»   » ಜುಲೈ 25 ರಿಂದ ನಿಮ್ಮ 'ಸುವರ್ಣ' ವಾಹಿನಿ ಹೊಸ ರೂಪದಲ್ಲಿ.!

ಜುಲೈ 25 ರಿಂದ ನಿಮ್ಮ 'ಸುವರ್ಣ' ವಾಹಿನಿ ಹೊಸ ರೂಪದಲ್ಲಿ.!

Posted By:
Subscribe to Filmibeat Kannada

ಕಳೆದ ಒಂಬತ್ತು ವರ್ಷಗಳಿಂದ ಏಷ್ಯಾನೆಟ್ ಸುವರ್ಣ ವಾಹಿನಿ ಆಗಿ ನಿಮ್ಮನ್ನೆಲ್ಲಾ ರಂಜಿಸುತ್ತಿದ್ದ ವಾಹಿನಿ ಇದೀಗ 'ಸ್ಟಾರ್ ಸುವರ್ಣ' ರೂಪ ತಾಳಿದೆ.

ಜುಲೈ 25 ರಂದು 'ಸಂಬಂಧಗಳ ಹೊಸ ಸ್ಪಂದನ' ಎಂಬ ನೂತನ ಧ್ಯೇಯ ವಾಕ್ಯದೊಂದಿಗೆ 'ಸ್ಟಾರ್ ಸುವರ್ಣ' ವಾಹಿನಿ ರೀ ಲಾಂಚ್ ಆಗುತ್ತಿದೆ.

Kannada Channel Suvarna is now bigger with 'Star Suvarna'

'ಸ್ಟಾರ್ ಸುವರ್ಣ' ತನ್ನ ಮೊದಲನೇ ಕೊಡುಗೆಯಾಗಿ ಶಿವನ ಚರಿತ್ರೆಯನ್ನು ಸಾರುವ 'ಹರ ಹರ ಮಹಾದೇವ' ಎಂಬ ಭಕ್ತಿ ಪ್ರಧಾನ ಧಾರಾವಾಹಿಯನ್ನು ಕನ್ನಡದ ಕುಲಕೋಟಿಗೆ ಸಮರ್ಪಿಸಲಿದೆ. ಇದರ ಜೊತೆಗೆ ವಾರಾಂತ್ಯದಲ್ಲಿ ಎರಡು ರಿಯಾಲಿಟಿ ಶೋಗಳು ಆರಂಭವಾಗಲಿದೆ. [ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ]

Kannada Channel Suvarna is now bigger with 'Star Suvarna'

ಸುವರ್ಣ ವಾಹಿನಿಯ ಜೊತೆಗೆ ಸಿನಿಮಾಗೆಂದೇ ಮೀಸಲಾಗಿರುವ 'ಸುವರ್ಣ ಪ್ಲಸ್' ಕೂಡ ಜುಲೈ 25 ರಿಂದ 'ಸ್ಟಾರ್ ಸುವರ್ಣ ಪ್ಲಸ್' ಆಗಲಿದೆ. ಈ ವಾಹಿನಿಯಲ್ಲಿ ಜನ ಮೆಚ್ಚಿದ ಸಿನಿಮಾಗಳು ಮಾತ್ರವಲ್ಲ. ಕ್ರೀಡಾ ಪಂದ್ಯಾವಳಿ ಕೂಡ ಪ್ರಸಾರವಾಗಲಿದೆ.

English summary
Kannada General Entertainment Channel of Star Network, Suvarna is all set to be re-launched as 'Star Suvarna' drom 25th July, 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada