twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್

    By ಫಿಲ್ಮ್ ಡೆಸ್ಕ್
    |

    ಡಬ್ಬಿಂಗ್ ಧಾರಾವಾಹಿಗಳು ಕನ್ನಡದಲ್ಲಿ ಬಂದಾಗ ಎರಡು ಬಗೆಯ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಡಬ್ಬಿಂಗ್ ಧಾರಾವಾಹಿಗಳನ್ನು ಜನರು ಒಪ್ಪಿಕೊಳ್ಳುತ್ತಾರೆಯೇ? ಡಬ್ಬಿಂಗ್ ಧಾರಾವಾಹಿಗಳೇ ತುಂಬಿಕೊಂಡರೆ ಸ್ಥಳೀಯ ಕಲಾವಿದರು ತಂತ್ರಜ್ಞರ ಭವಿಷ್ಯದ ಗತಿಯೇನು?

    Recommended Video

    ಸುಶಾಂತ್ ಮನದಾಳದ ನೋವಿನ‌ ಬಗ್ಗೆ ಅಕ್ಕ ಶ್ವೇತಾ ಸಿಂಗ್ ಬರೆದಿದ್ದೇನು? | Sushanth Singh Rajput Sister

    ಇವುಗಳಲ್ಲಿ ಒಂದು ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಡಬ್ಬಿಂಗ್ ಧಾರಾವಾಹಿಗಳನ್ನು ಜನರು ಸ್ವಾಗತಿಸಿದ್ದಾರೆ. ಕಳೆದ ಕೆಲವು ವಾರಗಳ ಟೆಲಿವಿಷನ್ ರೇಟಿಂಗ್ ಇದಕ್ಕೆ ಸಾಕ್ಷಿ. ಅದರಲ್ಲಿಯೂ ಮಹಾಭಾರತ, ರಾಧಾ-ಕೃಷ್ಣದಂತಹ ಪೌರಾಣಿಕ ಧಾರಾವಾಹಿಗಳನ್ನು ವೀಕ್ಷಕರು ಇಷ್ಟಪಡುತ್ತಿದ್ದಾರೆ. ಈ ರೀತಿಯ ಧಾರಾವಾಹಿಗಳಿಗೆ ಜನರು ಮನ್ನಣೆ ನೀಡುತ್ತಿದ್ದಾರೆ. ಹಾಗೆಯೇ ಕನ್ನಡದ ವೀಕ್ಷಕರು ನೋಡಿ ರೋಸಿರುವ ಮಾಮೂಲಿ ಕಥೆಯ ಧಾರಾವಾಹಿಗಳೂ ಬೇರೆ ಭಾಷೆಗಳಿಂದ ಡಬ್ ಆಗಿ ಬರುತ್ತಿದ್ದು, ಅವುಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದೆ ಓದಿ...

    'ಬುಸುಗುಡುತ್ತಿದೆ' ಡಬ್ಬಿಂಗ್ ಧಾರಾವಾಹಿ: ಬದಲಾಗಲಿದೆಯೇ ಕಿರುತೆರೆ?'ಬುಸುಗುಡುತ್ತಿದೆ' ಡಬ್ಬಿಂಗ್ ಧಾರಾವಾಹಿ: ಬದಲಾಗಲಿದೆಯೇ ಕಿರುತೆರೆ?

    ಕನ್ನಡಿಗರಿಗೆ ಇಷ್ಟವಾಗಿವೆ

    ಕನ್ನಡಿಗರಿಗೆ ಇಷ್ಟವಾಗಿವೆ

    ಪೌರಾಣಿಕ ಕಥೆಯ ಧಾರಾವಾಹಿಗಳು ಹಿಂದಿಯಲ್ಲಿ ಬಹಳ ಹಿಂದೆಯೇ ಬಂದಿವೆ. ಅವುಗಳನ್ನು ಡಬ್ಬಿಂಗ್ ಮೂಲಕ ತಮಿಳು ಮತ್ತು ತೆಲುಗು ಮುಂತಾದ ಭಾಷೆಯ ವೀಕ್ಷಕರು ಐದಾರು ವರ್ಷಗಳ ಹಿಂದೆಯೇ ನೋಡಿದ್ದಾರೆ. ನಮ್ಮವರಿಗೆ ಇದು ಹೊಸತು. ಈ ಮಟ್ಟದ ಗ್ರಾಫಿಕ್, ಗುಣಮಟ್ಟ ಮುಂತಾದವು ಜನರಿಗೆ ಇಷ್ಟವಾಗಿದೆ. ಈಗ ರಾಮಾಯಣ, ಮಹಾಭಾರತದ ಕಥೆಗಳನ್ನು ಓದು ಎಂದರೆ ಯಾರೂ ಓದುವುದಿಲ್ಲ. ಆದರೆ ಅವುಗಳನ್ನು ದೃಶ್ಯರೂಪದಲ್ಲಿ ಕೊಟ್ಟಾಗ ವರ್ಕೌಟ್ ಆಗುತ್ತದೆ ಎಂದು ಅವರು ವಿವರಿಸಿದರು.

    'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಸಿದ್ಧವಾಗುವ ಹಿಂದಿನ ಶ್ರಮವೇನು?: ಹತ್ತು ವರ್ಷದ ಹೋರಾಟ ಹೇಗಿತ್ತು?'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಸಿದ್ಧವಾಗುವ ಹಿಂದಿನ ಶ್ರಮವೇನು?: ಹತ್ತು ವರ್ಷದ ಹೋರಾಟ ಹೇಗಿತ್ತು?

    ಪೌರಾಣಿಕ ಧಾರಾವಾಹಿಗಳಿಗೆ ಒಪ್ಪಿಗೆ

    ಪೌರಾಣಿಕ ಧಾರಾವಾಹಿಗಳಿಗೆ ಒಪ್ಪಿಗೆ

    ಅವರ ಪ್ರಕಾರ ಡಬ್ಬಿಂಗ್‌ಅನ್ನು ಕನ್ನಡದ ಜನರು ಒಪ್ಪಿಕೊಂಡಿರುವುದು ಪೌರಾಣಿಕ ಧಾರಾವಾಹಿಗಳಲ್ಲಿ. ಹಿಂದಿ ಬಲ್ಲವರು ಅದನ್ನು ಮೂಲ ಭಾಷೆಯಲ್ಲಿ ನೋಡಿರಬಹುದು. ಆದರೆ ಅಪ್ಪಟ ಕನ್ನಡದ ವೀಕ್ಷಕರು ಕನ್ನಡದಲ್ಲಿ ಮೊದಲ ಬಾರಿ ಈ ಗ್ರಾಫ್‌ನ ಧಾರಾವಾಹಿಗಳನ್ನು ನೋಡುತ್ತಿದ್ದಾರೆ. ಈ ವೀಕ್ಷಕರು ಹುಡುಕಿಕೊಂಡು ಹೋಗಿ ಧಾರಾವಾಹಿ ನೋಡಿಲ್ಲ. ಮನೆ ಬಾಗಿಲಿಗೆ ಬಂದಿದ್ದನ್ನು ನೋಡುತ್ತಿದ್ದಾರೆ. ಗುಣಮಟ್ಟ, ಗ್ರಾಫಿಕ್ಸ್ ಮುಂತಾದವುಗಳ ಕಾರಣಕ್ಕೆ ಅವುಗಳನ್ನು ಒಪ್ಪಿಕೊಂಡಿದ್ದಾರೆ. ಅವುಗಳ ಗುಣಮಟ್ಟ ಕಡಿಮೆ ಇದ್ದರೆ ತಿರಸ್ಕರಿಸುತ್ತಾರೆ. ಹಾಗೆಯೇ ಅತ್ತೆ ಸೊಸೆ ಕಥೆಯ ಮಾಮೂಲಿ ಸಾಮಾಜಿಕ ವಸ್ತುಗಳ ಡಬ್ಬಿಂಗ್ ಇಲ್ಲಿ ವರ್ಕ್ ಆಗುವುದಿಲ್ಲ ಎನ್ನುತ್ತಾರೆ. ಅದಕ್ಕೆ ಕೆಲವು ವಾಹಿನಿಗಳು ಆರಂಭಿಸಿರುವ ಡಬ್ಬಿಂಗ್ ಧಾರಾವಾಹಿಗಳನ್ನು ಉದಾಹರಣೆಯಾಗಿ ನೀಡುತ್ತಾರೆ.

    ಕಷ್ಟವಿಲ್ಲ ಎನ್ನಲಾಗುವುದಿಲ್ಲ

    ಕಷ್ಟವಿಲ್ಲ ಎನ್ನಲಾಗುವುದಿಲ್ಲ

    ಕನ್ನಡದ ಕಲಾವಿದರು ಮತ್ತು ತಂತ್ರಜ್ಞರ ಅಳಲು ತಪ್ಪು ಎನ್ನಲಾಗುವುದಿಲ್ಲ. ಇಷ್ಟು ದಿನ ಕರ್ನಾಟಕದಲ್ಲಿ ಡಬ್ಬಿಂಗ್ ಧಾರಾವಾಹಿಗಳಿರಲಿಲ್ಲ. ಈಗ ಆರ್ಥಿಕ ಸಂಕಷ್ಟದಲ್ಲಿ ಸುಮಾರು 28 ಧಾರಾವಾಹಿಗಳು ನಿಂತಿವೆ. ಅವುಗಳಲ್ಲಿನ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅದರ ಸ್ಥಾನಗಳನ್ನು ಡಬ್ಬಿಂಗ್ ಧಾರಾವಾಹಿಗಳು ತುಂಬುತ್ತಿವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರೂ ಕಾನೂನಾತ್ಮಕವಾಗಿ ಅದು ಸಾಧ್ಯವಿಲ್ಲ. ಹಾಗೆ ತಡೆಯುತ್ತೇವೆ ಎನ್ನುವುದು ಅವರ ಭ್ರಮೆ. ಹಾಗೆಯೇ ಎಲ್ಲವೂ ಡಬ್ಬಿಂಗ್ ಧಾರಾವಾಹಿಗಳನ್ನೇ ಪ್ರಸಾರ ಮಾಡುತ್ತಿಲ್ಲ. ಪ್ರತಿ ವಾಹಿನಿಗಳು ಎರಡು ಅಥವಾ ಮೂರು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳಿಂದಲೂ ಅನೇಕರು ತೆರೆಯ ಹಿಂದೆ ಕೆಲಸ ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸುತ್ತಾರೆ.

    ಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿ

    ಮೂಲ ಧಾರಾವಾಹಿಗಳೇನೂ ಸೊರಗಿಲ್ಲ

    ಮೂಲ ಧಾರಾವಾಹಿಗಳೇನೂ ಸೊರಗಿಲ್ಲ

    ಈಗ ಡಬ್ಬಿಂಗ್ ಮುಕ್ತವಾಗಿರುವುದರಿಂದ ಬಾಕಿ ಇರುವ ಅನೇಕ ಧಾರಾವಾಹಿಗಳು ಒಂದೇ ಸಮನೆ ಕನ್ನಡ ಮಾರುಕಟ್ಟೆಗೆ ಮುನ್ನುಗ್ಗುತ್ತಿವೆ. ಆದರೆ ಅವುಗಳು ಮುಗಿದ ಬಳಿಕ? ಮತ್ತೆ ಇಲ್ಲಿ ಧಾರಾವಾಹಿಗಳನ್ನು ಸೃಷ್ಟಿಸಬೇಕು. ಇಲ್ಲಿ ಗಮನಿಸಬೇಕಾದ ಕೆಲವು ಸಂಗತಿಗಳಿವೆ. ಪೌರಾಣಿಕ ಧಾರಾವಾಹಿಗಳಿಗೆ ಅಧಿಕ ಸಂಖ್ಯೆಯಲ್ಲಿ ರೇಟಿಂಗ್ ಬರುತ್ತಿವೆ. ಕೆಲವು ವಾಹಿನಿಗಳಿಗೆ ಯಾವ ಧಾರಾವಾಹಿಗೂ ಅಷ್ಟು ರೇಟಿಂಗ್ ಬಂದಿರಲಿಲ್ಲ. ಈ ಹಿಂದಿನಿಂದ ಪ್ರಸಾರವಾಗುತ್ತಿರುವ, ಇಲ್ಲೇ ತಯಾರಾದ ಗಟ್ಟಿಮೇಳ, ಜೊತೆ ಜೊತೆಯಲಿ, ಮಂಗಳ ಗೌರಿ ಮದುವೆ, ಸೀತಾ ವಲ್ಲಭ ಮುಂತಾದ ಧಾರಾವಾಹಿಗಳಿಗೆ ಈ ಹಿಂದೆ ಬರುತ್ತಿದ್ದಷ್ಟೇ ರೇಟಿಂಗ್ ಬರುತ್ತಿವೆ. ಅಂದರೆ ಡಬ್ಬಿಂಗ್ ಧಾರಾವಾಹಿಗಳ ಇಲ್ಲಿನ ಮೂಲ ಧಾರಾವಾಹಿಗಳಿಗೆ ಹೊಡೆತ ನೀಡಿಲ್ಲ ಎಂದು ಅವರು ಹೇಳಿದರು.

    ಬದಲಾವಣೆ ಬಯಸುತ್ತಾರೆ

    ಬದಲಾವಣೆ ಬಯಸುತ್ತಾರೆ

    ಮುಂದೆ ಇರುವುದು ಧಾರಾವಾಹಿ ನಿರ್ದೇಶಕರ ಎದುರು ಬೃಹತ್ ಸವಾಲು. ಅವರು ಇನ್ನು ಮುಂದೆ ಅದ್ಭುತ ಕಂಟೆಂಟ್ ನೀಡಬೇಕು. ಅದೇ ಅತ್ತೆ ಸೊಸೆ ಕಥೆ ಇಟ್ಟುಕೊಂಡರೆ ಜನ ಒಪ್ಪುವುದಿಲ್ಲ. ಜನರು ಅದಕ್ಕಿಂತ ಗುಣಮಟ್ಟದ ಕಥೆ ಮತ್ತು ಗ್ರಾಫಿಕ್ ಬಯಸುತ್ತಾರೆ. ಇದು ಡಬ್ಬಿಂಗ್‌ನಿಂದ ಆಗಿರುವ ಪಾಸಿಟಿವ್ ಬೆಳವಣಿಗೆ. ಒಳ್ಳೆಯ ಕಂಟೆಂಟ್ ಇರುವ ಕಥೆ ಕೊಟ್ಟರೆ ಚಾನೆಲ್‌ನವರು ಕೂಡ ಡಬ್ಬಿಂಗ್ ಧಾರಾವಾಹಿ ಪ್ರಸಾರ ಮಾಡೊಲ್ಲ. ಅದೇ ಮುಖ ಮುಖ ನೋಡುವ ಸನ್ನಿವೇಶಗಳಿಗೆ ಒಂದು ಎಪಿಸೋಡ್ ಮುಗಿಸುವ ಅತ್ತೆ ಸೊಸೆ ಕಾದಾಟದ ಧಾರಾವಾಹಿಗಳಾದರೆ ನೋಡುವ ಸಂಯಮ ವೀಕ್ಷಕರಿಗೆ ಇರುವುದಿಲ್ಲ.

    ಮಲಯಾಂ ಉದಾಹರಣೆಯಾಗಲಿ

    ಮಲಯಾಂ ಉದಾಹರಣೆಯಾಗಲಿ

    ಕನ್ನಡ ಧಾರಾವಾಹಿ ತಂತ್ರಜ್ಞರ ಮುಂದೆ ಬಹಳ ಸವಾಲುಗಳಿವೆ. ಒಟಿಟಿ ಮತ್ತು ಡಬ್ಬಿಂಗ್ ಕಾರ್ಯಕ್ರಮಗಳ ಮಟ್ಟಕ್ಕೆ ಕಂಟೆಂಟ್ ಕೊಟ್ಟರೆ ಮಾತ್ರ ಜನರಿಗೆ ಮನರಂಜನೆ. ಇಷ್ಟು ದಿನ ಅವರಿಗೆ ಈ ಸವಾಲುಗಳು ಇರಲಿಲ್ಲ. ಈಗ ಸವಾಲುಗಳು ಬರುತ್ತಿವೆ. ಮಲಯಾಳಂನ ಬೆಳವಣಿಗೆಯನ್ನು ನಾವು ನೋಡಬೇಕು. ಬಿಗ್ರೇಡ್ ಚಿತ್ರಗಳಿಂದ ತುಂಬಿದ್ದ ಸಿನಿಮಾ ರಂಗವನ್ನು ಟೊಂಕಕಟ್ಟಿ ನಿಂತು ಬದಲಿಸಿದರು. ಈಗ ಅಲ್ಲಿನ ಸಿನಿಮಾ ಸಕ್ಸಸ್ ರೇಟ್ ಆರು ಪರ್ಸೆಂಟ್ ಇದೆ. ಕನ್ನಡದಲ್ಲಿ ಮೂರು ಪರ್ಸೆಂಟ್. ಡಬ್ಬಿಂಗ್ ಬರುವುದರಿಂದ ಕನ್ನಡ ಕಿರುತೆರೆಯ ವ್ಯಾಕರಣ ಬದಲಾಗುತ್ತದೆಯೇ? ಖಂಡಿತಾ ಬದಲಾಗುತ್ತಿದೆ, ಬದಲಾಗಿದೆ ಎಂದು ಅವರು ವಿವರಿಸಿದರು.

    English summary
    Dubbing serials in Kannada attracting more viewers. Mythological serials got good ratings in BARC.
    Saturday, June 20, 2020, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X