twitter
    For Quick Alerts
    ALLOW NOTIFICATIONS  
    For Daily Alerts

    ಗಣೇಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರು ಕನ್ನಡ ಚಿತ್ರರಂಗದ ನಾಯಕಿಯರು.!

    By Harshitha
    |

    Recommended Video

    Weekend With Ramesh 3: Ganesh Is The Last Guest Of This Show | Filmibeat Kannada

    ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಲು ಕನ್ನಡ ಚಿತ್ರರಂಗದ ನಾಯಕಿಯರು ಒಲ್ಲೆ ಎಂದಿದ್ದರಂತೆ.

    ಖಾಸಗಿ ವಾಹಿನಿಯೊಂದರಲ್ಲಿ 'ಕಾಮಿಡಿ ಟೈಮ್' ಪ್ರೋಗ್ರಾಂ ನಡೆಸಿಕೊಡುತ್ತಿದ್ದ ಗಣೇಶ್, ಹೀರೋ ಆದ ಮೊದಲ ಚಿತ್ರ 'ಚೆಲ್ಲಾಟ'ದಲ್ಲಿ ಗಣೇಶ್ ಜೊತೆ ತೆರೆಹಂಚಿಕೊಳ್ಳಲು ಅನೇಕ ನಟಿಯರು ನಿರಾಕರಿಸಿದ್ದರಂತೆ. 'ಚೆಲ್ಲಾಟ' ಕಥೆ ಕೇಳಿ ಇಷ್ಟ ಪಟ್ಟ ನಟಿಯರು, 'ಹೀರೋ ಗಣೇಶ್' ಎಂದ ಕೂಡಲೆ ಹಿಂದೆ ಸರಿಯುತ್ತಿದ್ದರಂತೆ.

    'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.? 'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?

    'ಚೆಲ್ಲಾಟ' ಸಿನಿಮಾ ಮಾಡುವಾಗ, ತಾವು ಮತ್ತು ಗಣೇಶ್ ಪಟ್ಟ ಕಷ್ಟವನ್ನ ನಿರ್ದೇಶಕ ಎಂ.ಡಿ.ಶ್ರೀಧರ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿವರಿಸಿದರು. ಎಲ್ಲವನ್ನ ಅವರ ಮಾತುಗಳಲ್ಲೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ....

    ಹೀರೋಯಿನ್ ಪಾತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇವೆ.!

    ಹೀರೋಯಿನ್ ಪಾತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇವೆ.!

    ''ಚೆಲ್ಲಾಟ' ಸಿನಿಮಾಗೆ ಆರ್ಟಿಸ್ಟ್ ಬೇಕಾಗಿತ್ತು. ಎಲ್ಲ ಭಾರ ನಮ್ಮಿಬ್ಬರ ತಲೆ ಮೇಲೆ ಬಿದ್ದಿತ್ತು. ಬೇರೆಲ್ಲ ಆರ್ಟಿಸ್ಟ್ ಗಳು ನಮಗೆ ಬೇಗ ಸಿಕ್ಕರು. ಆದ್ರೆ, ಹೀರೋಯಿನ್ ಪಾತ್ರಕ್ಕೆ ಮಾತ್ರ ನಾವು ತುಂಬಾ ಕಷ್ಟ ಪಟ್ಟಿದ್ದೇವೆ'' - ಎಂ.ಡಿ.ಶ್ರೀಧರ್, ನಿರ್ದೇಶಕ

    ಅತ್ತ ಭಾವುಕರಾದ ತಮ್ಮ ಮಹೇಶ್, ಇತ್ತ ಕಣ್ಣೀರಿಟ್ಟ ಅಣ್ಣ ಗಣೇಶ್ಅತ್ತ ಭಾವುಕರಾದ ತಮ್ಮ ಮಹೇಶ್, ಇತ್ತ ಕಣ್ಣೀರಿಟ್ಟ ಅಣ್ಣ ಗಣೇಶ್

    ಕಥೆ ಓಕೆ ಆಗುತ್ತಿತ್ತು, ಆದ್ರೆ...

    ಕಥೆ ಓಕೆ ಆಗುತ್ತಿತ್ತು, ಆದ್ರೆ...

    ''ಪ್ರತಿಯೊಂದು ಹೀರೋಯಿನ್ ಕೂಡ ಕಥೆಯನ್ನ ಓಕೆ ಮಾಡುತ್ತಿದ್ದರು. ಆದ್ರೆ, 'ಹೀರೋ' ಗಣೇಶ್ ಅಂತ ಗೊತ್ತಾದ ಮೇಲೆ ರಿಜೆಕ್ಟ್ ಮಾಡುತ್ತಿದ್ದರು'' - ಎಂ.ಡಿ.ಶ್ರೀಧರ್, ನಿರ್ದೇಶಕ

    'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!

    ದೊಡ್ಡ ಸಮಸ್ಯೆ

    ದೊಡ್ಡ ಸಮಸ್ಯೆ

    ''ನನಗೆ ಹಾಗೂ ಗಣೇಶ್ ಗೆ ಬಹಳ ನೋವಾಗುತ್ತಿತ್ತು. ಯಾರನ್ನ ಹೀರೋಯಿನ್ ಪಾತ್ರಕ್ಕೆ ಕೇಳುವುದು ಎನ್ನುವುದೇ ದೊಡ್ಡ ಸಮಸ್ಯೆ ಆಗಿತ್ತು. ನಂತರ ನಮಗೆ ಹೊಳೆದಿದ್ದೇ 'ಚಿತ್ರಾ' ರೇಖಾ'' - ಎಂ.ಡಿ.ಶ್ರೀಧರ್, ನಿರ್ದೇಶಕ

    ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?! ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

    ರೇಖಾ ರವರದ್ದು ದೊಡ್ಡ ಗುಣ

    ರೇಖಾ ರವರದ್ದು ದೊಡ್ಡ ಗುಣ

    ''ಆಗ ರೇಖಾ ಬೆಂಗಳೂರಿನಲ್ಲಿ ಇರಲಿಲ್ಲ. ಬಾಂಬೆಯಲ್ಲಿ ಇದ್ದರು. ರೇಖಾ ಆಗ ಫೋನ್ ನಲ್ಲಿ ಕಥೆ ಮಾತ್ರ ಕೇಳಿದರು. ಹೀರೋ ಬಗ್ಗೆ ಏನನ್ನೂ ಕೇಳಲಿಲ್ಲ. ನಿಜವಾಗಲೂ ಅವರದ್ದು ದೊಡ್ಡ ಗುಣ. ಗಣೇಶ್ ಹೀರೋ ಅಂತ ಹೇಳಿದ್ಮೇಲೆ, ಅಭ್ಯಂತರ ಇಲ್ಲ ಎಂದು ಅಭಿನಯಿಸಲು ಒಪ್ಪಿಕೊಂಡರು'' - ಎಂ.ಡಿ.ಶ್ರೀಧರ್, ನಿರ್ದೇಶಕ

    ಚಾಲೆಂಜ್ ಆಗಿ ಸ್ವೀಕರಿಸಿದ ಗಣೇಶ್

    ಚಾಲೆಂಜ್ ಆಗಿ ಸ್ವೀಕರಿಸಿದ ಗಣೇಶ್

    ''ಚೆಲ್ಲಾಟ' ಸಿನಿಮಾ ಮಾಡುವಾಗ ಗಣೇಶ್ ಗೆ ಮಾರ್ಕೆಟ್ ಇರಲಿಲ್ಲ. ಆದ್ರೆ, ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಪರ್ಫಾಮ್ ಮಾಡಿದರು. ಇವತ್ತು ಗಣೇಶ್ 'ಗೋಲ್ಡನ್ ಸ್ಟಾರ್' ಆಗಿದ್ದಾರೆ'' - ಎಂ.ಡಿ.ಶ್ರೀಧರ್, ನಿರ್ದೇಶಕ

    ಗಣೇಶ್ ರನ್ನ ಹೀರೋ ಮಾಡಿದ ಕ್ರೆಡಿಟ್ ಎಂ.ಡಿ.ಶ್ರೀಧರ್ ಗೆ ಸಲ್ಲಬೇಕು

    ಗಣೇಶ್ ರನ್ನ ಹೀರೋ ಮಾಡಿದ ಕ್ರೆಡಿಟ್ ಎಂ.ಡಿ.ಶ್ರೀಧರ್ ಗೆ ಸಲ್ಲಬೇಕು

    ''ಅವತ್ತು ಎಂ.ಡಿ.ಶ್ರೀಧರ್ ರವರು ''ತುಂಬಾ ನೆಗೆಟಿವ್ ಕಾಮೆಂಟ್ಸ್ ಬರುತ್ತಿದೆ. ಹೀರೋ ಆಗಿ ಗಣೇಶ್ ಬೇಡ'' ಅಂತ ಜಗದೀಶ್ ರವರಿಗೆ ಹೇಳಿಬಿಟ್ಟಿದ್ರೆ, 'ಚೆಲ್ಲಾಟ' ಸಿನಿಮಾದಿಂದ ಗಣೇಶ್ ಹೀರೋ ಆಗುತ್ತಿರಲಿಲ್ಲ. ಇವತ್ತು ನನ್ನನ್ನ ಹೀರೋ ಮಾಡಿದ ಅಷ್ಟೂ ಕ್ರೆಡಿಟ್ ಎಂ.ಡಿ.ಶ್ರೀಧರ್ ಗೆ ಸೇರಬೇಕು'' - ಗಣೇಶ್, ನಟ

    ಹಂಡ್ರೆಡ್ ಡೇಸ್ ಆಗುವಾಗ..

    ಹಂಡ್ರೆಡ್ ಡೇಸ್ ಆಗುವಾಗ..

    ''99 ದಿನ ಆಗಿದ್ದಾಗ, ಸಿನಿಮಾ ತೆಗೆಯಲು ವಿತರಕರು ಥಿಯೇಟರ್ ಮಾಲೀಕರ ಮೇಲೆ ಪ್ರೆಶರ್ ಹಾಕಿದರು. ಕಡೆಗೆ ಥಿಯೇಟರ್ ಮಾಲೀಕರು ನಮಗೆ ಸಪೋರ್ಟ್ ಮಾಡಿದ್ಮೇಲೆ, 'ಚೆಲ್ಲಾಟ' ಶತದಿನೋತ್ಸವ ಆಚರಿಸುವಂತಾಯ್ತು'' - ಎಂ.ಡಿ.ಶ್ರೀಧರ್, ನಿರ್ದೇಶಕ

    English summary
    Kannada Director M.D.Shridhar speaks about Ganesh in Zee Kannada Channel's popular show 'Weekend With Ramesh-3'
    Wednesday, July 5, 2017, 7:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X