For Quick Alerts
  ALLOW NOTIFICATIONS  
  For Daily Alerts

  ಒಂದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ನಟರ ಸಮ್ಮಿಲನ

  By Bharath Kumar
  |

  ದಶಕಗಳ ಕಾಲ ಕನ್ನಡ ಕಲಾಭಿಮಾನಿಗಳನ್ನ ರಂಜಿಸಿದ್ದ ದಿಗ್ಗಜ ಹಾಸ್ಯ ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಅಂತಹ ಯುವ ಕಲಾವಿದರ ಮುಂದೆ ಹಿರಿಯ ಹಾಸ್ಯನಟರು ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ. ಅಂತಹ ಕಲಾವಿದರು ಈಗ ನಿಮ್ಮ ಮನೆಗೆ ಬರ್ತಿದ್ದಾರೆ.

  ಬ್ಯಾಂಕ್ ಜರ್ನಾಧನ್, ಉಮೇಶಣ್ಣ, ಲಕ್ಷ್ಮಿ ದೇವಿ, ಹೊನ್ನವಳ್ಳಿ ಕೃಷ್ಣ, ಬಿರಾದರ್ ಈ ಎಲ್ಲರೂ ಈ ವಾರಾಂತ್ಯಕ್ಕೆ ನಿಮ್ಮನ್ನು ಮನರಂಜಿಸಲು ಸಿದ್ದವಾಗಿದ್ದಾರೆ.

  ಅರೇ, ವೀಕೆಂಡ್, ಮನರಂಜನೆ ಏನು ಅಂತ ಕನ್ ಫ್ಯೂಸ್ ಮಾಡ್ಕೋಬೇಡಿ. ಈ ಎಲ್ಲ ಕಾಲವಿದರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ 'ಭರ್ಜರಿ ಕಾಮಿಡಿ'ಗೆ ಅತಿಥಿಗಳಾಗಿ ಬಂದಿದ್ದಾರೆ.

  ಈ ಮೂಲಕ 'ಭರ್ಜರಿ ಕಾಮಿಡಿ'ಯಲ್ಲಿ ಈ ವಾರ ಮಸ್ತ್ ಮನರಂಜನೆ ಸಿಗೋದಂತೂ ಗ್ಯಾರೆಂಟಿ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ರಾಗಿಣಿ, ಹಿರಿಯ ನಟ ದೊಡ್ಡಣ್ಣ, ನಿರ್ದೇಶಕ ಗುರುಪ್ರಸಾದ್ ಈ ಕಾರ್ಯಕ್ರಮದ ತಿರ್ಪುಗಾರರಾಗಿದ್ದು, 'ಅಗ್ನಿಸಾಕ್ಷಿ'ಯ ಖ್ಯಾತಿಯ ವೈಷ್ಣವಿ ನಿರೂಪಣೆ ಮಾಡುತ್ತಿದ್ದಾರೆ.

  English summary
  Kannada comedy actors bank janardhan, umesha, honnavalli krishna, sudha narasimharaju are guest to bharjari comedy show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X