For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಪ್ರೇಮ್ ಈ ಚಿತ್ರವನ್ನ ಮಾಡಲೇಬಾರದಾಗಿತ್ತಂತೆ.!

  By Harshitha
  |
  'ಆ' ಸಿನಿಮಾ ಮಾಡಿದ್ದಕ್ಕೆ ಈಗಲೂ ಕೊರಗುತ್ತಾರಂತೆ ಪ್ರೇಮ್ | Filmibeat Kannada

  'ಕರಿಯ', 'ಎಕ್ಸ್ ಕ್ಯೂಸ್ ಮಿ' ಮತ್ತು 'ಜೋಗಿ' ಚಿತ್ರಗಳನ್ನು ನಿರ್ದೇಶಿಸಿ, ಯಶಸ್ವಿಯಾಗಿ, 'ಹ್ಯಾಟ್ರಿಕ್ ಡೈರೆಕ್ಟರ್' ಎಂಬ ಹಣೆಪಟ್ಟಿ ಪಡೆದ ಪ್ರೇಮ್ ಬಳಿಕ 'ಪ್ರೀತಿ ಏಕೆ ಭೂಮಿ ಮೇಲಿದೆ?' ಎಂದು ಪ್ರಶ್ನಿಸುವ ಮೂಲಕ ನಾಯಕ ನಟರಾದರು.

  ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಪ್ರೀತಿ ಏಕೆ ಭೂಮಿ ಮೇಲಿದೆ.?' ಸಿನಿಮಾ ಬಿಡುಗಡೆ ಆದ್ಮೇಲೆ ಮಕಾಡೆ ಮಲಗಿತು. ಸ್ಯಾಂಡಲ್ ವುಡ್ ನಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ಪ್ರೇಮ್, ನಾಯಕನಾದ್ಮೇಲೆ ಮೊದಲ ಸೋಲು ಕಂಡರು.

  ಹೀಗಾಗಿ, 'ಪ್ರೀತಿ ಏಕೆ ಭೂಮಿ ಮೇಲಿದೆ.?' ಸಿನಿಮಾ ಮಾಡಲೇಬಾರದಿತ್ತು ಎಂಬ ವಿಷಾದ ಈಗಲೂ ನಿರ್ದೇಶಕ ಪ್ರೇಮ್ ರನ್ನ ಕಾಡುತ್ತಿದೆ. ಅದನ್ನೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್ ಹೊರಹಾಕಿದರು.

  ಪ್ರೀತಿ ಹುಡುಕುತ್ತಿರುವ ಪ್ರೇಮ್ ಗೆ ಐದೇ ಐದು ಪ್ರಶ್ನೆಗಳು!

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದರು.

  ಕಾರ್ಯಕ್ರಮದ ಮೊದಲ ಸೆಗ್ನೆಂಟ್ (ಸತ್ಯನಾ... ಧೈರ್ಯನಾ...) ಸತ್ಯ ಹೇಳಲು ಪ್ರೇಮ್ ರೆಡಿ ಆದರು. ಅಗ, ಪ್ರೇಮ್ ಗೆ ಎದುರಾದ ಮೊದಲ ಪ್ರಶ್ನೆ - ''ನೀವು ಡೈರೆಕ್ಷನ್ ಮಾಡಿರುವ ಚಿತ್ರಗಳ ಪೈಕಿ ಯಾವುದು ಮಾಡಬಾರದಿತ್ತು ಅಂತ ನಿಮಗೆ ಅನಿಸಿತ್ತು''. ಶಿವಣ್ಣ ಕೇಳಿದ ಈ ಪ್ರಶ್ನೆಗೆ ಪ್ರೇಮ್ ಕೊಟ್ಟ ಉತ್ತರ - ''ಪ್ರೀತಿ ಏಕೆ ಭೂಮಿ ಮೇಲಿದೆ''.

  English summary
  Kannada Director Prem regrets doing Kannada Movie 'Preethi Yake Bhoomi Melide'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X