TV Serial TRP Ratings : ಜನ ಮೆಚ್ಚಿದ ಅತ್ತೆ ಸೊಸೆ: ಹಿಟ್ಲರ್ ಕಲ್ಯಾಣ, ಪುಟ್ಟಕ್ಕ, ಗಟ್ಟಿಮೇಳದ ಕಥೆಯೇನು?

By ಎಸ್ ಸುಮಂತ್

ವಾರ ವಾರಕ್ಕೆ ಧಾರಾವಾಹಿಗಳಲ್ಲಿ ಏರಿಳಿತವಾಗುವುದು ಸಹಜ. ಮೊದ ಮೊದಲಿಗೆ ಬಂದ ಧಾರಾವಾಹಿಗಳು ಕಥೆಯಲ್ಲಿ ಇಂಟ್ರೆಸ್ಟಿಂಗ್ ಎನಿಸಿದರೆ ಜನರನ್ನು ಸೆಳೆಯುತ್ತವೆ. ಕಥೆಯಲ್ಲಿ ಸ್ವಲ್ಪ ಬೋರಾದರೂ ಜನ ಮತ್ತೊಂದು ಧಾರಾವಾಹಿಗೆ ಶಿಫ್ಟ್ ಆಗುತ್ತಾರೆ. ಜನರನ್ನು ತನ್ನ ಕಡೆಗೆ ಇರಿಸಿಕೊಂಡು ಹೋಗುವುದು ಧಾರವಾಹಿಗಳಿಗೆ ಒಂದು ರೀತಿಯ ಸವಾಲಿನ ಕೆಲಸವೇ ಸರಿ. ಅದಕ್ಕಾಗಿಯೇ ಇಂದು ಧಾರಾವಾಹಿಗಳು ಕೋಟಿ ಲೆಕ್ಕದಲ್ಲಿ ತಯಾರಾಗುತ್ತಿವೆ. ಯಾವ ಸಿನಿಮಾಗೂ ಕಡಿಮೆ ಇಲ್ಲವೆಂಬಂತೆ ಚಿತ್ರೀಕರಣವಾಗುತ್ತಿವೆ.

ಟಿಆರ್‌ಪಿಯಲ್ಲಿ ಮುಂದೆ ಇರಲೇಬೇಕು ಎಂಬ ಕಾರಣಕ್ಕೆ ಧಾರಾವಾಹಿಯ ಕ್ವಾಲಿಟಿಯಲ್ಲೂ ಕಾಂಪ್ರಮೈಸ್ ಆಗದ ರೀತಿಯಲ್ಲಿ ಧಾರಾವಾಹಿಗಳ ನಿರ್ಮಾಣವಾಗುತ್ತಿವೆ. ಒಂದು ಕಾಲದಲ್ಲಿ ಉದಯ ಟಿವಿಯನ್ನು ಧಾರಾವಾಹಿಯಲ್ಲಿ ಮೀರಿಸುವ ಶಕ್ತಿ ಯಾರಿಗೂ ಇರಲಿಲ್ಲ. ಆದ್ರೀಗ ಜೀ ಕನ್ನಡ ಆ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸ್ಟಾರ್ ಸುವರ್ಣ, ಉದಯಟಿವಿ ಸೇರಿದಂತೆ ಬಹುತೇಕ ಮನರಂಜನಾ ವಾಹಿನಿಗಳು ಪೈಪೋಟಿಗೆ ಇಳಿದಿವೆ.

ಪುಟ್ಟಕ್ಕ ಎಂದರೆ ಎಲ್ಲರಿಗೂ ಇಷ್ಟ

ಪುಟ್ಟಕ್ಕ ಎಂದರೆ ಎಲ್ಲರಿಗೂ ಇಷ್ಟ

ಪುಟ್ಟಕ್ಕನ ಮಕ್ಕಳು ಶುರುವಾದಾಗಿನಿಂದ ನಂಬರ್ ಒನ್ ಸ್ಥಾನದಲ್ಲಿಯೇ ಇದೆ. ಹಳ್ಳಿ ಸೊಗಡಿನ ಕಥೆ ಇದಾಗಿರುವ ಕಾರಣ, ಜನ ಮೆಚ್ಚಿದ ಧಾರಾವಾಹಿಯಾಗಿದೆ. ದಿನೇ ದಿನೇ ಹೊಸ ಹೊಸ ರೀತಿ ಟ್ವಿಸ್ಟ್ ನೀಡುತ್ತಿದೆ. ಈಗಂತೂ ಕಂಠಿಯ ಮದುವೆ, ಪ್ರೀತಿ ಎರಡು ಜಗ್ಗಾಟದಲ್ಲಿ ನೊಂದಿದ್ದಾನೆ. ಯಾವಾಗ ಕಂಠಿ ರೊಚ್ಚಿಗೆದ್ದು ತನ್ನ ಪ್ರೀತಿಯನ್ನು ಹೇಳುತ್ತಾನೋ ಎಂಬ ಕಾತುರ ಜನರ ಮನಸ್ಸಲ್ಲಿ ಇದೆ. ಹೀಗಾಗಿ ನೋಡುಗರ ಸಂಖ್ಯೆಯನ್ನು ಎಲ್ಲಿಯೂ ಕಳೆದುಕೊಂಡಿಲ್ಲ. ಅದೇ ಉತ್ಸಾಹದಿಂದ ಪುಟ್ಟಕ್ಕ ಮುನ್ನುಗ್ಗುತ್ತಿದ್ದಾರೆ.

ಎಜೆ, ವೇದಾಂತ್‌ಗೆ ಹಿನ್ನಡೆಯಿಲ್ಲ

ಎಜೆ, ವೇದಾಂತ್‌ಗೆ ಹಿನ್ನಡೆಯಿಲ್ಲ

ಹಿಟ್ಲರ್ ಕಲ್ಯಾಣ ಧಾರಾವಾಹಿ ಲೀಲಾ ಮದುವೆಯಾದ ಮೇಲೆ ಅತ್ತೆ ಮತ್ತು ಸೊಸೆಯಂದಿರ ನಡುವಿನ ಭಿನ್ನಾಭಿಪ್ರಾಯ, ಅದೇ ಕೆಡುಕು ಬುದ್ದಿ, ಅದೇ ಕುತಂತ್ರದಿಂದ ಸಾಗುತ್ತಾ ಇತ್ತು. ಎಜೆ ಮತ್ತು ಲೀಲಾ ನಡುವೆ ಪ್ರೀತಿಯಾದರೆ ಹೇಗಿರುತ್ತೆ ಎಂದು ನೋಡುವ ತವಕ ಪ್ರೇಕ್ಷಕರದ್ದು ಆ ಸಂದರ್ಭ ಈಗೀಗ ಶುರುವಾಗುತ್ತಿದೆ. ಹೀಗಾಗಿ ಲೀಲಾ ಮತ್ತು ಎಜೆ ಪ್ರೀತಿಗೆ ಒಪ್ಪಿ ಎರಡನೇ ಸ್ಥಾನ ನೀಡಿದ್ದಾರೆ. ಇನ್ನು ಗಟ್ಟಿಮೇಳದಲ್ಲಿ ವೈದೇಹಿಯ ಹುಡುಕಾಟ ನೋಡುಗರಿಗೆ ಟ್ವಿಸ್ಟ್ ಕೊಟ್ಟಿದೆ. ಅಮ್ಮನ ಬಾಂಧವ್ಯ, ಕಣ್ಣ ಮುಂದೆಯೇ ಇದ್ದರು ಕಂಡು ಹಿಡಿಯಲಾಗದ ವೇದನೆ, ಸುಹಾಸಿನಿ ಫೇಲ್ಯೂರ್ ಎಲ್ಲವೂ ಪ್ರೇಕ್ಷಕರ ಕುತೂಹಲಕ್ಕೆ ಒಂದಷ್ಟು ಖುಷಿ ನೀಡಿದೆ. ಹೀಗಾಗಿ ಮೂರನೇ ಸ್ಥಾನದಲ್ಲಿದೆ.

ಅಖಿಲಾ- ಪಾರು ಬಗ್ಗೆ ಮೆಚ್ಚುಗೆ

ಅಖಿಲಾ- ಪಾರು ಬಗ್ಗೆ ಮೆಚ್ಚುಗೆ

ಪಾರು ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಸಿಗುತ್ತಿದೆ. ಪಾರುಳನ್ನು ಕಂಡರ ಆಗದಂತೆ ಇದ್ದ ಅಖಿಲಾ ಈಗ ತುಂಬಾನೇ ಪ್ರೀತಿ ಮಾಡುತ್ತಿದ್ದಾರೆ. ಅರಸನ ಕೋಟೆಗೆ ತಕ್ಕನಾದ ಸೊಸೆ ಎಂದು ಭಾವಿಸಿ, ಪ್ರೀತಿಸುತ್ತಿದ್ದಾರೆ. ಇದರ ನಡುವೆ ಶತ್ರುಗಳ ಕಾಟಕ್ಕೆ ಮತ್ತೊಬ್ಬ ಮಗ ಸಿಲುಕಿದ್ದಾನೆ. ಈ ಎಲ್ಲಾ ಸಮಸ್ಯೆಯನ್ನು ಮತ್ತೆ ಅಖಿಲಾಂಡೇಶ್ವರಿ ಹೇಗೆ ಬಗೆಹರಿಸಿ, ಮನೆಯ ಸುಖವನ್ನು ಕಾಪಾಡುತ್ತಾಳೆ ಎಂಬುದೇ ಕುತೂಹಲ. ಹೀಗಾಗಿ ಕಳೆದ ಬಾರಿ ಆರನೇ ಸ್ಥಾನದಲ್ಲಿದ್ದ ಧಾರಾವಾಹಿ ಈಗ ಎರಡು ಸ್ಥಾನ ಮುಂದಕ್ಕೆ ಜಿಗಿದಿದೆ. ನಾಲ್ಕನೆ ಸ್ಥಾನಕ್ಕೆ ಬಂದು ಕೂತಿದೆ.

ಸ್ಟಾರ್ ಸುವರ್ಣ ಯಾವ ಸ್ಥಾನದಲ್ಲಿದೆ?

ಸ್ಟಾರ್ ಸುವರ್ಣ ಯಾವ ಸ್ಥಾನದಲ್ಲಿದೆ?

ಇನ್ನು ಸ್ಟಾರ್ ಸುವರ್ಣ, ಉದಯ ಟಿವಿಯಲ್ಲೂ ಧಾರಾವಾಹಿಗಳು ನಾ ಮುಂದು ತಾ ಮುಂದು ಎಂಬಂತೆ ಕಾಂಪಿಟೇಷನ್ ನೀಡುತ್ತಿವೆ. ಅದರಲ್ಲೂ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿ ಎಂಟನೇ ಸ್ಥಾನದಲ್ಲಿದ್ದು, ಬೆಟ್ಟದ ಹೂ ಕೂಡ ಅದರ ನೆಕ್ಸ್ಟ್ ಸ್ಥಾನ ಪಡೆದಿದೆ. ಬೆಟ್ಟದ ಹೂ ಧಾರಾವಾಹಿ ಹಳ್ಳಿಯಿಂದ ಅನಿವಾರ್ಯ ಕಾರಣಕ್ಕೆ ಮದುವೆಯಾಗಿ ಬಂದ ಹೂವಿ ಬದುಕು ಶಿಕ್ಷಣದಿಂದ ಯಾವ ರೀತಿ ಬದಲಾಗಬಹುದು ಎಂಬ ಘಟ್ಟದಲ್ಲಿ ಸಾಗುತ್ತಿದೆ.

More from Filmibeat

English summary
Kannada Entertainment Channel This Week TRP List. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X