'ಬೆಟ್ಟದ ಹೂ' ಧಾರಾವಾಹಿಯ ನಟನ ಮನೆಗೆ ಬಂತು 'ಪಂಬ': ದಂಪತಿ ಇಟ್ಟ ಹೆಸರೇ ಸೂಪರ್!
ಕಿರುತೆರೆಯ ಸೆಲೆಬ್ರಿಟಿ ಜೋಡಿ ದರ್ಶಕ್ ಗೌಡ ಹಾಗೂ ಶಿಲ್ಪ ರವಿ ಅವರು ಈಗ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗಷ್ಟೇ ಈ ಜೋಡಿ ಹೊಸ ಕಾರನ್ನು ಕೊಂಡುಕೊಂಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದ ಹಾರೈಕೆಗಳ ಸುರಿಮಳೆಯೇ ಸುರಿದಿದೆ.
ಶೋರೂಮ್ ನಲ್ಲಿ ಕಾರಿನ ಮುಂದೆ ನಿಂತುಕೊಂಡಿರುವ ಫೋಟೋವನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಬಹಳಷ್ಟು ವೈರಲ್ ಆಗಿದ್ದು ತಮ್ಮ ಕಾರ್ ಬಗ್ಗೆ ಬಹಳ ಪ್ರೀತಿ ಹಾಗೂ ಹೆಮ್ಮೆಯಿಂದ ದರ್ಶಕ್ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕನಸಿನ ಕಾರು ಖರೀದಿಸಿದ ದರ್ಶಕ್ ಗೌಡ
"ನಾವು ಬರೀ ಕ್ಯಾಂಪಿಂಗ್ ವಿಡಿಯೋಗಳನ್ನು ನೋಡೋದಷ್ಟೇ ಅಲ್ಲ. ಸ್ವತಃ ಕಾರ್ ತಗೊಂಡು ನಾವೇ ಅಲ್ಲಿಗೆ ಹೋಗಬಹುದು. ನಮಗೆ ಒಂದು ಬೀಸ್ಟ್ ಬೇಬಿ ಸಿಕ್ಕಿದೆ. ಜನವರಿ 9ರಂದು ಆರ್ ಡಬ್ಲ್ಯೂ ಡಿ ಮಾಡೆಲ್ ಬುಕಿಂಗ್ ಓಪನ್ ಆದಾಗ ಎಲ್ಲರಿಗಿಂತ ಮೊದಲು ನಾನೇ ಬುಕ್ ಮಾಡಿದ್ದೆ. ಇದೇ ನನಗೆ ಬೇಕಾಗಿದ್ದ ಎಸ್‌ಯುವಿ ಮಾಡೆಲ್. ಇಂದು ನಾನು ಸಂಭ್ರಮದಲ್ಲಿದ್ದೇನೆ. ಬಿಳಿ ಬಣ್ಣದ ಬಗ್ಗೆ ಮೊದಲು ಅಷ್ಟು ಖುಷಿ ಇಲ್ಲದಿದ್ದರೂ ಈಗಂತೂ ನನಗೆ ತುಂಬಾ ಇಷ್ಟವಾಗಿದೆ.
ತಾರ್ ಬಿಳಿ ಮಾಡಲೇ ಬಹಳ ಸುಂದರವಾಗಿದೆ ಅನ್ನೋದು ನನ್ನ ಈಗಿನ ಅಭಿಪ್ರಾಯ. ಸಿಂಬ ಮನೆಯಲ್ಲಿದ್ದಾನೆ. ಇದೀಗ ಪಂಬ ಕೂಡ ಮನೆಗೆ ಬರ್ತಿದ್ದಾನೆ. ಒಟ್ಟಿಗೆ ಹಲವಾರು ಸುಂದರ ಕ್ಷಣಗಳಿಗೆ ಸಾಹಸಗಳಿಗೆ ಸಾಕ್ಷಿಯಾಗೋಣ. ವೆಲ್ಕಮ್ ಹೋಂ ಪಂಬ. "ಈ ರೀತಿ ನಮ್ಮ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ದರ್ಶಕ್ ಗೌಡ ದಂಪತಿಗಳಿಗೆ ಹಾರೈಕೆ ಶುಭಾಶಯಗಳ ಸುರಿಮಳೆಯೇ ಸುರಿದು ಬರುತ್ತಿದೆ.
ಕಿರುತೆರೆಯಿಂದ ಸದ್ಯಕ್ಕಷ್ಟೇ ಬ್ರೇಕ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ನಾಯಕ ರಾಹುಲ್ ಆಗಿ ಅಭಿನಯಿಸಿದ್ದ ದರ್ಶಕ್ ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಹುಡುಗ. 'ಪದ್ಮಾವತಿ', 'ಕಣ್ಮಣಿ', 'ಕಾವ್ಯಾಂಜಲಿ'ಯ ನಂತರ 'ಬೆಟ್ಟದ ಹೂವಿ'ನಲ್ಲಿ ನಟಿಸಿದ ದರ್ಶಕ್ ಸದ್ಯ ಕನ್ನಡ ಕಿರುತೆರೆಯಿಂದ ದೂರವಿದ್ದಾರೆ.

ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಮಧುಮಿತಾ ಆಗಿ ನಟಿಸಿ, ಇದೀಗ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ನಟಿ ಶಿಲ್ಪಾ 'ಶ್ರೀನಿವಾಸ ಕಲ್ಯಾಣ', 'ಸಪ್ತ ಮಾತೃಕಾ', 'ಅಮ್ನೋರು', 'ನಾಗಿಣಿ', 'ಮಾನಸ ಸರೋವರ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಶಿಲ್ಪಾ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಮನೋಜ್ಞ ನಟನೆಯ ಮೂಲಕ ದರ್ಶಕ್ ಗೌಡ ಹಾಗೂ ಶಿಲ್ಪ ಮತ್ತೆ ನಟನೆಗೆ ಮರಳುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











