For Quick Alerts
  ALLOW NOTIFICATIONS  
  For Daily Alerts

  'ಕಮಲಿ' ಧಾರಾವಾಹಿಯ ರಿಷಿಗೆ ಅಡುಗೆ ಮಾಡೋದಂದ್ರೆ ಇಷ್ಟ

  |

  ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲಿ ಕಮಲಿ ಧಾರಾವಾಹಿ ಕೂಡ ಒಂದು. ಈಗಾಗಲೆ ಸಾಕಷ್ಟು ಜನಪ್ರಿಯತೆಗಳಿಸಿರುವ ಈ ಸೀರಿಯಲ್ ನ ನಾಯಕ ರಿಷಿ ಬಗ್ಗೆ ನಿಮಗೆ ಗೊತ್ತಾ? ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ರಿಷಿ ಮುದ್ದಾದ ಅಭಿನಯದ ಮೂಲಕ ಎಲ್ಲರ ಹೃದಯ ಗೆದ್ದಿರುವ ರಿಷಿಯ ನಿಜವಾದ ನಾಮದೇಯ ನಿರಂಜನ್.

  ನಿರಂಜನ್ ಅಂತ ಹೇಳೋದಕ್ಕಿಂತ ರಿಷಿ ಅಂತಾನೆ ಮನೆ ಮಾತಾಗಿರುವ ನಿರಂಜನ್, ಕಮಲಿ ಧಾರವಾಹಿಗೂ ಮೊದಲು ಸಹ ಬಣ್ಣ ಹಚ್ಚಿದ್ದಾರೆ. ಆದ್ರೆ ಖ್ಯಾತಿಗಳಿಸಿದ್ದು ಕಮಲಿ ಧಾರಾವಾಹಿಯಿಂದ. ಈ ಮೊದಲು ಗಾಂಧಾರಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ನಿರಂಜನ್ ಗೆ ಹೇಳುವಷ್ಟು ಹೆಸರು ತಂದುಕೊಟ್ಟಿರಲಿಲ್ಲ.

  ರಾಯಭಾರಿ ಪಾರುವಿನ ರಾಯಲ್ ಫೋಟೋಶೂಟ್ ರಾಯಭಾರಿ ಪಾರುವಿನ ರಾಯಲ್ ಫೋಟೋಶೂಟ್

  ಆದ್ರೀಗ ಕಮಲಿಯಲ್ಲಿ ಪಾಠ ಹೇಳುತ್ತ ಕಮಲಿಯ ಪ್ರೀತಿಯ ಬಲೆಯಲ್ಲಿ ಬಂದಿಯಾಗಿರುವ ರಿಷಿ ಯುವತಿಯರ ಪಾಲಿನ ಡ್ರೀಮ್ ಬಾಯ್ ಆಗಿದ್ದಾರೆ. ರಿಷಿಯ ಮುದ್ದಾದ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದಾರೆ. ಕಮಲಿ ಮತ್ತು ರಿಷಿ ಜೋಡಿ ಕಿರುತೆರೆಯ ಹಿಟ್ ಪೇರ್ ಗಳಲ್ಲಿ ಒಂದಾಗಿದೆ. ಅಂದ್ಹಾಗೆ ರಿಷಿ ಬಿಡುವಿನ ವೇಳೆಯಲ್ಲಿ ಏನ್ಮಾಡ್ತಿರ್ತಾರೆ ಗೊತ್ತಾ? ಮುಂದೆ ಓದಿ..

  ಅಮ್ಮನ ಜೊತೆ ಅಡುಗೆ ಮಾಡ್ತಾರೆ ರಿಷಿ

  ಅಮ್ಮನ ಜೊತೆ ಅಡುಗೆ ಮಾಡ್ತಾರೆ ರಿಷಿ

  ಕನ್ನಡ ಕಿರುತೆರೆಪ್ರಿಯರ ಮನೆ ಮಗನಾಗಿರುವ ರಿಷಿಗೆ ಅವರ ಅಮ್ಮನೆ ಪ್ರಪಂಚ. ರಿಷಿ ಪಕ್ಕಾ ಅಮ್ಮನ ಮಗನಂತೆ. ಹೆಚ್ಚು ಸಮಯ ಚಿತ್ರೀಕರಣದಲ್ಲೆ ಬ್ಯುಸಿ ಇರುವ ರಿಷಿ ಬಿಡುವು ಸಿಕ್ಕಾಗಲೆಲ್ಲ ಅಮ್ಮನ ಜೊತೆ ಇರ್ತಾರೆ. ಅಷ್ಟೆಯಲ್ಲ ಅಡುಗೆ ಕೂಡ ಮಾಡ್ತಾರೆ. ಅಮ್ಮನ ಜೊತೆ ಸೇರಿಕೊಂಡು ವಿಶೇಷವಾದ ಅಡುಗೆ ಅಡುಗೆ ಮಾಡಿ ಸಂತಸ ಪಡುತ್ತಾರಂತೆ.

  ಜಿಮ್ ನಲ್ಲಿ ವರ್ಕೌಟ್ ಮಾಡ್ತಾರೆ

  ಜಿಮ್ ನಲ್ಲಿ ವರ್ಕೌಟ್ ಮಾಡ್ತಾರೆ

  ನಟರು ಅಂದ್ಮೇಲೆ ಯಾವಾಗಲು ಫಿಟ್ ನೆಸ್ ಕಡೆ ಹೆಚ್ಚು ಗಮನ ಕೊಡುತ್ತಾರೆ. ತೆರೆಮೇಲೆ ಸುಂದರವಾಗಿ ಮಿಂಚಬೇಕು ಅಂದ್ರೆ ಫಿಟ್ ಅಂಡ್ ಫೈನ್ ಆಗಿವುದು ಪ್ರಮುಕವಾಗುತ್ತೆ. ಅದಕ್ಕೆ ರಿಷಿ ಕೂಡ ಏನು ಹೊರತಾಗಿಲ್ಲ. ರಿಷಿ ಸಾಕಷ್ಟು ಸಮಯ ಜಿಮ್ ನಲ್ಲಿ ವರ್ಕೌಟ್ ಮಾಡ್ತಾರೆ. ರಿಷಿ ಕೂಡ ಸದಾ ಫಿಟ್ ಅಂಡ್ ಫೈನ್ ಆಗಿರಲು ಇಷ್ಟ ಪಡುತ್ತಾರೆ. ಜಿಮ್ ನಲ್ಲಿ ಹೆಚ್ಚಾಗಿ ಸೈಕ್ಲಿಂಗ್ ಮಾಡೋದಂದ್ರೆ ತುಂಬಾ ಇಷ್ಟಪಡ್ತಾರಂತೆ.

  ಸಾವಿನ ಬಾಗಿಲು ತಟ್ಟಿ ಗೆದ್ದು ಬಂದ 'ಫೈಟರ್' ಗಿರೀಶ್ ಯಶೋಗಾಥೆಸಾವಿನ ಬಾಗಿಲು ತಟ್ಟಿ ಗೆದ್ದು ಬಂದ 'ಫೈಟರ್' ಗಿರೀಶ್ ಯಶೋಗಾಥೆ

  ಜನರನ್ನು ನೋಡಿಯೆ ನಟನೆ ಕಲಿತಾರೆ

  ಜನರನ್ನು ನೋಡಿಯೆ ನಟನೆ ಕಲಿತಾರೆ

  ತೆರೆಮೇಲೆ ಅದ್ಬುತವಾಗಿ ಅಭಿನಯಸುವ ರಿಷಿ ಹೆಚ್ಚಾಗಿ ಜನರನ್ನು ನೋಡಿಯೆ ನಟನೆ ಇಂಪ್ರೂ ಮಾಡ್ಕೋತಾರಂತೆ. ಹೊರಗಡೆ ಹೋದಾಗ ಸಮ್ಮನೆ ಹಾಗೆ ಸುತ್ತಾಡಿಕೊಂಡು ಬರುವುದಕ್ಕಿಂತ, ಜನರ ಹಾವ ಭಾವಗಳನ್ನು ಗಮನಿಸುತ್ತಿರುತ್ತಾರೆ ರಿಷಿ. ಹಾಗಾಗಿಯೆ ಸಹಜವಾಗಿ ಅಭಿನಯಿಸು ಸಾಧ್ಯ ಎನ್ನುವುದು ರಿಷಿಯ ಮಾತು.

  ರಿಷಿ ಪ್ರಕಾರ ನಟನೆ ಅಂದ್ರೆ?

  ರಿಷಿ ಪ್ರಕಾರ ನಟನೆ ಅಂದ್ರೆ?

  ಕಮಲಿಯ ಮುದ್ದಿನ ಪ್ರೇಮಿ, ಅಭಿಮಾನಿಗಳ ಪ್ರೀತಿಯ ರಿಷಿ ಪ್ರಕಾರ ಅಭಿನಯ ಅಂದ್ರೆ ಗಮನಿಸುವುದ್ದಂತೆ. ಬೇರೆಯವರನ್ನು ಹೆಚ್ಚು ಗಮನಿಸಿದ್ರೆ ನಟನೆ ಸಹಜವಾಗಿ ಮಾಡಬಹುದು ಎನ್ನುವುದು ಅವರ ಮಾತು. ಕಿರುತೆರೆಯ ಸಿಂಪಲ್ ಹುಡುಗ ಅಂತಾನೆ ಗುರುತಿಸಿಕೊಂಡಿದ್ದಾರೆ. ಕಮಲಿ ಧಾರಾವಾಹಿಯಲ್ಲಿ ಈಗ ರಿಷಿ ಕಮಲಿಯನ್ನು ಮದುವೆ ಆಗಲು ರೆಡಿಯಾಗುತ್ತಿದ್ದಾರೆ.

  English summary
  Kannada famous serial actor Niranjan likes cooking. in free time niranjan cooks with his mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X