷ್ಟು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಗಾಂಜಾ ವಿಷಯವು ಮಾಧ್ಯಮಗಳಲ್ಲಿ ಸಹ ಚರ್ಚೆಯಾಗಿ, ರಾಕೇಶ್ ಅವರು ಪ್ಯಾನಲ್ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ಹೇಳಿಕೆಗಳನ್ನು ಪೂರಕ ಮಾಹಿತಿಗಳೊಂದಿಗೆ ಸಮರ್ಥಿಸಿಕೊಂಡಿದ್ದರು. ಈ ಬಾರಿ ಬಿಗ್‌ಬಾಸ್ ಆಯೋಜಕರ ಕಣ್ಣು ಅವರ ಮೇಲೆ ಬಿದ್ದಿದೆ ಎನ್ನಲಾಗುತ್ತಿದೆ.

ಬಿಗ್‌ಬಾಸ್ ಮನೆಯಲ್ಲಿ ನಟಿ ನಿವೇದಿತಾ?

ಬಿಗ್‌ಬಾಸ್ ಮನೆಯಲ್ಲಿ ನಟಿ ನಿವೇದಿತಾ?

ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ನಿವೇದಿತಾ ಸಹ ಈ ಬಾರಿ ಬಿಗ್‌ಬಾಸ್‌ಗೆ ಬರುವ ಸಾಧ್ಯತೆ ಇದೆ. ನಿವೇದಿತಾ ಅವರು 'ಗಾಂಜಾ ಗಿಡ ತುಳಸಿಯಷ್ಟೇ ಪವಿತ್ರ' ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಗಾಂಜಾದಿಂದ ಇರುವ ಲಾಭಗಳ ಬಗ್ಗೆ , ಗಾಂಜಾ ಕುರಿತು ಪುರಾಣಗಳಲ್ಲಿನ ಉಲ್ಲೇಖದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು ನಿವೇದಿತಾ.

ಪತ್ರಕರ್ತೆ ರಾಧಾ ಹಿರೇಗೌಡರ್

ಪತ್ರಕರ್ತೆ ರಾಧಾ ಹಿರೇಗೌಡರ್

ವಾರ್ತಾ ವಾಚಕಿ, ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಈ ಬಾರಿ ಬಿಗ್‌ಬಾಸ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ತಮ್ಮ ವಿಶಿಷ್ಟ ಶೈಲಿಯಲ್ಲಿ ಸುದ್ದಿ ನಿರೂಪಣೆ ಮಾಡುವ ರಾಧಾ ಅವರಿಗೆ ಹಲವು ಅಭಿಮಾನಿಗಳಿದ್ದಾರೆ. ಜೊತೆಗೆ ಅಷ್ಟೇ ಪ್ರಮಾಣದ ಟ್ರೋಲ್ ಮಾಡುವವರೂ ಇದ್ದಾರೆ. ಅವರು ಬಿಗ್‌ಬಾಸ್‌ ಮನೆಯಲ್ಲಿದ್ದರೆ ಒಳ್ಳೆಯ ಮನರಂಜನೆ ಇರುತ್ತದೆ.

ಸರಿಗಮಪ ಹನುಮಂತು

ಸರಿಗಮಪ ಹನುಮಂತು

ಸರಿಗಮಪ ರಿಯಾಲಿಟಿ ಶೋ ನಿಂದ ಉದ್ಭವವಾದ ಗಾಯಕ ಹನುಮಂತು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಕಳೆದ ಬಾರಿಯೇ ಹನುಮಂತು ಗೆ ಬಿಗ್‌ಬಾಸ್ ಆಫರ್ ಬಂದಿತ್ತು, ಆದರೆ ಅದನ್ನು ಹನುಮಂತು ನಿರಾಕರಿಸಿದ್ದರು, ಆದರೆ ಈ ಬಾರಿ ಹನುಮಂತು ಬಿಗ್‌ಬಾಸ್ ಮನೆಗೆ ಕಾಲಿಡುವ ಸಾಧ್ಯತೆ ಇದೆ.

ಹಿರಿಯ ನಟಿ ರೇಖಾ ದಾಸ್

ಹಿರಿಯ ನಟಿ ರೇಖಾ ದಾಸ್

ಹಿರಿಯ ನಟಿ ರೇಖಾ ದಾಸ್ ಈ ಬಾರಿ ಬಿಗ್‌ಬಾಸ್‌ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ರೇಖಾ ದಾಸ್ ಬಿಗ್‌ಬಾಸ್‌ ಗೆ ಒಳ್ಳೆಯ ಸ್ಪರ್ಧಿ ಆಗಬಲ್ಲರು.

ಬಿಗ್‌ಬಾಸ್ ಮನೆಯಲ್ಲಿ ಶುಭಾ ಪೂಂಜಾ?

ಬಿಗ್‌ಬಾಸ್ ಮನೆಯಲ್ಲಿ ಶುಭಾ ಪೂಂಜಾ?

ನಟಿ ಶುಭಾ ಪೂಂಜಾ ಸಹ ಬಿಗ್‌ಬಾಸ್ ಮನೆ ಸೇರಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ. ತಮ್ಮ ಗ್ಲಾಮರ್ ಮೈಮಾಟದಿಂದ ಹಲವಾರು ಅಭಿಮಾನಿಗಳನ್ನು ಹೊಂದಿರುವ ಜೊತೆಗೆ, ತಮ್ಮ ಬಿಂದಾಸ್ ಮಾತುಗಳಿಂದಲೂ ಖ್ಯಾತರಾಗಿರುವ ಶುಭಾ ಪೂಂಜಾ ಬಿಗ್‌ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ.

ಬ್ರಹ್ಮಗಂಟು ಧಾರಾವಾಹಿ ಗೀತಾ

ಬ್ರಹ್ಮಗಂಟು ಧಾರಾವಾಹಿ ಗೀತಾ

ಗಾಯಕಿಯಾಗಿದ್ದ ಗೀತಾ ಈಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಗೀತಾ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಬಳಿಕ, ತಮಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧವಿಲ್ಲ, ಮಾಧ್ಯಮಗಳು ಇಲ್ಲ-ಸಲ್ಲದ್ದು ವರದಿ ಮಾಡಬಾರದೆಂದು ಮನವಿ ಮಾಡಿದ್ದರು. ಇವರು ಸಹ ಈ ಬಾರಿ ಬಿಗ್‌ಬಾಸ್ ಪ್ರವೇಶಿಸುವ ಸಂಭಾವ್ಯ ಸ್ಪರ್ಧಿ.

ಟಿಕ್‌ಟಾಕ್ ಸ್ಟಾರ್ ಬಿಂದು ಗೌಡ

ಟಿಕ್‌ಟಾಕ್ ಸ್ಟಾರ್ ಬಿಂದು ಗೌಡ

'ಮಚ್ಚಾ ನೀನ್ ಬದುಕ್ಬೇಕಾ?' ಇದೊಂದು ಡೈಲಾಗ್ ಮೂಲಕ ದೊಡ್ಡ 'ಖ್ಯಾತಿ' ಗಳಿಸಿದ್ದು ಟಿಕ್‌ಟಾಕ್ ಸ್ಟಾರ್ ಬಿಂದು ಗೌಡ. ಕನ್ನಡ ಟಿಕ್‌ಟಾಕ್‌ ನೋಡುವವರಿಗೆ ಬಿಂದು ಗೌಡ ಹೆಸರು ಚಿರಪರಿಚಿತ. ಟಿಕ್‌ಟಾಕ್ ಆಪ್ ಬ್ಯಾನ್ ಆದರೂ ಈಗಲೂ ಬಿಂದು ಗೌಡ ಚರ್ಚೆಯಲ್ಲಿದ್ದಾರೆ. ಈ ಬಾರಿ ಬಿಗ್‌ಬಾಸ್‌ಗೆ ಮನೆಗೆ ಬಿಂದು ಗೌಡ ಸಹ ಪ್ರವೇಶಿಸುವ ಸಾಧ್ಯತೆ ಇದೆ.

ಟಿಕ್‌ಟಾಕ್ ಸ್ಟಾರ್ ಸೋನು ಗೌಡ

ಟಿಕ್‌ಟಾಕ್ ಸ್ಟಾರ್ ಸೋನು ಗೌಡ

ಸೋನು ಶ್ರೀನಿವಾಸ ಗೌಡ ಸಹ ಟಿಕ್‌ಟಾಕ್ ಸ್ಟಾರ್ ಎಂದೇ ಖ್ಯಾತರು. ಅವರೂ ಸಹ ಟಿಕ್‌ಟಾಕ್ ನಿಂದ ಖ್ಯಾತಿ ಪಡೆದವರೇ, ಇತ್ತೀಚೆಗೆ ತೆಲುಗು ಸಿನಿಮಾಗಳನ್ನು ಹೊಗಳಿ, ಕನ್ನಡ ಸಿನಿಮಾಗಳನ್ನು ತೆಗಳಿ ಕೆಲ ಕಾಲ ಸುದ್ದಿಯಲ್ಲಿದ್ದರು. ಅವರು ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.

Recommended Video

ಕಮಲ್ ಹಾಸನ್ ನಂತರ ಈ ದಾಖಲೆ ಮಾಡಿದ್ದು ಪುನೀತ್ ರಾಜ್ ಕುಮಾರ್ ಮಾತ್ರ | James | Filmibeat Kannada
ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದ ಅನಿರುದ್ಧ

ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದ ಅನಿರುದ್ಧ

ಜೊತೆ-ಜೊತೆಯಲಿ ಧಾರಾವಾಹಿ ಖ್ಯಾತಿಯ ಅನಿರುದ್ಧ ಅವರು ಬಿಗ್‌ಬಾಸ್‌ ನಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಸ್ವತಃ ಅನಿರುದ್ಧ ಇದನ್ನು ಅಲ್ಲಗಳೆದಿದ್ದಾರೆ. ನಾನು ಧಾರಾವಾಹಿಯಲ್ಲಿಯೇ ನಟಿಸಲಿದ್ದೇನೆ, ಬಿಗ್‌ಬಾಸ್ ಶೋ ನಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.

ಬಿಗ್ ಬಾಸ್ 4: ವಿಜೇತ ಸ್ಪರ್ಧಿಗಿಂತ ಹೆಚ್ಚು ಗಳಿಸಿದ್ದಾನೆ ಈ ಸ್ಪರ್ಧಿ

More from Filmibeat

English summary
Kannada Bigg Boss season 8 will start next month. Here is the probable contestants list who were in the news this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X