For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟಿ ಮಾಯಾ

  |

  ಕಿರುತೆರೆಯಲ್ಲಿ ಮದುವೆ ಸುಗ್ಗಿ ಪ್ರಾರಂಭವಾಗಿದೆ. ಧ್ರುವ ಸರ್ಜಾ ಮದುವೆಗೆ ಸ್ಯಾಂಡಲ್ ವುಡ್ ಸಜ್ಜಾಗುತ್ತಿದ್ದಾರೆ, ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮ ನಡೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೆ 'ಕುಲವಧು' ಧಾರಾವಾಹಿ ಖ್ಯಾತಿಯ ನಟಿ ದೀಪಿಕಾ ಹಸೆಮಣೆ ಏರಿದ ಬೆನ್ನಲ್ಲೆ, ಈಗ ಮತ್ತೋರ್ವ ಖ್ಯಾತ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  'ಅಗ್ನಿಸಾಕ್ಷಿ' ಧಾರಾವಾಹಿಯ ನಟಿ ಇಶಿತಾವರ್ಷ ಬಹುಕಾಲದ ಗೆಳೆಯ ಮುರುಗಾನಂದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಶಿತಾವರ್ಷ ವರ್ಷ ಎನ್ನುವುದಕ್ಕಿಂತ ಮಾಯಾ ಎಂದರೆ ದಿಢೀರನೆ ಗೊತ್ತಾಗುತ್ತೆ. ಮಾಯಾ ಹೆಸರಿನ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಇತಿಶಾ ಕೊರಿಯೋಗ್ರಾಫರ್ ಮುರುಗಾನಂದ ಅವರ ಕೈ ಹಿಡಿದಿದ್ದಾರೆ.

  ಮದುವೆ ಸಂಭ್ರಮದಲ್ಲಿ ಕಿರುತೆರೆಯ ಖ್ಯಾತ ನಟಿ ದೀಪಿಕಾಮದುವೆ ಸಂಭ್ರಮದಲ್ಲಿ ಕಿರುತೆರೆಯ ಖ್ಯಾತ ನಟಿ ದೀಪಿಕಾ

  ಇಶಿತಾ ಧಾರಾವಾಹಿಯ ಜೊತೆಗೆ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ದೊಡ್ಡ ಪರೆದೆಯಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಇಶಿತಾ ಕೈ ಹಿಡಿದಿರುವ ಮುರುಗಾನಂದ್ ಕೊರಿಯೋಗ್ರಾಫರ್ ಆಗಿ ಕೆಲಸಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ ಮುರುಗಾನಂದ್.

  ಅದ್ದೂರಿಯಾಗಿ ನಡೆದ ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಸಾಕ್ಷಿಯಾದರು. ನವ ಜೋಡಿಗೆ ಕಿರುತೆರೆ ಪ್ರೇಕ್ಷಕರಿಂದ ಶುಭಾಶಯಗಳು ಹರಿದು ಬರುತ್ತಿವೆ. ಇಬ್ಬರ ಮದುವೆಗೆ ಕಿರುತೆರೆಯ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು, ಜೊತೆಗೆ ಅಗ್ನಿಸಾಕ್ಷಿ ಧಾರಾವಾಹಿಯ ತಂಡ ಗ್ರ್ಯಾಂಡ್ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಧಾರಾವಾಹಿಯಲ್ಲಿ ಇಶಿತಾ ವಿಲನ್ ಚಂದ್ರಿಕಾ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Famous serial artist Ishita Varsha getting married to choreographer Muruganand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X